BREAKING : ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಭಾರತೀಯ ಜನತಾ ಪಕ್ಷ : ಶಾಸಕ ಯತ್ನಾಳ್..!!

You are currently viewing BREAKING : ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಭಾರತೀಯ ಜನತಾ ಪಕ್ಷ : ಶಾಸಕ ಯತ್ನಾಳ್..!!

ಪ್ರಜಾ ವೀಕ್ಷಣೆ ಸುದ್ದಿ :

BREAKING : ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಭಾರತೀಯ ಜನತಾ ಪಕ್ಷ : ಶಾಸಕ ಯತ್ನಾಳ್..!!

ಕೊಪ್ಪಳ : ಭಾರತೀಯ ಜನತಾ ಪಕ್ಷದ ಹೈಕಮಾಂಡ್ ನಿಂದ ಕರ್ನಾಟಕಕ್ಕೆ ಒಬ್ಬ ರಾಜ್ಯಾಧ್ಯಕ್ಷರನ್ನು ನೇಮಿಸಲು ಆಗುತ್ತಿಲ್ಲ. ವಾಸ್ತವ ಏನೆಂದರೆ ರಾಜ್ಯದಲ್ಲಿ ವಿಜಯೇಂದ್ರ ಅವರ ನಾಯಕತ್ವವನ್ನು ಇಲ್ಲಿ ಯಾರೂ ಒಪ್ಪುತ್ತಿಲ್ಲ. ಆದರೂ ಸಹ ಭಾರತೀಯ ಜನತಾ ಪಕ್ಷದ ಹೈಕಮಾಂಡ್ ತನ್ನ ವರ್ಚಸ್ಸನ್ನು ಕಳೆದುಕೊಳ್ಳುವ ವಾತಾವರಣ ನಿರ್ಮಾಣವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಹೇಳಿದರು.

ನಗರದಲ್ಲಿ ಬುಧವಾರ ಶ್ರೀಗವಿಮಠಕ್ಕೆ ಭೇಟಿ ನೀಡಿದ ಬಸವನಗೌಡ ಪಾಟೀಲ ಯತ್ನಾಳ ಮಾಧ್ಯಮದವರೊಂದಿಗೆ ಮಾತನಾಡಿ ದೇಶದಲ್ಲಿ ಎಲ್ಲಾ ಕಡೆ ಚುಣಾವಣೆಗಳು ಮುಗಿದಿದ್ದು, ಬಿಜೆಪಿ ರಾಜ್ಯಾಧ್ಯಕ್ಷರು ಆಯ್ಕೆಯಾಗಿದ್ದಾರೆ. ಆದರೆ, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ನೆಲೆಯಾಗಿರುವ ಕರ್ನಾಟಕದಲ್ಲಿ ರಾಜ್ಯಾಧ್ಯಕ್ಷನ್ನು ನೇಮಿಸಲು ಆಗುತಿಲ್ಲ. ಬಿಜೆಪಿ ಪುನಃ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ, ನಾವು ಹೊಸ ಪಕ್ಷವನ್ನು ಕಟ್ಟುತ್ತೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದರು.
ಮೋದಿಯವರು ಹೇಳಿದ ಹಾಗೆ ಬಿಜೆಪಿಯಲ್ಲಿ ವಂಶಪರಂಪರೆಗೆ ಅವಕಾಶ ಇಲ್ಲ. ಇಲ್ಲದಿದ್ದರೆ ಬಿಜೆಪಿಯವರು ನಮ್ಮಲ್ಲಿ ವಂಶಪರಂಪರೆಗೂ ಮತ್ತು ಭ್ರಷ್ಟಚಾರಕ್ಕೂ ಅವಕಾಶ ಇದೆ ಎಂದು ಘೋಷಿಸಲಿ. ಆಗ ಎಲ್ಲಾ ನಾಯಕರು ತಮ್ಮ ಮಕ್ಕಳನ್ನು ಎಂಎಲ್‌ಎ, ಎಂಪಿಗಳಾಗಿ ಮಾಡುತ್ತಾರೆ ಎಂದು ಹೇಳಿದರು.


ಒಡೆದ ಮನಸ್ಸುಗಳು ಒಂದಾಗಬೇಕಾದರೆ ಅಂತಹ ನಾಯಕತ್ವ ಇಲ್ಲಿಬೇಕು. ವಿಜಯೇಂದ್ರರನ್ನು ಬಿಟ್ಟು ಯಾರು ಬೇಕಾದರೂ ಅಧ್ಯಕ್ಷರಾಗಲಿ, ನಮಗೆ ಅಭ್ಯಂತರವಿಲ್ಲ. ರಾಜ್ಯದಲ್ಲಿ ಪ್ರಮಾಣಿಕತೆಯ ನಾಯಕ ಬೇಕು. ಇಂತಹ ಡಂಬಾಚಾರ ಮತ್ತು ಮಾತು ಮಾತಿಗೂ ನಾನು ರೈತನ ಮಗ ಎಂದು ಹೇಳಿಕೊಳ್ಳುವವರು ಬೇಡ. ರಾಮುಲುಗೆ ಅವರು ಬಹಳ ಅನ್ಯಾಯ ಮಾಡಿದ್ದಾರೆ. ಅವರು ಮಂತ್ರಿಯಾಗಿದ್ದಾಗ ಅವರ ಆಪ್ತರ ಮೇಲೆ ದೂರು ನೀಡಿದ್ದರು. ಅವರ ಭವಿಷ್ಯವನ್ನೇ ಹಾಳು ಮಾಡಲು ಹೊರಟಿದ್ದರು. ಹಾಗಾಗಿ ವಿಜಯೇಂದ್ರರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಾರದಿತ್ತು ಎಂದು ಇದೇ ವೇಳೆ ಹೇಳಿದರು.

Leave a Reply

error: Content is protected !!