ಕೇಂದ್ರದ ಮಹತ್ವದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ದೇಶದ ರೈತರಿಗೆ 14 ನೇ ಕಂತಿನ ಹಣವನ್ನು ಹಾಕಲಾಗುತ್ತಿದ್ದು, ಇತ್ತೀಚಿನ ಮಾಹಿತಿಯ ಪ್ರಕಾರ, ಇದೇ ಜುಲೈ 28 ರಂದು, 14 ನೇ ಕಂತಿನ 2 ಸಾವಿರ ರೂ.ಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರವು ಸುಮಾರು 9 ಕೋಟಿ ರೈತರ ಖಾತೆಗೆ ಸಮ್ಮಾನ್ ನಿಧಿಯ ಹಣವನ್ನು ಕಳುಹಿಸಲಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ಪ್ರತಿ ವರ್ಷ 6,000 ರೂಪಾಯಿಗಳ ಆರ್ಥಿಕ ನೆರವು ನೀಡುತ್ತಿದ್ದು, ಈ ಮೊತ್ತವನ್ನು ವರ್ಷಕ್ಕೆ ಮೂರು ಬಾರಿ ತಲಾ 2,000 ರೂ.ಗಳ ಕಂತುಗಳಲ್ಲಿ ರೈತರ ಖಾತೆಗಳಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದೆ. ಈವರೆಗೆ 13 ಕಂತುಗಳನ್ನು ರೈತರ ಖಾತೆಗಳಿಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಇದೆ.
ರೈತರು ಪಿಎಂ ಕಿಸಾನ್ ಹಣವನ್ನು ಪಡೆಯಬೇಕಾದರೆ, ಖಾತೆಯ ಇ-ಕೆವೈಸಿ ಕಡ್ಡಾಯವಾಗಿರುತ್ತದೆ. ರೈತರಿಗೆ 14 ನೇ ಕಂತಿನ ಪ್ರಯೋಜನವನ್ನು ಪಡೆಯಲು, ಪಿಎಂ ಕಿಸಾನ್ ಖಾತೆಯ ಇ-ಕೆವೈಸಿ ಮಾಡುವುದು ಬಹಳ ಮುಖ್ಯವಾಗಿದ್ದು, ಇಲ್ಲಿಯವರೆಗೆ ಇ-ಕೆವೈಸಿ ಮಾಡದ ರೈತರು ಅದನ್ನು ಆದಷ್ಟು ಬೇಗ ಮಾಡಬೇಕು, ಇಲ್ಲದಿದ್ದರೆ, ಅವರು ಮುಂದಿನ ಕಂತಿನ ಪ್ರಯೋಜನವನ್ನು ಪಡೆಯುವುದರಿಂದ ವಂಚಿತರಾಗಬಹುದು ಎಂದು ಹೇಳಿದೆ.
ಪಿಎಂ ಕಿಸಾನ್ ಖಾತೆಯ ಇ-ಕೆವೈಸಿ ಈ ವಿಧಾನದಲ್ಲಿ ಮಾಡಬಹುದು.
• ಪಿಎಂ ಕಿಸಾನ್ ಖಾತೆಯ ಇ-ಕೆವೈಸಿಯನ್ನು ಮನೆಯಲ್ಲಿ ಆನ್ ಲೈನ್ ನಲ್ಲಿ ಮಾಡಲು ಪಿಎಂ ಕಿಸಾನ್ ಪೋರ್ಟಲ್ pmkisan.gov.in ಗೆ ಭೇಟಿ ನೀಡಿ.
• ಆದರೆ ಅದನ್ನು ಆಪ್ ಲೈನ್ ನಲ್ಲಿ ಮಾಡುವುದಕ್ಕಾಗಿ ನೀವು ಹತ್ತಿರದ ಸಿಎಸ್ ಸಿ ಕೇಂದ್ರಕ್ಕೆ ಹೋಗಬೇಕು. ಅದೇ ಸಮಯದಲ್ಲಿ, ಭೂ ದಾಖಲೆಗಳ ಪರಿಶೀಲನೆಯೂ ಕಡ್ಡಾಯವಾಗಿದ್ದು, ಇದನ್ನು ಆದಷ್ಟು ಬೇಗ ಮಾಡಿ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸುವುದು ಹೇಗೆ ಗೊತ್ತಾ?
• ಪಿಎಂ ಕಿಸಾನ್ ನ 14 ನೇ ಕಂತು ನಿಮ್ಮ ಖಾತೆಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ನಿಮ್ಮ ಮನೆಯಲ್ಲಿ ಕುಳಿತು ತಿಳಿದುಕೊಳ್ಳಿ.
• ಇದಕ್ಕಾಗಿ, ಮೊದಲು ಪಿಎಂ ಕಿಸಾನ್ ಪೋರ್ಟಲ್ pmkisan.gov.in ಗೆ ಭೇಟಿ ನೀಡಿ . ಬಳಿಕ ಫಲಾನುಭವಿ ಪಟ್ಟಿಯ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನಿಮ್ಮ ರಾಜ್ಯ, ಜಿಲ್ಲೆ, ತಹಸಿಲ್, ಬ್ಲಾಕ್ ಹಾಗೂ ಗ್ರಾಮದ ಮಾಹಿತಿಯನ್ನು ನಮೂದಿಸಿ. ಬಳಿಕ ವರದಿ ಪಡೆಯಿರಿ ಮೇಲೆ ಕ್ಲಿಕ್ ಮಾಡಿ. ಅರ್ಹ ಫಲಾನುಭವಿಗಳ ಪಟ್ಟಿ ದೊರೆಯಲಿದೆ.
ವರದಿ : ಚಂದ್ರು ಆರ್. ಭಾನಾಪೂರ್