LOCAL NEWS : ಅತಿಕ್ರಮ ಜಾಗದ ತೆರವಿಗೆ ಕ್ರಮ : ಮುಖ್ಯಾಧಿಕಾರಿ ರವಿಂದ್ರ ಬಾಗಲಕೋಟೆ

You are currently viewing LOCAL NEWS : ಅತಿಕ್ರಮ ಜಾಗದ ತೆರವಿಗೆ ಕ್ರಮ : ಮುಖ್ಯಾಧಿಕಾರಿ ರವಿಂದ್ರ ಬಾಗಲಕೋಟೆ

ಪ್ರಜಾವೀಕ್ಷಣೆ ಸುದ್ದಿಜಾಲ :-

LOCAL NEWS : ಅತಿಕ್ರಮ ಜಾಗದ ತೆರವಿಗೆ ಕ್ರಮ : ಮುಖ್ಯಾಧಿಕಾರಿ ರವಿಂದ್ರ ಬಾಗಲಕೋಟೆ

ಕುಕನೂರು : ‘ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿಕ್ರಮವಾಗಿರುವ ಸಿಎ ಸೈಟ್‌ ಹಾಗೂ ಪಾರ್ಕ್‌ ಜಾಗವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಾಧಿಕಾರಿ ರವಿಂದ್ರ ಬಾಗಲಕೋಟೆ ಹೇಳಿದರು.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ನಡೆಯಿತು. ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟ, “ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ ಎ ಸೈಟ್ ಗಳು ಹಾಗೂ ಪಾರ್ಕ್ ಮೀಸಲಿರುವ ಜಾಗವನ್ನು ಅತಿಕ್ರಮಣವಾಗಿ ನಿರ್ಮಿಸಿರುವ ಮನೆಗಳು ಹಾಗೂ ಇತರೆ ಕಟ್ಟಡಗಳನ್ನ ಆದಷ್ಟು ಬೇಗನೆ ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.

‘ಕಚೇರಿಗೆ ಬಂದಂತ ಸಾರ್ವಜನಿಕರೊಂದಿಗೆ ಸರಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವಂತಹ ನಿಟ್ಟಿನಲ್ಲಿ ಕಾರ್ಯಪ್ರೌವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೆ ವೇಳೆಯಲ್ಲಿ ಸದಸ್ಯರೊಬ್ಬರು ಮಾತನಾಡಿ,’ ಈ ಹಿಂದಿನ ತೆಗೆದುಕೊಂಡ ಕಾಮಗಾರಿಗಳನ್ನು ಕನಿಷ್ಠ ಪಕ್ಷದಲ್ಲಿ ಪ್ರತಿಶತ ಐವತ್ತರಷ್ಟುರಾದರೂ ಮಾಡಿದ್ದರೆ ಮಾತ್ರ ಮುಂದಿನ ಸಾಮಾನ್ಯ ಸಭೆ ಕರೆಯಿರಿ, ಅರೆಬರೆ ಕಾಮಗಾರಿಗಳನ್ನು ಮಾಡಿ ಸಭೆಯ ನಡಾವಳಿಯನ್ನು ಗಾಳಿಗೆ ತುರುದು ಸರಿಯಲ್ಲ. ಯಾವುದೇ ಸದಸ್ಯರು ಕೇಳಿದ ಪ್ರಶ್ನೆಗೆ ಸರಿಯಾದ ದಾಖಲೆಗಳೊಂದಿಗೆ ಉತ್ತರ ನೀಡಬೇಕು, ಪಟ್ಟಣದಲ್ಲಿರುವ ಶೌಚಾಲಯಗಳು, ಶುದ್ಧ ಕುಡಿಯುವ ನೀರು, ಬೀದಿ ದೀಪಗಳು ವಿದ್ಯುತ್ ಸರಬರಾಜು ಇನ್ನಿತರ ಹಲವಾರು ಮೂಲಭೂತ ಸೌಕರ್ಯಗಳ ಬಗ್ಗೆ ಗಮನಹರಿಸಿ ಆದಷ್ಟು ಬೇಗ ಇಂತಹ ಕೆಲಸಗಳನ್ನು ಪೂರ್ಣಗೊಳಿಸಿ’ ಎಂದು ಸಭೆಯಲ್ಲಿ ಆಗ್ರಹ ಪಡಿಸಿದ್ದರು.

ಇದೇ ವೇಳೆಯಲ್ಲಿ ಪಟ್ಟಣದ ಮೂಲಭೂತ ಸೌಕರ್ಯಗಳ ಬಗ್ಗೆ ಸುದೀರ್ಘವಾದ ಚರ್ಚೆ ನಡೆಯಿತು. ಆಯಾ ವಾರ್ಡ್‌ನ ಸಮಸ್ಯೆಗಳನ್ನು ಅಧ್ಯಕ್ಷ-ಉಪಾಧ್ಯಕ್ಷರ ಸಮ್ಮುಖದಲ್ಲಿ ಚರ್ಚಿಸಿ, ತತಕ್ಷಣದಲ್ಲೇ ಕೇಲವು ನಿರ್ಧಾರ ತಗೆದುಕೊಂಡರು. ಇದರ ಜೊತೆಗೆ ನೂತನ ಸ್ಥಾಯಿ ಸಮಿತಿಯನ್ನು ರಚಿಸಲಾಯಿತು.

ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ನೂರುದ್ದೀನ್ ಸಾಬ್‌ ಗುಡಿಹಿಂದಲ್‌ ಅವರು ಆಯ್ಕೆಯಾದರು.

ಈ ಸಭೆಯಲ್ಲಿ ಅಧ್ಯಕ್ಷೆ ಲಲಿಮ್ಮ ಯಡಿಯಾಪೂರ್, ಉಪಾಧ್ಯಕ್ಷ ಪ್ರಶಾಂತ್‌ ಆರ್‌ಬೇಳ್ಳಿನ್, ರಾಮಣ್ಣ ಬಂಕದಮನಿ, ಗುದ್ನೆಪ್ಪ ನೋಗಾರ, ಸಿರಾಜ್‌ವುದ್ದೀನ್ ಕರಮುಡಿ, ಮಂಜುನಾಥ್ ಕೋಳೂರು, ಸಿದ್ದಯ್ಯ ಉಳಾಗಡ್ಡಿ, ಮಲ್ಲಿಕಾರ್ಜುನ್ ಚೌದರಿ, ಶಿವರಾಜ್‌ಗೌಡ ಪಾಟೀಲ್‌, ಬಾಲರಾಜ್‌ ಗಾಳಿ, ರಾಧಾ ದೊಡ್ಡಮನಿ, ಲಕ್ಷ್ಮೀ ಸಬರದ್‌, ನೇತ್ರಾ ಮಾಲಗತ್ತಿ, ಹೂಗಾರ ಹಾಗೂ ಇತರರು.

Leave a Reply

error: Content is protected !!