LOCAL NEWS : ಲೋಕಕಲ್ಯಾಣಕ್ಕಾಗಿ ಸಂಪನ್ನಗೊಂಡ ಗಾಳಿ ದುರ್ಗಾದೇವಿ ವಿಶೇಷ ಪೂಜೆ!

You are currently viewing LOCAL NEWS : ಲೋಕಕಲ್ಯಾಣಕ್ಕಾಗಿ ಸಂಪನ್ನಗೊಂಡ ಗಾಳಿ ದುರ್ಗಾದೇವಿ ವಿಶೇಷ ಪೂಜೆ!

LOCAL NEWS : ಲೋಕಕಲ್ಯಾಣಕ್ಕಾಗಿ ಸಂಪನ್ನಗೊಂಡ ಗಾಳಿ ದುರ್ಗಾದೇವಿ ವಿಶೇಷ ಪೂಜೆ!

ಕುಕನೂರು : ಸಂಪನ್ನ ಮಳೆ, ಬೆಳೆಯೊಂದಿಗೆ ಲೋಕಕಲ್ಯಾಣರ್ಥಕ್ಕಾಗಿ ಶ್ರೀಗಾಳಿ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಸಂಪನ್ನಗೊಳಿಸಿ ಅನ್ನ ಸಂತರ್ಪಣೆಯನ್ನು ಆಯೋಜಿಸಲಾಯಿತು.

ತಾಲೂಕಿನ ಮಂಡಲಗಿರಿ ಗ್ರಾಮದ ಶ್ರೀ ಗಾಳಿ ದುರ್ಗಾದೇವಿ ದೇವಸ್ಥಾನದಲ್ಲಿ ವರ್ಷದ ಪ್ರತಿ ಸಿಹಿ ಹುಣ್ಣಿಮೆಯ ದಿನದಂದು ಲೋಕಕಲ್ಯಾಣರ್ಥವಾಗಿ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನೆರವೇರಿಸುತ್ತಾ ಬಂದಿದ್ದು ಈ ವರ್ಷವೂ ಸಹ ದೇವಸ್ಥಾನದಲ್ಲಿ ಬೆಳಗಿನ ಜಾವದಿಂದ ವಿಶೇಷ ಪೂಜಾ ವಿಧಿ ವಿಧಾನ ಅಭಿಷೇಕ ಇತ್ಯಾದಿಗಳನ್ನು ನೆರ್ವೇರಿಸಲಾಯಿತು ನಂತರ ಭಕ್ತರು ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವುದರೊಂದಿಗೆ ತಮ್ಮ ಇಷ್ಟಾರ್ಥಗಳನ್ನು ಶ್ರೀ ಗಾಳಿ ದುರ್ಗಾದೇವಿಗೆ ಸಮರ್ಪಿಸುವುದರೊಂದಿಗೆ ದೇವಿ ಕೃಪೆಗೆ ಪಾತ್ರರಾದರು.

ನಂತರ ಮಧ್ಯಾಹ್ನದ ವೇಳೆಗೆ ಮಹಾಪ್ರಸಾದದ ಅನ್ನದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಯಿತು, ವಿವಿಧ ಬಗೆ ಬಗೆಯ ಭಕ್ಷಗಳನ್ನು ಭಕ್ತರಿಗೆ ಗಾಳಿ ದುರ್ಗಾದೇವಿ ದೇವಸ್ಥಾನದ ಕಾಲೋನಿಯ ಮಹಿಳಾ ತಂಡದವರು ಅನ್ನ ಸಂತರ್ಪಣೆಯಲ್ಲಿ ವಿತರಿಸಿದರು.

ಈ ವೇಳೆಯಲ್ಲಿ ಪೂಜಾ ವಿಧಿ ವಿಧಾನಗಳನ್ನು ಶಿವಶರಣಯ್ಯ ಹಿರೇಮಠ ನೆರವೇರಿಸಿದರು. ಪ್ರಮುಖರಾದ ಮಲ್ಲಯ್ಯ ಗದುಗಿನ, ವೀರನಗೌಡ ತೋಟಗಂಟಿ, ಭೀಮರೆಡ್ಡಿ ಕರ್ಮಡಿ, ಹನುಮಂತಪ್ಪ ಕೊನಾರಿ, ಜಯಪ್ರಕಾಶ್ ಗೌಡ ಪೊಲೀಸ್ ಪಾಟೀಲ, ವಿಶ್ವನಾಥ ಹೋರಪೇಟೆ, ಗೊಳನಗೌಡ ಮಾಲಿಪಾಟೀಲ, ಈಶ್ವರಯ್ಯ ಚಂದ್ರಗಿರಿ, ಶಿವನಗೌಡ ಬಿನ್ನಾಳ, ದೇವಪ್ಪ ದಳವಾಯಿ, ವಿಶ್ವನಾಥ ಹಿರೇಗೌಡರ್, ಮಾರುತಿ ಗೊಲ್ಲರ್, ಶರಣಯ್ಯ ಗದಗಿನ, ಹಂಚಳಪ್ಪ ಸಂಗಟಿ,ಅಶೋಕ್ ಗಾಣಿಗೇರ, ಮಾರುತಿ ಭಜಂತ್ರಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

error: Content is protected !!