You are currently viewing LOCAL NEWS : ಯಲಬುರ್ಗಾ ತಾಲೂಕಿನ ತಾಂಡಾಗಳಲ್ಲಿ ವರದಕ್ಷಿಣೆ ನಿರ್ಮೂಲನೆಗೆ ಗೋರ ಸೇನಾ ಸಾಮಾಜಿಕ ಸಂಘಟನೆಯಿಂದ ಜನಜಾಗೃತಿ ಅಭಿಯಾನ!

LOCAL NEWS : ಯಲಬುರ್ಗಾ ತಾಲೂಕಿನ ತಾಂಡಾಗಳಲ್ಲಿ ವರದಕ್ಷಿಣೆ ನಿರ್ಮೂಲನೆಗೆ ಗೋರ ಸೇನಾ ಸಾಮಾಜಿಕ ಸಂಘಟನೆಯಿಂದ ಜನಜಾಗೃತಿ ಅಭಿಯಾನ!

LOCAL NEWS : ಯಲಬುರ್ಗಾ ತಾಲೂಕಿನ ತಾಂಡಾಗಳಲ್ಲಿ ವರದಕ್ಷಿಣೆ ನಿರ್ಮೂಲನೆಗೆ ಗೋರ ಸೇನಾ ಸಾಮಾಜಿಕ ಸಂಘಟನೆಯಿಂದ ಜನಜಾಗೃತಿ ಅಭಿಯಾನ!

 ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ  : 

ಯಲಬುರ್ಗಾ, ಜುಲೈ 3: ವರದಕ್ಷಿಣೆ ನಿರ್ಮೂಲನೆ, ಮದುವೆಗಳಲ್ಲಿ ದುಂದು ವೆಚ್ಚ ನಿಯಂತ್ರಣ ಹಾಗೂ ಒಳ ಮೀಸಲಾತಿಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಯಲಬುರ್ಗಾ ತಾಲೂಕಿನ ವಿವಿಧ ತಾಂಡಾಗಳಲ್ಲಿ ಜನಜಾಗೃತಿ ಸಭೆ ನಡೆಯಿತು.

ಸಭೆಯಲ್ಲಿ ಗೋರ ಸೇನಾ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಳೂಟಗಿ ಮಾತನಾಡಿ, ವರದಕ್ಷಿಣೆ ನೀಡುವುದು ಹಾಗೂ ಪಡೆಯುವುದು ಕಾನೂನುಬಾಹಿರವಾಗಿದ್ದು, ಈ ಅನಿಷ್ಠ ಪದ್ಧತಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ಕರೆ ನೀಡಲಾಯಿತು. ಮದುವೆಗಳನ್ನು ಸರಳವಾಗಿ ಆಚರಿಸುವ ಅಗತ್ಯ ಹಾಗೂ ಸಾಮಾಜಿಕ ಸಮಾನತೆ ಸಾಧನೆಯಲ್ಲಿ ಒಳ ಮೀಸಲಾತಿಯ ಮಹತ್ವವನ್ನು ಜನರಿಗೆ ವಿವರಿಸಲಾಯಿತು.

ಯಲಬುರ್ಗಾ, ಚಿಕ್ಕೊಪ್ಪ, ಬಳೂಟಗಿ, ಚಿಕ್ಕಬನ್ನಿಗೋಳ, ತುಮ್ಮರಗುದ್ಧಿ, ಮಾರನಾಳ, ದಮ್ಮೂರ, ತಲ್ಲೂರು, ಗೆದಗೇರಿ, ಚಿಕ್ಕಮ್ಯಾಗೇರಿ ಹಾಗೂ ಮುರಡಿ ತಾಂಡಾಗಳ ನಾಯಕರು, ಹಿರಿಯರು ಮತ್ತು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಸಹಕರಿಸಿದ ಎಲ್ಲರಿಗೂ ಗೋರ ಸೇನಾ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಳೂಟಗಿ ಅವರು ಕೃತಜ್ಞತೆ ಸಲ್ಲಿಸಿದರು. ಜೊತೆಗೆ, ಗೋರ ಸೇನಾ ಯಲಬುರ್ಗಾ ತಾಲೂಕು ಅಧ್ಯಕ್ಷ ಶಿವಮೂರ್ತಿ ರಾಠೋಡ ಸೇರಿದಂತೆ ಹಲವು ಮುಖಂಡರ ಸೇವೆಯನ್ನು ಸ್ಮರಿಸಲಾಯಿತು.

ಸಭೆಯ ಅಂತ್ಯದಲ್ಲಿ ಅನಿಷ್ಟ ಪದ್ಧತಿಗಳ ನಿರ್ಮೂಲನೆಗಾಗಿ ಎಲ್ಲರೂ ಸಾಮಾಜಿಕ ಜಾಗೃತಿಗೆ ಕೈಜೋಡಿಸಬೇಕೆಂದು ಕರೆ ನೀಡಲಾಯಿತು.

Prajavikshane

Chandru R Bhanapaur

Leave a Reply

error: Content is protected !!