BIG NEWS : ಪ್ರಭಾರಿ ಡಿಡಿಪಿಐಯಾಗಿ ಯಲಬುರ್ಗಾ ಬಿಇಓ ಸೋಮಶೇಖರ್ ಗೌಡ ಪಾಟೀಲ್‌ ನೇಮಕ..!!

You are currently viewing BIG NEWS : ಪ್ರಭಾರಿ ಡಿಡಿಪಿಐಯಾಗಿ ಯಲಬುರ್ಗಾ ಬಿಇಓ ಸೋಮಶೇಖರ್ ಗೌಡ ಪಾಟೀಲ್‌ ನೇಮಕ..!!

ಪ್ರಜಾ ವೀಕ್ಷಣೆ ಸುದ್ದಿ :

BIG NEWS : ಪ್ರಭಾರಿ ಡಿಡಿಪಿಐಯಾಗಿ ಯಲಬುರ್ಗಾ ಬಿಇಓ ಸೋಮಶೇಖರ್ ಗೌಡ ಪಾಟೀಲ್‌ ನೇಮಕ..!!

 

ಕೊಪ್ಪಳ : ಕೊಪ್ಪಳ ಡಿಡಿಪಿಐ ಶ್ರೀಶೈಲ್ ಬಿರಾದಾ‌ರ್ ಅವರನ್ನು ಸರ್ಕಾರ ಡಿಡಿಪಿಐ ಹುದ್ದೆಯಿಂದ ಬಿಡುಗಡೆ ಮಾಡಿದ್ದು, ಅವರ ಸ್ಥಾನಕ್ಕೆ ಯಲಬುರ್ಗಾ ಬಿಇಓ ಸೋಮಶೇಖರ್ ಗೌಡ ಪಾಟೀಲ್‌ ಅವರನ್ನು ಪ್ರಭಾರಿಯಾಗಿ ಉಪ ನಿರ್ದೇಶಕರಾಗಿ ನೇಮಿಸಿ ಆದೇಶ ಹೊರಡಿಸಿದೆ.

ಈ ಹಿಂದೆ ಶಿಕ್ಷಕರ ನಿಯೋಜನೆಯಲ್ಲಿ ಅಕ್ರಮದ ಆರೋಪದಲ್ಲಿ ಪ್ರಮುಖ ಪಾತ್ರದ ಆರೋಪವೂ ಶ್ರೀಶೈಲ್ ಬಿರಾದಾ‌ರ್ ಅವರ ಮೇಲಿದ್ದು, ಆ ಪ್ರಕರಣ ತನಿಖೆ ಹಂತದಲ್ಲಿದೆ ಎಂದು ಮಾಹಿತಿ ಇದೆ. ಇದರ ಜೊತೆಗೆ ಕೊಪ್ಪಳ ಜಿಲ್ಲೆಯ ಹಲವಡೆ ಶಿಕ್ಷಕರ ನಿಯೋಜನೆಯಲ್ಲಿ ಹಣ ಪಡೆದ ನೇಮಿಸಿರುವ ಎಂಬ ಆರೋಪವೂ ಶ್ರೀಶೈಲ್ ಅವರ ಮೇಲೆ ಇದೆ ಎಂದು ಗುಮಾನಿ ಇದೆ.

ಇವರ ಸ್ಥಾನಕ್ಕೆ ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೋಮಶೇಖ‌ರ್ ಗೌಡ ಪಾಟೀಲ್‌ ಅವರನ್ನು ಪ್ರಭಾರಿ ಡಿಡಿಪಿಐಯಾಗಿ ನೇಮಿಸಲಾಗಿದ್ದು, ಇವರ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದ್ದು, ಶಿಕ್ಷಣ ಪ್ರೇಮಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Leave a Reply

error: Content is protected !!