BREAKING : ವಕ್ಫ್ ಮಂಡಳಿ ಆಸ್ತಿ ವಿಚಾರ : ವಕ್ಫ್ ಬೋರ್ಡ್ ಜಮೀನಿನಲ್ಲಿ ಕುಕನೂರು ಪಟ್ಟಣ ಪಂಚಾಯಿತಿ…?!!

You are currently viewing BREAKING : ವಕ್ಫ್ ಮಂಡಳಿ ಆಸ್ತಿ ವಿಚಾರ : ವಕ್ಫ್ ಬೋರ್ಡ್ ಜಮೀನಿನಲ್ಲಿ ಕುಕನೂರು ಪಟ್ಟಣ ಪಂಚಾಯಿತಿ…?!!

ಪ್ರಜಾ ವೀಕ್ಷಣೆ ಸುದ್ದಿಜಾಲ:-

BREAKING : ವಕ್ಫ್ ಮಂಡಳಿ ಆಸ್ತಿ ವಿಚಾರ : ವಕ್ಫ್ ಬೋರ್ಡ್ ಜಮಿನಲ್ಲಿ ಕುಕನೂರು ಪಟ್ಟಣ ಪಂಚಾಯಿತಿ…!!

ಕುಕನೂರು : ರಾಜ್ಯದ್ಯಂತ ಭಾರೀ ಸದ್ದು ಮಾಡುತ್ತಿರುವ ವಕ್ಫ್ ಮಂಡಳಿ ಆಸ್ತಿ ವಿಚಾರವು, ವಿಜಯಪುರ ಜಿಲ್ಲೆಯ ಧಾರವಾಡ ಜಿಲ್ಲೆ ಇದೀಗ ಕೊಪ್ಪಳ ಜಿಲ್ಲೆಗೂ ಆವರಿಸಿಕೊಂಡಿದೆ.

ಜಿಲ್ಲೆಯ ಕುಕನೂರು ಯಲಬುರ್ಗಾ ತಾಲೂಕಿನಲ್ಲಿ ಇವರ 600 ಎಕರೆ ಜಮೀನು ವಕ್ಫ್ ಮಂಡಳಿಗೆ ನಮೂದಿಸಲಾಗಿದೆ ಎಂದು ಹಕ್ಕು ಚಲಾವಣೆ ಶಂಕೆ ವ್ಯಕ್ತವಾಗಿದೆ. ಸರ್ವೇ ನಂಬರ್ ನಲ್ಲಿ ಇರುವಂತಹ ಭೂಮಿಯು ಅಧಿಕೃತ ಪಹಣಿಯಲ್ಲಿ ದಾಖಲಾದಂತೆ ಆಸ್ತಿಗಳ ಋಣವನ್ನು ವಕ್ಫ್ ಮಂಡಳಿಗೆ ನಮೂದಿಸಲಾಗಿದೆ ಎಂದು ತಿಳಿದು ಬಂದಿದೆ.

2019ರ ಇಚೆಗೆ ಕೆಲವು ಭೂ ಮಾಲೀಕರ ಪಹಣಿಯಲ್ಲಿ ವಕ್ಫ ಮಂಡಳಿಯ ಋಣದಲ್ಲಿ ನಮೂದಿಸಲಾಗಿದೆ. ಕುಕನೂರು ವ್ಯಾಪ್ತಿಯ 480 ಎಕರೆ, ಯಲಬುರ್ಗಾ ವ್ಯಾಪ್ತಿಯಲ್ಲಿ 110 ಎಕರೆ ಜಮೀನು ವಕ್ಫ್ ಬೋರ್ಡ್ ಹೆಸರಿನಲ್ಲಿದೆ ಎಂದು ಹೇಳಲಾಗುತ್ತಿದೆ.

ವಕ್ಫ್ ಬೋರ್ಡ್ ಜಮಿನಲ್ಲಿ ಕುಕನೂರು ಪಟ್ಟಣ ಪಂಚಾಯಿತಿ…!!

ಪ್ರಸ್ತುತವಾಗಿರುವ ಕುಕನೂರು ಪಟ್ಟಣ ಪಂಚಾಯಿತಿ ಕಾರ್ಯಾಲಯವೂ ಕೂಡ ವಕ್ಫ ಮಂಡಳಿಯ ಜಮೀನಿನಲ್ಲಿದೆ. ಕುಕನೂರು ಪಟ್ಟಣದ ವಾಲ್ಮೀಕಿ ನಗರ, ಟೀಚರ್ಸ್‌ ಕಾಲೋನಿ, ನಾಗಪ್ಪ ಬಾವಿಕಟ್ಟಿ ಹೊಲ, ವಿದ್ಯಾಶ್ರೀ ಶಾಲೆಒಳಗೊಂಡಂತೆ ಇನ್ನು ಹಲವಾರು ಜಮೀನುಗಳು ವಕ್ಫ್ ಮಂಡಳಿಗೆ ಸೇರಿದೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟೆಯವರು ಪ್ರತಿಕ್ರಿಯೆ ನೀಡಿದ್ದಾರೆ.

“ಸದರಿ ಇರುವ ಪಹಣಿಯಲ್ಲಿ ಈ ಕುರಿತು ಮಾಹಿತಿಯನ್ನು ಪಡೆಯಲಾಗಿದ್ದು, ಪಟ್ಟಣ ಪಂಚಾಯಿತಿ ಕಾರ್ಯಾಲಯ 10ಗುಂಟೆ ಜಾಗವು ವಕ್ಫ ಮಂಡಳಿಗೆ ನಮೂದಿಸಲಾಗಿದೆ ಎಂದು ತಿಳಿದು ಬಂದಿದೆ. ಇದರ ವಿರುದ್ಧ ಮುಂದಿನ ಕ್ರಮಕ್ಕಾಗಿ ಕಾನೂನು ಹೋರಾಟಕ್ಕೆ ತಯಾರಾಗುತ್ತೇವೆ” ಎಂದು ಹೇಳಿದರು.

ಈ ಹಿಂದೆ ಗ್ರಾಮ ಪಂಚಾಯಿತಿ ಇದ್ದ ಕುಕನೂರು ಪಟ್ಟಣ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ಕುಕನೂರು ಇವರ 10 ಗುಂಟೆ ಜಮೀನು ರೆಕಾರ್ಡ್ ಸಾಬ್ ರೈಟ್ಸ್ ಗಣಿ ಏಣಿ ಮತ್ತು ಪಹಣಿ ಪತ್ರಿಕೆಯ ಫಾರಂ ನಂಬರ್ 16ರಲ್ಲಿ 30-9-2014ರ ಪ್ರಕಾರ ಉಪ ತಸಿಲ್ದಾರರು ಹಾಗೂ ನಾಡ ಕಾರ್ಯಾಲಯ ಕುಕನೂರು ಆದೇಶದ ಅನ್ವಯ ಮತ್ತು ಉಪಯುವಾಗ ಅಧಿಕಾರಿಗಳು ಕೊಪ್ಪಳ ಅವರ ಆದೇಶ ದಿನಾಂಕ 25-9-2019ರ ಪ್ರಕಾರ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಿಸಲಾಗಿದೆ.

ರೈತರಲ್ಲಿ ಆತಂಕ..!!

ಸರ್ಕಾರದ ಅಧೀನದಲ್ಲಿರುವ ಜಮೀನನ್ನೇ ವಕ್ಫ ಮಂಡಳಿ ತನ್ನದೆಂದು ಅಧಿಕೃತ ಕಾಗದ ಪತ್ರಗಳಲ್ಲಿ ನಮೂದಿಸಲಾಗಿದೆ. ಸಾಮಾನ್ಯ ಜನರ ಆಸ್ತಿಯನ್ನ ಇನ್ಯಾವ ಲೆಕ್ಕದಲ್ಲಿ ಪರಗಣಿಸುತ್ತಾರೆ ಎಂದು ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಯಲಬುರ್ಗಾ ಕುಕನೂರು ತಾಲೂಕಿನ ಚಿಕೇನಕೊಪ್ಪ, ಯಾರೇಹಂಚಿನಾಳ ಗ್ರಾಮಗಳ ವ್ಯಾಪ್ತಿಯ ಅಸ್ತಿಗಳು ಇದೇ ರೀತಿಯಲ್ಲಿ ಸಮಸ್ಯೆ ಇದೆ.

ಸರಿ ಸುಮಾರು 600 ಹೆಚ್ಚು ಜಮೀನು ವಕ್ಫ್ ಮಂಡಳಿಯ ಅಧೀನದಲ್ಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾನ್ಯವಾಗಿ ರೈತರಲ್ಲಿ ಹಾಗೂ ಭೂಮಾಲೀಕರಲ್ಲಿ ಆತಂಕ ಮನೆ ಮಾಡಿದೆ. ತಾಲೂಕಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಈ ವಿಷಯದ ಗಮನವಿಟ್ಟು ಮುಂದಾಗುವ ಅನಾಹುತಗಳನ್ನು ತಡೆಯಲು ಪರಿಗಣಿಸಿ, ಸರಿಪಡಿಸಬೇಕೆಂದು ಜನಸಾಮಾನ್ಯರ ಅಭಿಪ್ರಾಯವಾಗಿದೆ.

Leave a Reply

error: Content is protected !!