You are currently viewing BREAKING : ಬೆಳಗಾವಿ | ಕಬ್ಬು ಕಟಾವು ಮಾಡುವ ಯಂತ್ರಕ್ಕೆ ಸಿಲುಕಿ ಇಬ್ಬರು ಮಹಿಳಾ ಕಾರ್ಮಿಕರು ದಾರುಣ ಸಾವು!

BREAKING : ಬೆಳಗಾವಿ | ಕಬ್ಬು ಕಟಾವು ಮಾಡುವ ಯಂತ್ರಕ್ಕೆ ಸಿಲುಕಿ ಇಬ್ಬರು ಮಹಿಳಾ ಕಾರ್ಮಿಕರು ದಾರುಣ ಸಾವು!

BREAKING : ಬೆಳಗಾವಿ | ಕಬ್ಬು ಕಟಾವು ಮಾಡುವ ಯಂತ್ರಕ್ಕೆ ಸಿಲುಕಿ ಇಬ್ಬರು ಮಹಿಳಾ ಕಾರ್ಮಿಕರು ದಾರುಣ ಸಾವು!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ : 

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲೊಂದು ಘೋರ ದುರಂತ ಸಂಭವಿಸಿದ್ದು, ಕಬ್ಬು ಕಟಾವು ಮಾಡುವ ಯಂತ್ರಕ್ಕೆ ಸಿಲುಕಿ ಇಬ್ಬರು ಮಹಿಳಾ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ. ಬಾರವ್ವ ಕೋಬಡಿ (60) ಹಾಗೂ ಲಕ್ಷ್ಮೀಬಾಯಿ ರುದ್ರಗೌಡರ (65) ಎಂದು ಗುರುತಿಸಲಾಗಿದೆ. ಕಬ್ಬು ಕಟಾವು ವೇಳೆ ಮುಂದೆ ನೋಡದೆ ಡ್ರೈವರ್ ವಾಹನ ಚಲಾಯಿಸಿದ್ದಾನೆ, ಈ ವೇಳೆಯಲ್ಲಿ ಇಬ್ಬರೂ ಮಹಿಳೆಯರ ತಲೆ ಯಂತ್ರದಲ್ಲಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ.

ಕಬ್ಬಿಣ ಗದ್ದೆಗೆ ಕೂಲಿ ಕೆಲಸಕ್ಕೆ ಎಂದು ಇಬ್ಬರು ಮಹಿಳೆಯರು ಬಂದಿದ್ದರು ಎನ್ನಲಾಗಿದೆ. ಚಾಲಕನ ನಿರ್ಲಕ್ಷದಿಂದ ಕೂಲಿಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳದಲ್ಲಿ ಕುಟುಂಬ ಸದಸ್ಯರ ಆಕ್ರಂದನ ಇದೀಗ ಮುಗಿಲು ಮುಟ್ಟಿದೆ. ಈ ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!