ಮುದಗಲ್ಲ:- ಬಿಹಾರ ಚುನಾವಣೆ ಗೆಲುವು, ಅಭಿವೃದ್ಧಿಗೆ ಒಲಿದ ಜಯ: ವೀರನಗೌಡ ಬಿ. ಪಾಟೀಲ್ ಲೆಕ್ಕಿಹಾಳ..

ಮುದಗಲ್ಲ ವರದಿ..

ಬಿಹಾರ ಚುನಾವಣೆ ಗೆಲುವು, ಅಭಿವೃದ್ಧಿಗೆ ಒಲಿದ ಜಯ: ವೀರನಗೌಡ ಪಾಟೀಲ್ ಲೆಕ್ಕಿಹಾಳ..

ಮುದಗಲ್ಲ :-ಸ್ಥಳೀಯ ಪೋಲಿಸ್ ಠಾಣೆಯ ಮುಂದೆ ಬಿಹಾರ ಚುನಾವಣೆಯ ಗೆಲುವು ಹಿನ್ನೆಲೆಯಲ್ಲಿ ಮುದಗಲ್ಲ ಬಿಜೆಪಿ ಘಟಕದ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾ ಚರಣೆ ಮಾಡಿದರು.

ಬಿಹಾರ ಚುನಾವಣೆಯ ಗೆಲುವು ಅಭಿವೃದ್ಧಿ ಕಾರ್ಯಗಳಿಗೆ ಒಲಿದ ಜಯ ಎಂದು ರಾಯಚೂರು ಜಿಲ್ಲಾ ಭಾಜಪಾ ಅಧ್ಯಕ್ಷ ರಾದ ವೀರನಗೌಡ ಪಾಟೀಲ್ ಲೆಕ್ಕಿಹಾಳ ಅವರು ಪ್ರತಿಪಾದಿಸಿದರು. ಬಿಹಾರ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ದಿಗ್ವಿಜಯ ಸಿಕ್ಕಿದ್ದು, ಸಂತಸದ ವಿಚಾರ. ಅಭೂತಪೂರ್ವ ಗೆಲುವನ್ನು ದಾಖಲಿಸಿದ ಎನ್‌ಡಿಎ ಅಭ್ಯರ್ಥಿಗಳಿಗೆ ಹಾಗೂ ಚುನಾವಣೆಯ ಗೆಲುವಿಗಾಗಿ ಶ್ರಮಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ಪದಾಧಿಕಾರಿಗಳಿಗೆ ಪ್ರಮುಖವಾಗಿ ಮತದಾರ ಬಂಧುಗಳಿಗೆ ಧನ್ಯವಾದಗಳು ಎಂದು ವೀರನಗೌಡ ಪಾಟೀಲ್ ಲೆಕ್ಕಿಹಾಳ ಹಾಗೂ ಮುದಗಲ್ಲ ಬಿಜೆಪಿ ಘಟಕವು ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಗೆಲುವನ್ನು ಸಂಭ್ರಮಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾದ ಕರಿಯಪ್ಪ ಯಾದವ ಸಣ್ಣ ಸಿದ್ದಯ್ಯ,ಆಪ್ತಸಹಾಯ ಕರಾದ ಪಕೀರಪ್ಪ ಕುರಿ, ಗುಂಡಪ್ಪ ಗಂಗಾವತಿ,ಸಂತೋಷ ಸುರಪುರ, ಮಲ್ಲಮ್ಮ ಮಾಟೂರ,ಉದಯ ಕುಮಾರ್ ಕಂಬಾರ,ಶ್ರೀ ಕಾಂತ ಪತ್ತಾರ, ಮಂಜುನಾಥ ನಂದವಾಡಗಿ , ಪಾಶ ಜಂಬಾಳಿ,ವೆಂಕಟೇಶ ಹಿರೇಮನಿ, ಬಾಬು ಉಪ್ಪಾರ, ನಾಗರಾಜ ತಳವಾರ ,ಶರಣಪ್ಪ ಹಂಚನಾಳ,ರವಿ ಕಟ್ಟಿಮನಿ,ಮೋಹನ್ ಬಂಡಾರಿ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!