You are currently viewing ಗ್ರಾ. ಪ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ : ಬಳಗೇರಿ ಗ್ರಾ.ಪಂ. ಅಧ್ಯಕ್ಷ ಕುರ್ಚಿಗೆ ಕಾಂಗ್ರೆಸ್ ಬೆಂಬಲಿತ ಗೌರಮ್ಮ ಕುರ್ತಕೋಟಿ ಆಯ್ಕೆ!!

ಗ್ರಾ. ಪ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ : ಬಳಗೇರಿ ಗ್ರಾ.ಪಂ. ಅಧ್ಯಕ್ಷ ಕುರ್ಚಿಗೆ ಕಾಂಗ್ರೆಸ್ ಬೆಂಬಲಿತ ಗೌರಮ್ಮ ಕುರ್ತಕೋಟಿ ಆಯ್ಕೆ!!

ಕುಕನೂರು : ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಹಲವು ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯುತ್ತಿದ್ದು, ತಾಲೂಕಿನ ಬಳಗೇರಿ ಗ್ರಾಮ ಪಂಚಾಯತಿಯ 2ನೇ ಅವದಿಗೆ ಅಧ್ಯಕ್ಷರ ಗಾದಿಗೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಗೌರಮ್ಮ ಕುರ್ತಕೋಟಿ ಆಯ್ಕೆಯಾಗಿದ್ದಾರೆ. 18 ಸದಸ್ಯ ಬಲದ ಬಳಗೇರಿ ಗ್ರಾಮ ಪಂಚಾಯತಿಯಲ್ಲಿ ಸದಸ್ಯೆ ಗೌರಮ್ಮ ಕುರ್ತಕೋಟಿ ಅವರು 11 ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಸಿದ್ದಮ್ಮ ಶಿವಬಸಪ್ಪ ದೇವರಮನಿ ಅವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮೇಘರಾಜ್ ಬಳಗೇರಿ, ಗ್ರಾ. ಪಂ. ಸದಸ್ಯ ಯಮನೂರ ಕಟ್ಟಿಮನಿ, ಹಂಪಣ್ಣ ಕಟ್ಟಿಮನಿ, ವಿರೂಪಾಕ್ಷಯ್ಯ ಕುರ್ತಕೋಟಿ, ರೂಪಚಂದ ಕಟ್ಟಿಮನಿ, ರಾಮಣ್ಣ ಹಿರೇಮನಿ, ಹನುಮಂತ್ ಚವ್ಹಾಣ, ಶಾಂತಕುಮಾರ್, ಗೋನಿ, ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!