ಮುದಗಲ್ಲ :-ಸಮಾಜ ಸೇವೆಯಲ್ಲಿ ಶ್ರೀ ಸಾಬ ಹುಸೇನ ಅವರಿಗೆ ಒಲಿದ ರಾಷ್ಟ್ರ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿ..

ಮುದಗಲ್ಲ ವರದಿ..

ಸಮಾಜ ಸೇವೆಯಲ್ಲಿ ಶ್ರೀ ಸಾಬ ಹುಸೇನ ಅವರಿಗೆ ಒಲಿದ ರಾಷ್ಟ್ರ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿ..ಮುದಗಲ್ಲ:- ಸಮಾಜ ಸೇವಕರಾಗಿ ಅಲವಾರು ಸಮಾಜದ ಕಾರ್ಯ ಹಾಗೂ ಊರಿನ ಮೂಲಭೂತ ಸೌಕರ್ಯಕ್ಕಾಗಿ ಕರವೇ ಸಂಘಟನೆ ಮುಖಾಂತರ ಹೋರಾಟ ಮಾಡದ ಶ್ರೀ ಸಾಬ ಹುಸೇನ ಅವರಿಗೆರಾಷ್ಟ್ರ ಮಟ್ಟದ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಸ್ತುತ ಮುದಗಲ್ಲ ಪಟ್ಟಣದಲ್ಲಿ ವಾಸಿಸುತ್ತಿದ್ದು, ಕರವೇ ನಗರ ಘಟಕದ ಅಧ್ಯಕ್ಷರಾಗಿ ಹಾಗೂ ಕಾಯ೯ಕತ೯ನಾಗಿಯೂ
ಸುಮಾರು 18 ವರ್ಷಗಳಿಂದ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜಸೇವೆಯಲ್ಲಿ
ನಿರತರಾಗಿದ್ದು, ಸಮಾಜಕ್ಕೆ ಮಾದರಿಯಾಗಿದ್ದಾರೆ.

ಇವರ ಸಾಮಾಜಿಕ ಚಟುವಟಿಕೆ ಗಳನ್ನು ಪರಿಗಣಿಸಿ ಬೆಳಕು ಸಾಂಸ್ಕೃತಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್
ವತಿಯಿಂದ ಕನ್ನಡ ನಾಡು-ನುಡಿ, ಸಂಗೀತ, ಕಲೆ, ಶಿಕ್ಷಣ ಸಂಘಟನೆ, ಹೀಗೆ ವಿವಿಧ ಲಲಿತ ಕಲಾ ಪ್ರಕಾರ ಗಳಲ್ಲಿನ ಸಾಧಕರನ್ನು ಆಯ್ಕೆ ಮಾಡಲಾಗುತ್ತಿದೆ.

ಇವರನ್ನು ಸಾಹಿತ್ಯ, ಸಂಸ್ಥೆಯ 120ನೇ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ ಕಾರ್ಯಕ್ರಮದಲ್ಲಿ ಸೆ. 21ರಂದು ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜರುಗುತ್ತಿರುವ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನದಲ್ಲಿ ರಾಷ್ಟ್ರಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ ನೀಡಲಾಗುವುದು ಎಂದು ಬೆಳಕು ಸಂಸ್ಥೆಯ ಸಂಸ್ಥಾಪಕ ಅಣ್ಣಪ್ಪ ಮೇಟಿ ತಿಳಿಸಿದ್ದಾರೆ.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!