You are currently viewing FLASH NEWS ಒಳ ಮೀಸಲಾತಿ ಜಾರಿ ವಿರೋಧಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಂಜಾರ ಸಮುದಾಯದವರಿಂದ ಮನವಿ!

FLASH NEWS ಒಳ ಮೀಸಲಾತಿ ಜಾರಿ ವಿರೋಧಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಂಜಾರ ಸಮುದಾಯದವರಿಂದ ಮನವಿ!

ಪ್ರಜಾ ವೀಕ್ಷಣೆ ಸುದ್ದಿ : 

FLASH NEWS ಒಳ ಮೀಸಲಾತಿ ಜಾರಿ ವಿರೋಧಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಂಜಾರ ಸಮುದಾಯದವರಿಂದ ಮನವಿ!

ಕೊಪ್ಪಳ : ಕುಕನೂರು ಬಂಜಾರ ಸಮಾಜದ ವತಿಯಿಂದ ಒಳ ಮೀಸಲಾತಿ ಜಾರಿ ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಂದು ಮನವಿ ಸಲ್ಲಿಸಿದರು.

ಈ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, “ಒಳ ಮೀಸಲಾತಿಯಲ್ಲಿ ನಾವೆಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಿದ್ದೇವೆ. ಇದನ್ನ ಆಯಾ ಸಮುದಾಯದ ಮುಖಂಡರು ಒಪ್ಪಿಕೊಂಡಿದ್ದಾರೆ” ಎಂದು ಬಂಜಾರ ಸಮುದಾಯದ ಮುಖಂಡರ ಕೆಂಗಣ್ಣಿಗೆ ಗುರಿಯಾದ ಘಟನೆ ಕೂಡ ನಡೆಯಿತು.

ಇದೇ ಸಂದರ್ಭದಲ್ಲಿ ಗೋರ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ, ತಾಲೂಕ ಬಂಜಾರ ಸಮುದಾಯ ಮುಖಂಡರಾದ ಮೇಘರಾಜ್ ನಾಯಕ್, ಹಂಪಣ್ಣ ಕಟ್ಟಿಮನಿ, ಯಮನಪ್ಪ ಕಟ್ಟಿಮನಿ, ಯಮನೂರ ಭಾನಾಪುರ, ಕುಮಾರ್ ಬಳಗೇರಿ, ಪ್ರಕಾಶ್ ಬಳಗೇರಿ, ಶ್ರೀಕಾಂತ್ ಕಟ್ಟಿಮನಿ, ವಿಶ್ವನಾಥ್ ಕುಣಿಗೇರಿ, ಹನುಮಂತಪ್ಪ ಚವಾಣ್ ಹಾಗೂ ಇನ್ನಿತರರು ಇದ್ದರು.

Prajavikshane

Chandru R Bhanapaur

Leave a Reply

error: Content is protected !!