ಮುದಗಲ್ಲ ವರದಿ..
ಮುದಗಲ್ಲ :-ಅಗ್ನಿವೀರ್‌ಗೆ ಆಯ್ಕೆಯಾಗಿ ತರಬೇತಿ ಮುಗಿಸಿ ನಿರ್ಗಮನವಾದ ವೆಂಕಟೇಶ್ ಬಗಡಿ ತಾಂಡ ಯುವಕನಿಗೆ ಸನ್ಮಾನ..

ಮುದಗಲ್ಲ :- ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಡಿ ಭಾರತೀಯ ಸಶಸ್ತ್ರ ಪಡೆ (ಅಗ್ನಿವೀರ್)ಗೆ ಆಯ್ಕೆಯಾಗಿ ಸೈನಿಕ ಇಲಾಖೆಯಲ್ಲಿ ತರಬೇತಿ ಮುಗಿಸಿ ನಿರ್ಗಮನವಾಗಿ ಬಂದ ವೆಂಕಟೇಶ ಬಗಡಿ ತಾಂಡ (ರೇಷ್ಮೆ ಫಾರಂ ತಾಂಡಾ ಅವರಿಗೆ ಗುರು ಹಿರಿಯರ ಹಾಗೂ ಮುದಗಲ್ಲ ಮುಖಂಡರು ಸಮ್ಮುಖದಲ್ಲಿ ಮುದಗಲ್ಲ ಅಂಬೇಡ್ಕರ ಸಕ೯ಲ್ ನಲ್ಲಿ ಅಂಬೇಡ್ಕರ್ ನಾಮ ಫಲಕಕ್ಕೆ ಹೂಮಾಲೆ ಹಾಕಿ ಹಾಗೂ ವೆಂಕಟೇಶ್ ತಂದೆ ಅಂಬರೀಶ್ ಅವರಿಗೆ ಶಾಲು ಹೊದಿಸಿ,ಗೌರವಿಸಿ ಸನ್ಮಾನ ನಡೆಯಿತು ವೆಂಕಟೇಶ್ ಅವರಿಗೆ ದೇಶಸೇವೆಯಲ್ಲಿ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪಿ.ಎಸ್.ಐ ವೆಂಕಟೇಶ್ ಮಾಡಿಗೇರಿ ನಾಗರಾಜ್ ಎಸ್ ನಾಯ್ಕ್ , ಉಮೇಶ್ ನಾಯ್ಕ್ ಶರಣಪ್ಪ ಜಾದವ್,ಬಾಲಪ್ಪ ರಾಥೋಡ್, ಉಮೇಶ್ ರಾಥೋಡ್,ಶಾಲಂ ಟೈಲರ್ ಮುದುಗಲ್,ಬಾಲಚಂದ್ರ ರಾಠೋಡ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ