You are currently viewing ಮುದಗಲ್ಲ :- ಇಂದು ಸುಕ್ಷೇತ್ರ ಅಂಕಲಿಮಠದ ನಿರುಪಾದೇಶ್ವರರ ಜಾತ್ರಾ ಮಹೋತ್ಸವ.‌‌.

ಮುದಗಲ್ಲ :- ಇಂದು ಸುಕ್ಷೇತ್ರ ಅಂಕಲಿಮಠದ ನಿರುಪಾದೇಶ್ವರರ ಜಾತ್ರಾ ಮಹೋತ್ಸವ.‌‌.

ಮುದಗಲ್ ವರದಿ..

ಇಂದು ಸುಕ್ಷೇತ್ರ ಅಂಕಲಿಮಠದ ನಿರುಪಾದೇಶ್ವರರ ಜಾತ್ರಾ ಮಹೋತ್ಸವ.‌‌.

ಮುದಗಲ್ಲ :- ಸಮೀಪದ ಸುಕ್ಷೇತ್ರ ಅಂಕಲಿಮಠದ ನಿರುಪಾದೇಶ್ವರರ ಜಾತ್ರಾ ಮಹೋತ್ಸವ ಇಂದು ಅದ್ಧೂರಿಯಾಗಿ ಜರುಗಲಿದೆ ಬಾಹ್ಮೀ ಮುಹೂರ್ತದಲ್ಲಿ ನಿರುಪಾದೇಶ್ವರ ಮೂರ್ತಿಗೆ ವಿಶೇಷ ಪೂಜೆ,ಪುನಸ್ಕಾರ ಜರುಗಲಿದ್ದು, ನಂತರ ಸಕಲ ವಾದ್ಯ ಮೇಳ ದೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ಉಚ್ಚಾಯ,ನಂತರ ಮಹಾಪ್ರಸಾದ ಪೂಜೆ ನಡೆಯಲಿದೆ.

ಧರ್ಮಸಭೆ ಹಾಗೂ ಶ್ರೀಮಠದಿಂದ ಶ್ರೀ ನಿರುಪಾದಿ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಾಮೂಹಿಕ ವಿವಾಹದಲ್ಲಿ ನಾನಾ ಕ್ಷೇತ್ರಗಳ ಐವರು ಸಾಧಕರಾದ ಮುದಗಲ್ಲನ ರಹಮಾನಸಾನ ನದಾಪ್ (ಸಂಗೀತ ಕ್ಷೇತ್ರ) , ಪ್ರೇಮಾ ಈರಣ್ಣ ಚೊರಡ್ಡಿ ಊತ್ತೂರು ಕೃಷಿ ಕ್ಷೇತ್ರ, ಪದ್ಮಶ್ರೀ ಪುರಸ್ಕೃತರಾದ ಶ್ರೀ ಕೆ.ಎಸ್ ರಾಜಣ್ಣ ಸಮಾಜಸೇವೆ, ದೀಪಕ್ ಬೋಸರಡ್ಡಿ ಸಿಪಿಐ ಆರಕ್ಷಣೆಯ ಸೇವಕ್ಷೇತ್ರ, ಹಾಗೂ ಲೋಕೇಶ ಟೇಕಲ್ ಪಾರಂಪರಿಕ ವೈದ್ಯಕೀಯ ಸೇವಾ ಕ್ಷೇತ್ರ ಇವರಿಗೆ
ಸನ್ಮಾನಿಸಲಾಗುತ್ತಿದೆ. 

ಮಠದ ಹಿನ್ನಲೆ : ವಿಶಿಷ್ಟಾತ ಸಿದ್ಧಾಂತದ ತಳಹದಿ
ಮೇಲೆ ನಿರ್ಮಾಣಗೊಂಡ ಮುದಗಲ್ಲ ಸಮೀಪದ ತಲೆಕಟ್ಟು ಗ್ರಾಮದ ಅಂಕಲಿಮಠ, ರಾಜ್ಯ ಮತ್ತು ನೆರೆ ರಾಜ್ಯಗಳಲ್ಲಿ ಪ್ರಸಿದ್ಧಿ
ಪಡೆದಿದೆ. ಸುಮಾರು 300 ವರ್ಷಕ್ಕೂ ಹೆಚ್ಚು ಇತಿಹಾಸ
ಇರುವ ಶ್ರೀಮಠದ ಮೂಲ ಪುರುಷ ನಿರುಪಾದೇಶ್ವರರು
ತಮ್ಮ ಜೀವಿತಾವಧಿಯಲ್ಲಿ ನಾನಾ ಕಡೆ 12 ಮಠ ಸ್ಥಾಪಿಸಿದ್ದಾರೆ.

ಅಂಕಲಿಮಠ (ತಲೆಕಟ್ಟು) ಮುದಗಲ್ ದಕ್ಷಿಣ ಭಾಗದಿಂದ 12 ಕಿ.ಮೀ. ದೂರದಲ್ಲಿದೆ. ಈ ಮಠ ನಿತ್ಯ ತ್ರಿವಿಧ ದಾಸೋಹ ತಾಣವಾಗಿರುವುದು ವಿಶೇಷ.

ಗೋಕಾಕ ಜಿಲ್ಲೆಯ ಅಂಕಲಗಿ ಗ್ರಾಮದ ಅಡವಿ ಸಿದ್ದೇಶ್ವರರು ತಮ್ಮ ಪರಮ ಶಿಷ್ಯರಾಗಿದ್ದ
ನಿರುಪಾದೇಶ್ವರರಿಗೆ ಅಂಕಲಿಮಠಕ್ಕೆ ಹೊರಡಲು ಅಪ್ಪಣೆ ನೀಡಿದರು. ಗುರುವಿನ ಮಾತಿನಂತೆ ಹೊರಟು ನಿಂತ
ಶ್ರೀಗಳಿಗೆ ಅವರ ಗುರುಗಳು ವಿಭೂತಿ (ಭಸ) ಕಟಿ, ವಿಭೂತಿ ಪ್ರತಿಷ್ಠಾಪನೆ ಅಂದು ಮುಳ್ಳು ಕಂಟಿಗಳಿಂದ ಕೂಡಿದ್ದ ಈ ಸ್ಥಳದಲ್ಲಿ ದುಷ್ಟಶಕ್ತಿ ಪ್ರಭಾವದಲ್ಲಿತ್ತು. ಆದರೆ, ದೇವಿ ವರಶಕ್ತಿ ಪಡೆದುಕೊಂಡಿದ್ದ ನಿರುಪಾದೇಶ್ವರರು ಈ ಸ್ಥಳವನ್ನು
ತಮ್ಮ ಆರಾಧ್ಯದೇವಿ ಸ್ಥಾಪನೆಗೆ ಬಳಸಿಕೊಂಡು ಆ ಸ್ಥಳ ಸ್ವಚ್ಛಗೊಳಿಸಿ, ಛಲಬಿಡದ ಹಠವಾದಿಯಂತೆ ಮಠ ಸ್ಥಾಪಿಸಿದರು.

ತಮ್ಮ ಗುರುಗಳು ನೀಡಿದ ವಿಭೂತಿ ಗಟ್ಟಿಯನ್ನು ಪ್ರತಿಷ್ಠಾಪಿಸಿದರು. ಅಂದಿನಿಂದ ಇಂದಿನವರೆಗೆ ಅಂಕಲಿಮಠ ವರ್ಷಪೂರ್ತಿ ಜ್ಞಾನ, ಭಕ್ತಿ ಹಾಗೂ ಅನ್ನ ಸಂತರ್ಪಣೆ ಮೂಲಕ ತ್ರಿವಿಧ ದಾಸೋಹ ಕ್ಷೇತ್ರ ವೆಂದೇ ಹೆಸರು ಪಡೆದಿದೆ.

ನಿರುಪಾದೇಶ್ವರರು ಅನೇಕ ಪವಾಡ ಮಾಡುತ್ತ ಈ ಭಾಗದ ನಡೆದಾಡುವ ದೇವರು ಎಂದೆನಿಸಿಕೊಂಡಿದ್ದಾರೆ.
ಅಂಕಲಿಮಠ ಸುಕ್ಷೇತ್ರದ ವೀರಭದ್ರ ಸ್ವಾಮೀಜಿ ಈ ಭಾಗದನಡೆದಾಡುವ ದೇವರು ಎಂದೆನಿ ಕೊಂಡಿದ್ದಾರೆ.

ಈಗಿನ ಅಂಕಲಿಮಠಕ್ಕೆ ನಿರುಪಾದೇಶ್ವರರು ಬಂದು
ಮಠ ಸ್ಥಾಪಿಸಿದ್ದು, ಇಂದಿಗೂ ತ್ರಿವಿಧ ದಾಸೋಹ ಕ್ಷೇತ್ರವಾಗಿ ಭಕ್ತರ ಮನದಲ್ಲಿ ಶ್ರೀಮಠ ಪೂಜ್ಯನೀಯ
ಸಾನ ಪಡೆದಿದೆ. ಹರಗುರು ಚರಮೂತಿ೯ ಗಳು ಚುನಾಯಿತ ಪ್ರತಿನಿಧಿಗಳು ಭಾಗವಹಿಸುವರು ಎಲ್ಲಾ ಕಾಯ೯ಕ್ರಮಗಳ ಅಧ್ಯಕ್ಷತೆಯನ್ನು ವೀರಭದ್ರಮಹಾ ಸ್ವಾಮಿಗಳು ವಹಿಸಲಿದ್ದರೆ..

ವೀರಭದ್ರಸ್ವಾಮಿಗಳ ವಂಶಜರಾದ ಮಾತೋಶ್ರೀ ಪಾರ್ವತೆಮ್ಮ,
ಬಸವರಾಜರು, ಮಾತೋಶ್ರೀ ಮಲ್ಲಮ್ಮ, ಮಾತೋಶ್ರಿ
ನೀಲಮ್ಮನವರ ದೈವಿಶಕ್ತಿ ಶ್ರೀಮಠದ ಆಸ್ತಿಯಾಗಿ ಗಟ್ಟಿಗೊಂಡಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಹಾನ್ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಶ್ರೀಮಠದ ಅಧಿಕಾರ ವಹಿಸಿಕೊಂಡಿರುವ ಬಸವರಾಜಸ್ವಾಮಿಗಳ ಮಕ್ಕಳಾದ ವೀರಭದ್ರಮಹಾಸ್ವಾಮಿಗಳು ಮತ್ತು ಫಕೀರೇಶ್ವರ ಮಹಾಸ್ವಾಮಿ ಗಳು ಸುಕ್ಷೇತ್ರದ ಅಭಿವೃದ್ಧಿ ಜೊತೆಗೆ ಲಕ್ಷಾಂತರ ಭಕ್ತರ ಪಾಲಿಗೆ ನಡೆದಾಡುವ ದೇವರಾಗಿ ದಿವ್ಯ ಚೇತನ ಶಕ್ತಿಗಳಾಗಿರುವುದು ಕ್ಷೇತ್ರದ ಹಿರಿಮೆಯನ್ನು ಹೆಚ್ಚಿಸಿದೆ.

 

ವರದಿ:- ಮಂಜುನಾಥ ಕುಂಬಾರ..

Leave a Reply

error: Content is protected !!