ಮುದಗಲ್ಲ :-ಕಲಿಕಾ ಹಬ್ಬ ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆ : ಸುಜಾತಾ ಹೂನುರು (ಕ್ಷೇತ್ರ ಶಿಕ್ಷಣಾಧಿಕಾರಿ)..

ಮುದಗಲ್ಲ ವರದಿ..

ಕಲಿಕಾ ಹಬ್ಬ ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆ : ಸುಜಾತಾ ಹೂನುರು (ಕ್ಷೇತ್ರ ಶಿಕ್ಷಣಾಧಿಕಾರಿ)..

ಮುದಗಲ್ಲ :- ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾಯಾ೯ಲಯ ಲಿಂಗಸೂರ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ 2025-26 ಸಾಲಿನ FLN ಕಲಿಕಾ ಹಬ್ಬ ಕಾಯ೯ಕ್ರಮ ನಡೆಯಿತು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವೆಂಕಟರಾಯನ ಪೇಟೆ ಶಾಲೆಗಳಲ್ಲಿ ಆಯೋಜನೆ ಗೊಳ್ಳುತ್ತಿರುವ ಕಲಿಕಾ ಹಬ್ಬ , ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರಲು ಇರುವ ಉತ್ತಮ ವೇದಿಕೆಗಳಾಗಿವೆ ಎಂದು ಲಿಂಗಸೂರ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹೂನೂರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೆಂಕಟರಾಯನ ಪೇಟೆ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾಗುತ್ತಿವೆ. ಎನ್ನುವ ಮಾತಿನ ನಡುವೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುತ್ತಿವೆ. ಇದು ಬಡಪಾಲಕರ ಮನಸಿಗೆ ನೆಮ್ಮದಿ ತಂದಿದೆ ಎಂದರು.

ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಶೋಭಾ ಮುಖ್ಯ ಗುರುಗಳು ಪ್ರತಿಭೆ ಮತ್ತು ಕಲಿಕೆ ಯಾರ ಸ್ವತ್ತಲ್ಲ, ಅದು ಪ್ರತಿಯೊಂದು ಮಗುವಿನಲ್ಲೂ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಇಂತಹ ಉತ್ತಮವಾದ ಕಾರ್ಯಕ್ರಮಗಳು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮತ್ತು ಗುಣಾತ್ಮಕ ಕಲಿಕೆಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಕಾಯ೯ಕ್ರಮ ಅಧ್ಯಕ್ಷತೆ ವಹಿಸಿ ಮುಖ್ಯ ಗುರುಗಳಾದ ಸಂಗಯ್ಯ ಹಿರೇಮಠ ಮಾತನಾಡಿದ ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾಗುತ್ತಿವೆ. ಎನ್ನುವ ಮಾತಿನ ನಡುವೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುತ್ತಿವೆ. ಇದು ಬಡಪಾಲಕರ ಮನಸಿಗೆ ನೆಮ್ಮದಿ ತಂದಿದೆ ಎಂದರು.

ಈ ಸಂದರ್ಭದಲ್ಲಿ ಸಿ ಅರ್ ಪಿ ರಾಮಚಂದ್ರ ಢವಾಳೆ, ಮಹಾಂತೇಶ ಹಳ್ಳೂರು ,ಸುರೇಶ್ ವ್ಯವಸ್ಥಾಪಕರು ಪುರಸಭೆ ಮುದುಗಲ್ ,ನಾಗೇಂದ್ರ ನಿವೃತ್ತ ಮುಖ್ಯ ಗುರುಗಳು, ವೆಂಕಟೇಶ್ ಹಿರೇಮನಿ, ಶರಣಪ್ಪ ಕಟ್ಟಿಮನಿ, ಬಸವರಾಜ್ ಬಂಕದಮನಿ,  ಮೌನೇಶ್ ಕಟ್ಟಿಮನಿ ,ಸಂಗಪ್ಪ ಹಿರೇಮನಿ, ಆನಂದ್ ಪೇಂಟರ್, ಮೆಹಬೂಬ್ ಸಾಬ್ ಡೋಂಗ್ರಿ, ಮಲ್ಲೇಶ್ , ಹನಮಂತ ಬಿಲ್ಲಿ ರವಿ ಕಟ್ಟಿಮನಿ,11 ಶಾಲೆಯ ವಿದ್ಯಾರ್ಥಿಗಳು ಹಾಗೂ CRC ಯ ಎಲ್ಲಾ ಮುಖ್ಯ ಗುರುಗಳು ಶಿಕ್ಷಕರು ಅತಿಥಿ ಶಿಕ್ಷಕರು  ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!