ಮುದಗಲ್ಲ :-ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಅರಿವು ಗಳಿಸಿದರಷ್ಟೇ ಜಗತ್ತಿನಲ್ಲಿ ಮನ್ನಣೆ:- ಗ್ಯಾನಪ್ಪ ದಫೇದಾರ್…

ಮುದಗಲ್ಲ ವರದಿ…
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಅರಿವು ಗಳಿಸಿದರಷ್ಟೇ ಜಗತ್ತಿನಲ್ಲಿ ಮನ್ನಣೆ:- ಗ್ಯಾನಪ್ಪ ದಫೇದಾರ್…
ಮುದಗಲ್ಲ :- ಸಾರ್ವಜನಿಕ ಗ್ರಂಥಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು ಗ್ರಂಥಾಲಯ ಸಹಾಯಕ ಗ್ಯಾನಪ್ಪ ದಫೇದಾರ್ ರವರ ಶ್ರೀ ಸರಸ್ವತಿ ಭಾವಚಿತ್ರ ಕ್ಕೆ ಹಾಗೂ ಗ್ರಂಥಾಲಯ ವಿಜ್ಞಾನ ಚಳುವಳಿಯ ಪಿತಾಮಹರಾದ ಪದ್ಮಶ್ರೀ ಡಾ. S. R. ರಂಗನಾಥನ್ ರವರ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿದ್ದರು.
 ನಂತರ ಮಾತನಾಡಿದ ಗ್ಯಾನಪ್ಪ ದಫೇದಾರ್  ಅವರು ಬದುಕನ್ನು ಗಂಭೀರವಾಗಿ ಪರಿಗಣಿಸದೇ ತುಂಬಾ ಸರಳವಾಗಿ ಕಾಣಬೇಕು. ಲೌಕಿಕ ಬದುಕು ಬಹಳ ಮುಖ್ಯ ಎಂದು ಭಾವಿಸಿರುವುದ ರಿಂದ ಹೊನ್ನು, ಹಣ, ಹೆಣ್ಣು ಇವುಗಳ ಹಿಂದೆ ಹೋಗುತ್ತಿದ್ದೇವೆ ಹೊರತು ಜ್ಞಾನದ ಹಿಂದೆ ಹೋಗುತ್ತಿಲ್ಲ ಎಂದು  ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಡೊಡ್ಡ ಸಿದ್ದಯ್ಯ ಸ್ವಾಮಿ ಹೊರಪೇಟೆ ಅವರು ‘ಭಾರತದ ಅತ್ಯುತ್ತಮ ವ್ಯಕ್ತಿಗಳು ಅರಿವಿನಿಂದಲೇ ಎತ್ತರಕ್ಕೆ ಹೋಗಿದ್ದಾರೆ ಹೊರತು ಹಣದಿಂದಲ್ಲ. ಅರಿವು ಗಳಿಸಿದವರಿಗೆ ಜಗತ್ತು ಎಲ್ಲ ಕಾಲಕ್ಕೂ ಮನ್ನಣೆ ನೀಡಿದೆ’ ಎಂದರು.
ಜ್ಞಾನವೇ ಶಕ್ತಿ, ಅರಿವೇ ಗುರು, ಜ್ಞಾನದ ಬಲದಿಂದ ಅಜ್ಞಾನದ ಕೇಡು’ ಹೀಗೆ ಭಾರತೀಯ ಎಲ್ಲ ವಿಶ್ವವಿದ್ಯಾಲಯಗಳ ಘೋಷವಾಕ್ಯಗಳು ಅರಿವಿನ ಮಹತ್ವ ಸಾರುತ್ತವೆ. ನಮ್ಮನ್ನು ನಿರಂತರವಾಗಿ ನಾವು ಮನುಷ್ಯರಾಗುವ ಹಾದಿಯಲ್ಲಿ ನಮ್ಮನ್ನು ಅರಿತುಕೊಳ್ಳಲು ಗ್ರಂಥಗಳು, ಕೃತಿಗಳು ಸಹಕಾರಿಯಾಗಿವೆ’ ಎಂದು ತಿಳಿಸಿದರು.
‘ಓದು’ ಎನ್ನುವುದು ನಮ್ಮೊಳಗೆ ನಿರಂತರವಾಗಿ ನಡೆಯುವ ಧ್ಯಾನದಂತೆ. ಓದನ್ನು ಧ್ಯಾನದ ರೀತಿ ಸ್ವೀಕಾರ ಮಾಡಿದಾಗ ಅದು ನಮ್ಮನ್ನು ತುಂಬಾ ಎತ್ತರಕ್ಕೆ ಕೊಂಡೊಯ್ಯುತ್ತದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ,ಬಸವರಾಜ ಭಜಂತ್ರಿ , ಹಾಗೂ ವಿದ್ಯಾರ್ಥಿ,ಹಾಗೂ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕ ಓದುಗರು ಉಪಸ್ಥಿತರಿದ್ದರು.
 
 ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!