ಮುದಗಲ್ಲ ವರದಿ..
ಮುದಗಲ್ಲ ಪುರಸಭೆ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ..

ಮುದಗಲ್ಲ :- ಪೌರ ಕಾರ್ಮಿಕರ ಶ್ರಮದಿಂದಾಗಿ ಪಟ್ಟಣದಲ್ಲಿ ರೋಗರುಜಿನ ನಿಯಂತ್ರಣ ವಾಗುತ್ತಿದೆ. ಅವರು ಮಾಡುವ ಕೆಲಸಕ್ಕೆ ಏನು ಕೊಟ್ಟರು ಸಾಲದು’ ಎಂದು ಪುರಸಭೆ ಯ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಹೇಳಿದರು ಪಟ್ಟಣದ ಪುರಸಭೆಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಯಲ್ಲಿ ಪುರಸಭೆ ಸಿಬ್ಬಂದಿ ಚನಮ್ಮ ದಳವಾಯಿ ಹಿರೇಮಠ ಅವರು ಲಿಂಗವಂತ ಧಮ೯ದ ನಾಯಕಿ ಶರಣೆ ಸತ್ಯಕ್ಕ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿದ್ದರು.

ನಂತರ ಮಾತನಾಡಿದ ನೈಮಲ್ಯ ಅಧಿಕಾರಿ ಆರೀಪ್ ಹುನ್ನಿಸಾ ಬೇಗಂ ಪೌರ ಕಾರ್ಮಿಕರಿಗೆ ಯಾವುದೇ ಸಮಸ್ಯೆ ಉಂಟಾದರೂ ಅದನ್ನು ಬಗೆಹರಿಸುವಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಸದಾಸಿದ್ಧವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಮಹದೇವಮ್ಮ ಗುತ್ತೆದಾರ, ಉಪಾಧ್ಯಕ್ಷರಾದ ಅಜ್ಮೀರ್ ಬೆಳ್ಳಿಕಟ್,
ಕಂದಾಯ ನಿರೀಕ್ಷಕರಾದ ಅಂತೋಣಿ ರಾಜ, ನೈಮಲ್ಯ ಅಧಿಕಾರಿ ಅಧಿಕಾರಿಯಾದ ರೈಮತ್ ಹುನ್ನಿಸಾ ಬೇಗಂ ,ಮ್ಯಾನೇಜರ್ ಸುರೇಶ್ ,ಬಸವರಾಜ ಮೇಟಿ ಸಿಬ್ಬಂದಿಗಳಾದ ಚನ್ನಮ್ಮ ಹಿರೇಮಠ , ಪೌರ ಕಾರ್ಮಿಕ ರಾದ ಅಧ್ಯಕ್ಷ ರಾದ , ಬಸವರಾಜ ಕಟ್ಟಿಮನಿ, ಗೌರವ ಅಧ್ಯಕ್ಷ ರಾದ ರಾಮಣ್ಣ ,ಹಾಗೂ ಹುಲಗಪ್ಪ ಸಂಜೀವಪ್ಪ , ರವಿ , ಅಮರೇಶ , ನಾಗರಾಜ,ವಿನೋದ,ಸಂಜೀವಪ್ಪ,ರಮೇಶ ಹಟ್ಟಿ ,ಆದಿಬಸವ, ಸರಸ್ವತಿ ,ರತ್ನಮ್ಮ,ಮಲ್ಲಮ್ಮ,
ಬಸಮ್ಮ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ