ಮುದಗಲ್ಲ :- ಇಂದು ವ್ಯಾಪಾರಸ್ಥರ ಸಂಘದ ಕಟ್ಟಡ ಉದ್ಘಾಟನೆ..

ಮುದಗಲ್ಲ ವರದಿ…

ಇಂದು ವ್ಯಾಪಾರಸ್ಥರ ಸಂಘದ ಕಟ್ಟಡ ಉದ್ಘಾಟನೆ..

 

ಮುದಗಲ್ಲ: ಪಟ್ಟಣದ ವ್ಯಾಪಾರಸ್ಥರ ಪತ್ತಿನ ಸಹಕಾರಿ ಸಂಘದ (ಬ್ಯಾಂಕ) ಕಟ್ಟಡದ ಉದ್ಘಾಟನೆ ಬುಧುವಾರ (ಸೆ.24) ರಂದು ಜರುಗಲಿದೆ ಎಂದು ಸಂಘದ ಅಧ್ಯಕ್ಷ ಅಶೋಕಗೌಡ ಪಾಟೀಲ್
ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಟ್ಟಡವನ್ನು ನಂದವಾಡಗಿಯ ಮಹಾಂತೇಶ್ವರ
ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು ಉದ್ಘಾಟಿಸಲಿದ್ದು, ಸಂತೆಕೆಲೂರಿನ ಗುರುಬಸವ ಶ್ರೀಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.

ಅಶೋಕಗೌಡ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದು ಮುಖ್ಯಅಥಿತಿಗಳಾಗಿ ರಾಯಚೂರು ಸಹಕಾರಿ ಸಂಘಗಳ ಉಪನಿಬಂಧಕರಾದ ಎಂ.ಆರ್. ಮನೋಹರ ವಹಿಸಲಿದ್ದಾರೆ.

ನಂತರ ರಾಮಲಿಂಗೇಶ್ವರ ದೇವಸ್ಥಾನದಲ್ಲಿ 29 ನೇ ವರ್ಷದ
ವಾರ್ಷಿಕ ಮಹಾಸಭೆ ನಡೆಯಲಿದ್ದು, ಗ್ರಾಹಕರು ಸಾರ್ವಜನಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾದ್ಯಕ್ಷ ಚನ್ನವೀರಪ್ಪ
ಬಾಲಗಾವಿ, ನಿರ್ದೇಶಕರಾದ ಶ್ರೀನಿವಾಸ ಕಂಪ್ಲಿ, ಸಂತೋಷ ಕುಮಾರ, ಯಮನಪ್ಪ ಬುಶೆಟ್ಟಿ, ಮೈಬೂಬಬಾರಗಿಡ, ಶರಣಪ್ಪ ದೇಸಾಯಿ, ವಾಸು ಸುರುಪೂರ ಉಪಸ್ಥಿತರಿದ್ದರು..

 ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!