ಮುದಗಲ್ಲ ವರದಿ..
ಸುತ್ತ ಮುತ್ತಲಿನ ನಿವಾಸಿಗಳಿಗೆ ಗಬ್ಬು ವಾಸನೆ!
ಮುದಗಲ್ಲ :- ಪಟ್ಟಣದ ವಾಡ೯ 22 ಖಾದ್ರಿ ಕಾಲೋನಿ ಕೊಳಚೆ ನೀರು ನಿಂತು ಗಬ್ಬುನಾರುತ್ತಿದೆ. ಇದರಿಂದ ಈ ಚರಂಡಿಯ ಸುತ್ತಮುತ್ತಲಿನ ನಿವಾಸಿಗಳ ಗೋಳು ತೀರದಾಗಿದೆ.
ಈ ಚರಂಡಿ ಸುತ್ತಮುತ್ತಲೇ ಕುಟುಂಬಗಳು ವಾಸಿಸುತ್ತಿವೆ. ಈ ಚರಂಡಿಯ ಸಮಸ್ಯೆ ಯಾವಾಗ ಬಗೆಹರಿಯುತ್ತದೋ ಎಂಬ ಆಶಾಭಾವನೆಯೊಂದಿಗೆ ಅಲ್ಲಿನ ಜನರು ದಿನ ದೂಡುತ್ತಿದ್ದಾರೆ
ಇದರಿಂದ ಇಲ್ಲಿ ಹೂಳು ತುಂಬಿಕೊಂಡು ಸದಾ ಕೊಳಚೆ ನೀರು ನಿಂತಲ್ಲೇ ನಿಂತಿರುತ್ತದೆ. ಇದು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದು, ಸುತ್ತಮುತ್ತಲಿನ ಜನರು ಸೊಳ್ಳೆ ಕಾಟ ತಡೆಯಲಾಗದೇ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಚರಂಡಿಯಲ್ಲಿ ಸದಾ ಕೊಳಚೆ ನೀರು ತುಂಬಿರುತ್ತದೆ. ಯಾವಾಗಲೂ ಇದು ಗಬ್ಬುನಾರುತ್ತಿರುತ್ತದೆ. ಇದರಿಂದ ಸೊಳ್ಳೆಗಳು ವಿಪರೀತವಾಗಿದೆ. ಈ ಅನೈರ್ಮಲ್ಯದಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ಸ್ಥಳೀಯ ಪುರಸಭೆಯ ಸಂಬಂಧಿಸಿದ ಅಧಿಕಾರಿಗಳು ಈ ಚರಂಡಿ ಯನ್ನು ಕೊಳಚೆ ಯನ್ನು ತೆಗಯಬೇಕು ಎಂದು ಸಲ್ಲಿಂ ಸಾಬ ನಿವಾಸಿ ಪತ್ರಿಕೆ ಮಾಹಿತಿ ನೀಡಿದರು.