ಮುದಗಲ್ಲ :- ಔಷದ ವಿತರಕರ ಸಂಘದ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಥ೯ ಪೂಣ೯ ಆಚರಣೆ ..

ಮುದಗಲ್ಲ ವರದಿ…

ಮುದಗಲ್ಲ :- ಔಷದ ವಿತರಕರ ಸಂಘದವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಥ೯ ಪೂಣ೯ ಆಚರಣೆ ..

 

ವೈದ್ಯಕೀಯ ಸೇವೆ ವ್ಯಾಪಾರ ಆಗದೆ ಸೇವೆಯೇ ಮುಖ್ಯ ಧ್ಯೇಯವಾಗಬೇಕು:-ಡಾ!! ಎಂ ವಿ ಜೋಶಿ..

ಮುದಗಲ್ಲ :- ಔಷದ ವಿತರಕರ ಸಂಘದ ವತಿಯಿಂದ ಬುಧವಾರ ಮಹಾಂತೇಶ್ ಮಠದ ಹತ್ತಿರ ಇರುವ ಔಷಧಿ ವತ೯ಕರಾದ ರಾಘವೇಂದ್ರ ಸುರಪುರ ಅವರ ವಸತಿ ನಿಲಯದಲ್ಲಿ ವೈದ್ಯರ ದಿನಾಚರಣೆಯನ್ನು ವಿತರಕರ ಸಂಘದ ವತಿಯಿಂದ ಆಚರಣೆ ಮಾಡಲಾಯಿತು.

ಡಾ. ಬಿಧನ್ ಚಂದ್ರ ರಾಯ್ ಅವರ ಭಾವಚಿತ್ರ ಹೂಮಾಲೆ ಹಾಕಿ ಗೌರವ ನಮನ ಸಲ್ಲಿಸಿದರು ನಂತರ ಕೇಕ್ ಕತ್ತರಿಸುವ ಮೂಲಕ ಕಾಯ೯ ಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಹಿರಿಯ ವೈದ್ಯರಾದ ಎಂ ವಿ ಜೋಶಿ ಅವರು ವೈದ್ಯರನ್ನು ಪ್ರತ್ಯಕ್ಷ ದೇವರು ಎಂದೇ ಕರೆಯಲಾಗುತ್ತದೆ. ಅದಕ್ಕೆ ಅರ್ಥ ಬರಬೇಕಾದರೆ ತ್ರಿಕರಣ ಶುದ್ಧಿಯಿಂದ ಸೇವೆ ಸಲ್ಲಿಸಬೇಕು. ಹಣ ಸಂಪಾದನೆ ಮುಖ್ಯ ಆಗಬಾರದು. ಹಾಗಾದರೆ ಸಮಾಜದಲ್ಲಿ ಗೌರವ ಮತ್ತು ಸ್ಥಾನ ಮಾನಗಳು ಸಿಗುತ್ತವೆ ಜನರ ವೈದ್ಯರ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ ಬಂದ ರೋಗಿಗಳನ್ನು ತಾಯಿಯಂತೆ ಮಮತೆಯಿಂದ ಮತ್ತು ಭರವಸೆ ಯ ನುಡಿಗಳನ್ನು ಜನರ ಆಶೋತ್ತ ರಗಳಿಗೆ ಪ್ರತಿಕ್ರಿಯಿಸಿ ಗುಣಮಟ್ಟದ ಚಿಕಿತ್ಸೆ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ನಂತರ ಮಾತನಾಡಿದ ಡಾ!! ಗುರುರಾಜ ದೇಶಪಾಂಡೆ ಮಾತನಾಡಿದರು ವೈದ್ಯನು ಸದಾ ಜಾಗೃತನಾದರೂ . ಅವನು ಮಾಡಬಹುದಾದ ಒಂದು ಸಣ್ಣತಪ್ಪು ಒಂದು ಜೀವಕ್ಕೆ ಕುತ್ತಾಗಬಹುದು. ಹೀಗಾಗಿ ಪ್ರತಿಕ್ಷಣದಲ್ಲಿಯೂ ಮೈಯೆಲ್ಲ ಕಣ್ಣಾಗಿಟ್ಟುಕೊಂಡಿರಬೇಕು.ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅನೇಕ ಜೀವಗಳನ್ನು ಉಳಿಸಿದ್ದನ್ನು ನಾವೆಲ್ಲ ನೋಡಿದ್ದೆವೆ. ಇದು ಯಾವುದೇ ಕಠಿಣ ಸಂದರ್ಭಕ್ಕಾಗಿ ಜನರ ಪ್ರಾಣರಕ್ಷಣೆಗೆ ವೈದ್ಯ ಸಮೂಹ ನಿಲ್ಲುತ್ತದೆ ಎಂದು ಹೇಳಿದರು.

ಕಾಯ೯ಕ್ರಮ ಉದ್ದೇಶಿಸಿ ಮಾತನಾಡಿದ ಪತ್ರಕರ್ತ ರಾದ ಶಶಿಧರ್ ಕಂಚಿಮಠ ಅವರು ವೈದ್ಯೋ ನಾರಾಯಣೋ ಹರಿ ಎಂಬ ಉಕ್ತಿಯ ಮೂಲಕ ವೈದ್ಯರಲ್ಲಿ ದೇವರನ್ನು ಕಾಣುವ ಪರಂಪರೆ ನಮ್ಮದು. ವೈದ್ಯರ ಪಾತ್ರ ಹಾಗೂ ನಿಸ್ವಾರ್ಥ ಭಾವದಿಂದ ನೀಡುವ ಆಹಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವೈದ್ಯ’ಎಂಬ ಪದವೇ
ಮಾನವೀಯತೆಗೆ ಸಮಾನಾರ್ಥಕವಾಯಿತು. ಆಪತ್ತು ಸಂದರ್ಭದಲ್ಲೂ ತಮ್ಮ ಕರ್ತವ್ಯ ದಿಂದ ಹಿಂದೆ ಸರಿಯದೆ ಸೇವೆ ಸಲ್ಲಿಸಿದ ವೈದ್ಯರ ಸೇವೆ ಶ್ಲಾಘನೀಯ ಎಂದರು

ನಂತರ ಮಾತನಾಡಿದ ಡಾ!! ವಿಶ್ವನಾಥ ಮಾಟೂರು ಇಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರವು ಅಪಾರ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ. ತಾಂತ್ರಿಕ ಸುಧಾರಣೆ, ಸಂಶೋಧನೆ, ವೈದ್ಯಕೀಯ ಉಪಕರಣಗಳ ಅಭಿವೃದ್ಧಿ ಎಲ್ಲವೂ ಆರೋಗ್ಯ ವಲಯಕ್ಕೆ
ಹೊಸ ಮೈಲು ಗಲ್ಲುಗಳನ್ನು ನುಡಿಸುತ್ತಿವೆ. ಆದರೆ ಇದರ ಜೊತೆಗೆ, ವೈದ್ಯರ ಮೇಲೆ ಬಿದ್ದಿರುವ ಜವಾಬ್ದಾರಿಯೂ ಹೆಚ್ಚಾಗಿದೆ ಎಂದರು

ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಸಂಗಮೇಶ ಸರಗಣಾಚಾರಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಡಾ!!ವಿಷ್ಣುವರ್ಧನ್ ಸುಗೂರು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ, ದೊಡ್ಡನಗೌಡ ಪಾಟೀಲ್ ಕನ್ನಾಳ, ಮುದಿವೀರಪ್ಪ ಜೀಡಿ, ಬಸವರಾಜ ಕರಡಿ, ರಾಜು ಬುಜರಕರ್, ರಾಘವೇಂದ್ರ ಸುರುಪುರ,ಆಲಂಖಾನ್, ಶರಣಬಸವ ಅಂಗಡಿ, ನಾಗರಾಜ,
ಮಂಜುನಾಥ ಹಾಗೂ ಇತರರು ಇದ್ದರು.

ವರದಿ :- ಮಂಜುನಾಥ ಕುಂಬಾರು

Prajavikshane

Chandru R Bhanapaur

Leave a Reply

error: Content is protected !!