ಮುದಗಲ್ಲ ಪೋಲಿಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಕುಂದು–ಕೊರತೆ ಸಭೆ.‌

ಮುದಗಲ್ಲ ವರದಿ…

ಮುದಗಲ್ಲ ಪೋಲಿಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಕುಂದು–ಕೊರತೆ ಸಭೆ.‌

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು– ಕೊರತೆ ಸಭೆಯು ಪಿ ಎಸ್ ಐ ವೆಂಕಟೇಶ್ ಮಾಡಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುದಗಲ್ಲ ಪೋಲಿಸ್ ಠಾಣೆಯ ಪಿ.ಎಸ್ ಐ ವೆಂಕಟೇಶ್ ಮಾಡಗೇರಿ ಅವರು ‘ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮಾದಕ ವಸ್ತುಗಳಿದ ದೂರ ಇರುವಂತೆ, ಅದರಲ್ಲಿಯೂ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ತುತ್ತಾಗಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದರು.

ಶಾಲೆ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಮೇಲೆ
ಪೋಷಕರು ನಿಗಾ ವಹಿಸಬೇಕೆಂದು ಹೇಳಿದರು.

ಸಣ್ಣ ಸಣ್ಣ ಮಕ್ಕಳಿಗೆ ದ್ವಿಚಕ್ರ ವಾಹನಗಳನ್ನು ನೀಡಿ
ಅನಾಹುತಗಳನ್ನು ತಂದು ಕೊಳ್ಳಬೇಡಿ. ಇತ್ತೀಚಿಗೆ ಹಲವಾರು ಘಟನೆಗಳು ಸಣ್ಣ ಸಣ್ಣ ಮಕ್ಕಳಿಂದ ವಾಹನ ಅಪಘಾತಗಳ ಮೂಲಕ ಉಂಟಾಗುತ್ತಿದ್ದು ಪೋಷಕರು ಎಚ್ಚರಿಕೆ ವಹಿಸಿಕೊಳ್ಳು ವಂತೆ ತಿಳಿಸಿದರು.

ದಲಿತರ ಮೇಲೆ ದೌರ್ಜನ್ಯಗಳು ನಡೆದಾಗ ತಕ್ಷಣ ಠಾಣೆಗೆ
ತಿಳಿಸಿ, ಏನಾದರೂ ತುರ್ತು ಸಂದರ್ಭಗಳಲ್ಲಿ ಇದ್ದರೆ ತಕ್ಷಣ
112 ಗೆ ಕರೆ ಮಾಡಿ ಮಾಹಿತಿ ಯನ್ನು ನೀಡುವಂತೆ ತಿಳಿಸಿದರು.ತಮ್ಮ ತಮ್ಮ ಮನೆಯ ಪರಿಸರಗಳಲ್ಲಿ ಯಾವುದಾದರೂ

ಕಾನೂನುಬಾಹಿರ ಚಟುವಟಿ ಕೆಗಳು ತಿಳಿದುಬಂದರೆ ಕೂಡಲೇ
ಠಾಣೆಗೆ ಮಾಹಿತಿಯನ್ನು ನೀಡುವಂತೆ ಸೂಚಿಸಿದರು.ಮುಂದಿನ ದಿನಗಳಲ್ಲಿ ಪ್ರತಿ ಭಾನುವರ ಭೇಟಿ ನೀಡಿ ಸಭೆ ನಡೆಸಿ ಕಾನೂನು ಅರಿವು ಕಾರ್ಯಕ್ರಮ ನೀಡು ವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಂಗಪ್ಪ ಹಿರೇಮನಿ, ಬಸವರಾಜ ಬಂಕದ ಮನೆ, ವೆಂಕಟೇಶ್ ಹಿರೇಮನಿ, ಮೌನೇಶ ಚಲುವಾದಿ,ನಾಗರಾಜ ತಳವಾರ, ಹುಲಗಪ್ಪ ಚಲುವಾದಿ, ಹನುಮಂತ ಬಡಿಗೇರ್ ,ಬಸವರಾಜ ಬುಲೆಟ್,ಹನಮಂತ ಆಶಿಹಾಳ ಸಭೆಯಲ್ಲಿ ಹಲವು ಮಂದಿ ಪೋಲಿಸ್ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ :-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!