ಪ್ರಜಾ ವೀಕ್ಷಣೆ ಸುದ್ದಿಜಾಲ :
BREAKING : ಕುಕನೂರು-ಯಲಬುರ್ಗಾ ತಾಲೂಕಿನಲ್ಲಿ ಒಟ್ಟು 900 ಎಕರೆ ರೈತರ ಭೂಮಿ ಮೇಲೆ ವಕ್ಫ್ ಮಂಡಳಿಯ ಋಣ..!
ಕುಕನೂರು : ‘ಕುಕನೂರು ಯಲಬುರ್ಗಾ ತಾಲೂಕಿನಲ್ಲಿ ಒಟ್ಟು 900 ಎಕರೆ ರೈತರ ಭೂಮಿ ಅನಧಿಕೃತವಾಗಿ ವಕ್ಫ್ ಮಂಡಳಿಗೆ ಪಹಣಿಯ 11ನೇ ಕಲಂನಲ್ಲಿ ಋಣ ಎಂದು ನಮೂದಿಸಲಾಗಿದೆ’ ಎಂದು ರಾಜ್ಯ ಕ್ರಾಂತಿಕಾರಿ ರೈತ ಸೇನಾ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಎನ್ಎಂ ಕುಕನೂರ್ ಅವರು ತಿಳಿಸಿದರು.
ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದವರು ಈ ಕುರಿತು ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದಾರೆ.
“ಕುಕನೂರು ತಾಲೂಕಿನಲ್ಲಿ ಸರಿಸುಮಾರು 700 ಎಕರೆ ಹಾಗೂ ಯಲಬುರ್ಗಾ ತಾಲೂಕಿನಲ್ಲಿ 200 ಎಕರೆ ರೈತರ ಜಮೀನಿಗೆ ವಕ್ಫ್ ಮಂಡಳಿ ಪಹಣಿಯ 11ನೆಯ ಕಾಲದಲ್ಲಿ ಋಣ ಎಂದು ನಮೂದಿಸಲಾಗಿದೆ. ಕೊಪ್ಪಳ ಜಿಲ್ಲೆಯಾದ್ಯಂತ 40,000 ಎಕರೆ ಜಮೀನಿನ ಮೇಲೆ ಈ ರೀತಿ ಋಣವನ್ನ ನಮೂದಿಸಲಾಗಿದೆ” ಎಂದು ಆರೋಪಿಸಿದರು.
1. ಸಜೀದ್ ಖಾನ್ ಮುಲ್ಲಾರವರ 2.7 ಎಕರೆ, 2.ರತ್ನಾಖಾರ ತಳವಾರ್ 4.00 ಎಕರೆ, 3. ಶರಣಪ್ಪ ಬಣ್ಣದಬಾವಿ 3.36 ಎಕರೆ, 4. ದೊಡಪ್ಪ ಭಾವಿಕಟ್ಟಿ 5.00ಎಕರೆ, 5. ಶರಣಪ್ಪ ಸೂರೇಬಾನ್ 3.00 ಎಕರೆ, 6. ಜಸ್ವಂತ್ ರಾಜ್ ಜೈನ 2 ಎಕರೆ, 7. ಶುಭಾಶಚಂದ್ರ ಶಾಲೆಡ್ 2.00 ಎಕರೆ, 8. ನೂರು ಅಹ್ಮದ್ ಅಣಜಿಗೇರಿ 8 ಎಕರೆ, 9. ಕುಮಾರ ಸ್ವಾಮಿ ಆಂಟಿ 1.00 ಎಕರೆ, 10. ಶರಣಪ್ಪ ಬಣ್ಣದಭಾವಿ 5.38ಎಕರೆ, 11. ವಿದ್ಯಾಶ್ರೀ ಟ್ರಸ್ಟ್ 3.00 ಎಕರೆ, 12.ಪ್ರಶಾಂತ್ ಸೂರೇಬಾನ್ 1ಎಕರೆ, 13. ಶರಣಪ್ಪ ಬಣ್ಣದಭಾವಿ 3.2ಎಕರೆ, 13.ಕಾಂತಾದೇವಿ ಶಾಲೆಡಾ 1 ಎಕರೆ, 14.ರಾಜ್ಯಪಾಲರು ಗ್ರಾಮ ಪಂಚಾಯಿತಿ 10 ಗುಂಟೆ, 15 . ಸಾಜೀದ್ ಖಾನ್ ಮುಲ್ಲಾ 2.33 ಎಕರೆ, ಒಟ್ಟು 47 ಎಕರೆ 07 ಗುಂಟೆ ಜಮೀನಿಗೆ ವಕ್ಫ ಮಂಡಳಿ ನೋಟಿಸ್ ನೀಡಿ ಮಾನಸಿಕ ಹಿಂಸೆ ನೀಡುತ್ತಿದೆ ಎಂದು ಹೇಳಿದರು.
ರಾಜ್ಯದ 31 ಜಿಲ್ಲೆಯಲ್ಲಿ ಪ್ರತಿ ಜಿಲ್ಲೆಯಂತೆ 40 ಸಾವಿರ ಎಕರೆ ರೈತರ ಭೂಮಿಗೆ ವಕ್ಫ್ ಮಂಡಳಿಯು ಋಣ ಇದೆ ಎಂದು ಕಾನೂನುಬಾಹಿರವಾಗಿ ನಮೂದಿಸಲಾಗಿದೆ.
ಕುಕನೂರು ಪಟ್ಟಣದ ಹತ್ತಿರ ಸರ್ವೆ ನಂಬರ್ 349/1, 69 ಎಕರೆ ಭೂಮಿಯು ಪೂರ್ವಜರ ಆಸ್ತಿಯಾಗಿದ್ದು, ಇದೀಗ ವಕ್ಫ್ ಮಂಡಳಿಯೂ ಈ ಜಮೀನು ಉಳ್ಳಂತಹ ರೈತರಿಗೆ ನೋಟಿಸ್ ನೀಡಿದೆ.
Acknowledgement copy
30-12 -1974ರಲ್ಲಿ ನಮೂನೆ 11ರಲ್ಲಿ ಡಿಕ್ಲೆರೇಷನ್ ಅಂದ್ರೆ ಘೋಷಣೆ ಮುಟ್ಟಿದ ಬಗ್ಗೆ ತಶೀಲ್ದಾರರು ಕೊಡ ಮಾಡುವ ಪಾವತಿ ಪತ್ರ ತುಣಕು.