ಕುಕನೂರ : ಇಂದು ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ತಳಕಲ್, ಮಂಡಲಗೇರಿ, ಇಟಗಿ, ರಾಜೂರ, ಮಸಬಹಂಚಿನಾಳ, ಬೆಣಕಲ್ ಮತ್ತು ಭಾನಾಪೂರ ಗ್ರಾಮ ಪಂಚಾಯತಿಗಳ ಕೂಸಿನ ಮನೆಗೆ ಮೊಬೈಲ್ ಕ್ರೇಶ್ ಸಂಸ್ಥೆ ಬೆಂಗಳೂರು ತಂಡದ ಶಶಿಧರ್ ಮತ್ತು ರಜಿನಿ ಎಚ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಕೂಸಿನ ಮನೆಯಲ್ಲಿ ಮಕ್ಕಳ ಹಾಜರಾತಿ, ಗುಣಮಟ್ಟದ ಆಹಾರ, ವಿತರಣೆ, ದಾಖಲಾತಿಗಳ ನಿರ್ವಹಣೆ,ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಮಾಹಿತಿ, ಹಾಡು, ನೃತ್ಯ, ಆರೋಗ್ಯ ತಪಾಸಣೆ, ಪೋಷಕರ ಸಭೆ, ಮತ್ತು ಕೂಸಿನ ಮನೆ ಮೇಲ್ವಿಚಾರಣಾ ಸಭೆ ಮುಂತಾದವುಗಳ ಬಗ್ಗೆ ಕೂಸಿನ ಮನೆಯಲ್ಲಿ ಕೆಲಸ ಮಾಡುತ್ತಿರುವ ಕೇರ್ ಟೆಕರ್ ಗಳಿಂದ ಮಾಹಿತಿ ಪಡೆದರು.
ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಕೆರ್ ಟೇಕರ್ ಅವರು ಮನೆ ಮನೆ ಭೇಟಿ ನೀಡಿ ಕರೆದುಕೊಂಡು ಬರಬೇಕು.
ಜಿಲ್ಲಾ ಪಂಚಾಯತಿಯಲ್ಲಿ ನಿರ್ಧರಿಸಿದ ಆಹಾರ ಮೆನುವಿನ ಪ್ರಕಾರ ಪೌಷ್ಠಿಕ ಆಹಾರ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಬೇಕು ಕಡಿಮೆ ತೂಕದ ಮಕ್ಕಳು ಕಂಡುಬಂದಲ್ಲಿ ಅಂತವರಿಗೆ ಹೆಚ್ಚುವರಿ ಆಹಾರ ಒದಗಿಸಬೇಕು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಟಿಕೆ ಸಾಮಗ್ರಿಗಳು ಇರುವಂತೆ ನೋಡಿಕೊಳ್ಳಬೇಕು, ಪ್ರತೀ ತಿಂಗಳು ಪೋಷಕರ ಸಭೆ, ಕೂಸಿನ ಮನೆ ಮೇಲುಸ್ತುವಾರಿ ಸಮಿತಿ ಸಭೆಗಳನ್ನು ಕಡ್ಡಾಯವಾಗಿ ಆಯೋಜನೆ ಮಾಡದಲ್ಲಿ ಕೂಸಿನ ಮನೆಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿ ನಿರ್ವಹಣೆಯಾಗುತ್ತವೆ. ಕೇಂದ್ರ ಗ್ರಾಮ ಪಂಚಾಯತಿಗೆ ಒಂದೆ ಇರುವುದರಿಂದ ಎಲ್ಲಾ ಗ್ರಾಮಗಳ ಜನರ 3 ವರ್ಷದೊಳಗಿನ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಅದಕ್ಕಾಗಿ ವಾರ್ಡ ಸಭೆ, ಗ್ರಾಮ ಸಭೆ, ಸಾಮಾನ್ಯ ಸಭೆಯಲ್ಲಿ ಎಂದು ತಿಳಿಸಿದರು.
ತಳಕಲ್ ಗ್ರಾಮಕ್ಕೆ ತಂಡವು ಭೇಟಿ ನೀಡಿದಾಗ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೀರನಗೌಡ ಚೇನ್ನವೀರಗೌಡ್ರ ಮಾತನಾಡಿ ಕೂಸಿನ ಮನೆಗಳು ಗ್ರಾಮದ 3 ವರ್ಷದೊಳಗಿನ ಮಕ್ಕಳಗೆ ಆರೈಕೆ, ಪೌಷ್ಠಿಕ ಆಹಾರ, ಶಿಕ್ಷಣ ಒದಗಿಸುವ ಕೇಂದ್ರಗಳಾಗಿವೆ, ಇದರೊಂದೊಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 8 ಜನ ಆರೈಕೆದಾರರಿಗೆ ನಿರಂತರ 100 ಕೆಲಸ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾನ್ಯ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಶರಣಪ್ಪ ಕೆಳಗಿನ ಮನಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸಿದ್ದನಗೌಡ ರಬ್ಬನಗೌಡ್ರ, ವೈಜನಾಥ ಸಾರಂಗಮಠ, ಪ್ರಕಾಶ್ ಶಿಡ್ನಳ್ಳಿ, ರಮೇಶ್ ತಿಮ್ಮಾರಡ್ಡಿ, ಸುರೇಶ್ ಕಾವಳೆ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ RG Fellow ಸೀಮಾ ಕೌಸರ್, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ, ಕೇರ್ ಟೇಕರ್ ಹಾಜರಿದ್ದರು.