ಮುದಗಲ್ಲ ವರದಿ..
ಮುದಗಲ್ಲ :-ಪುರಸಭೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ…

ಮುದಗಲ್ಲ :-ಸ್ಥಳೀಯ ಪುರಸಭೆ ವತಿಯಿಂದ
ಅರ್ಥಪೂರ್ಣವಾಗಿ 70 ನೇ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು ಪುರಸಭೆ ಸದಸ್ಯ ರಾದ ಗುಂಡಪ್ಪ ಗಂಗಾವತಿ ಅವರು ಭುವನೇಶ್ವರಿ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಅವರು ಮಾತನಾಡಿರು ದೇಶದಲ್ಲಿ ಕರ್ನಾಟಕ ರಾಜ್ಯ ಹಲವು ವೈವಿಧ್ಯತೆಗಳ ತವರೂರಾಗಿದ್ದು. ಇಂತಹ ನಾಡಿನಲ್ಲಿ ಜನಸಿದ ನಾವುಗಳು ಧನ್ಯರಾಗಿದ್ದು. ಪರಭಾಷೆ ಮೋಹಕ್ಕೆ ಒಳಗಾಗದೆ ನಮ್ಮ ಭಾಷೆ ಉಳಿವಿಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ಕಾರ್ಯದರ್ಶಿ ಯಾದ ತಮ್ಮಣ್ಣ ಗುತ್ತೇದಾರ್, ಪುರಸಭೆ ಸದಸ್ಯರಾದ ಮೈಬುಸಾಬ ಕಡ್ಡಿಪುಡಿ, ಗುಂಡಪ್ಪ ಗಂಗಾವತಿ, ಬಾಬು ಉಪ್ಪಾರ,ಹಾಗೂ ಮೈಬುಸಾಬ ಬಾರಿಗಿಡ, ನೈಮಲ್ಯ ಅಧಿಕಾರಿಯಾದ ಆರೀಪ್ ಹುನ್ನಿಸಾ , ಕಂದಾಯ ವಿಭಾಗದ ಅಧಿಕಾರಿ ಅಂತೋಣಿ ರಾಜ್ , ನಿಸಾರ್ ಅಹಮದ್, ರಂಗನಾಥ್ ತಳವಾರ ,ಹಾಗೂ ಬಸವರಾಜ ಬಂಕದಮನೆ, ಮುದಗಲ್ಲ ಕರವೇ ಸಂಘಟನೆ ಕಾರ್ಯದರ್ಶಿ ಎಸ್.ಎನ್.ಖಾದ್ರಿ, ನಗರ ಘಟಕ ಅಧ್ಯಕ್ಷ ಸಾಬು ಹುಸೇನ್, ಜಮೀರ್ ಪಾಶ,ಅನೀಪ್,ಖಾನ್ ,ಜಮಾಲಿಸಾಬ,ರಹೇಮಾನ್ ದುಲಾ ಜಂಬಾಳಿ ಸೇರಿದಂತೆ ಇತರರು ಇದ್ದರು.
ವರದಿ:- ಮಂಜುನಾಥ ಕುಂಬಾರ