LOCAL NEWS : ಬೆದವಟ್ಟಿ ಶ್ರೀಗಳ ಪುಣ್ಯ ಸ್ಮರಣೋತ್ಸವ : ‘ನಮ್ಮೆಲ್ಲರ ಹೃದಯ ಸಿಂಹಾಸನ ಅಲಂಕರಿಸಿದ ಶ್ರೀಗಳು’ 

You are currently viewing LOCAL NEWS : ಬೆದವಟ್ಟಿ ಶ್ರೀಗಳ ಪುಣ್ಯ ಸ್ಮರಣೋತ್ಸವ : ‘ನಮ್ಮೆಲ್ಲರ ಹೃದಯ ಸಿಂಹಾಸನ ಅಲಂಕರಿಸಿದ ಶ್ರೀಗಳು’ 

ಪ್ರಜಾವೀಕ್ಷಣೆ ಸುದ್ದಿ :-

LOCAL NEWS : ಬೆದವಟ್ಟಿ ಶ್ರೀಗಳ ಪುಣ್ಯ ಸ್ಮರಣೋತ್ಸವ : ‘ನಮ್ಮೆಲ್ಲರ ಹೃದಯ ಸಿಂಹಾಸನ ಅಲಂಕರಿಸಿದ ಶ್ರೀಗಳು’ 

ಕುಕನೂರು : ಇತ್ತೀಚಿಗೆ ಲಿಂಗೈಕ್ಯರಾದ ತಾಲೂಕಿನ ಬೆದವಟ್ಟಿ ಹಿರೇಮಠದ ಪರಮಪೂಜ್ಯ ಶ್ರೀ ಶಿವಸಂಗಮೇಶ್ವರ ಶ್ರೀಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಭಾನುವಾರ ಪಟ್ಟಣದ ಅನ್ನದಾನಿಶ್ವರ ಶಾಖಾ ಮಠದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಸಾನಿಧ್ಯ ವಹಿಸಿ ಮಾತನಾಡಿದ ಯಲಬುರ್ಗಾ ಹಿರೇಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಗಳು ಮಾತನಾಡಿ, ಬೆದವಟ್ಟಿ ಶಿವ ಸಂಗಮೇಶ್ವರ ಶ್ರೀಗಳು ಈ ಭಾಗದ ಎಲ್ಲಾ ಮಾಠಾಧೀಷರಿಗೆ ತಂದೆಯ ಸ್ಥಾನದಲ್ಲಿ ನಿಂತುಕೊಂಡು ಮಾರ್ಗದರ್ಶನ ಮಾಡಿದರು, ಅನೇಕ ಕಿರಿಯ ಮಾಠಾಧೀಷರ ಪಟ್ಟಾಧಿಕಾರ ನೆರವೇರಿಸಿದರು. ಈಗಲೂ ಅವರು ನಮ್ಮೆಲ್ಲರ ಹೃದಯ ಸಿಂಹಾಸನ ಅಲಂಕರಿಸಿದ್ದಾರೆ ಎಂದು ಹೇಳಿದರು.

ಈ ಭಾಗದಲ್ಲಿ ದಾಸೋಹ ಸೇವೆ ಮತ್ತು ಪಂಚ ಪೀಠಧಿಪತಿಗಳನ್ನು ಕರೆಸಿ ಅಡ್ಡಪ್ಪಲ್ಲಕ್ಕಿ ಉತ್ಸವ ಮಾಡಿ ಭಕ್ತಿಯ ಭಂಡಾರವನ್ನು ಪಸರಿಸಿದವರು ಎಂದು ಗುರುಗಳ ಗುಣಗಾನ ಮಾಡಿದರು.

ಕುಷ್ಟಗಿಯ ಕರಿಬಸವೇಶ್ವರ ಸ್ವಾಮೀಜಿ ಮಾತನಾಡಿ, ಬೆದವಟ್ಟಿ ಶ್ರೀಗಳು ಗುರು ಸ್ವರೂಪವಾಗಿ ನಿಂತು ಕೊಂಡು ಭಕ್ತಿಯ, ಸಂಸ್ಕಾರದ ಪರಂಪರೆ ಬೆಳೆಗಿಸಿದರು. ಶ್ರೀಗಂಧದ ಕೊರಡಿನಂತೆ ಸಮಾಜಕ್ಕೆ ಸುವಾಸನೆ ಸೂಸಿದರು ಎಂದು ಹೇಳಿದರು.

ಅನ್ನದಾನಿಶ್ವರ ಮಠದ ಮಹಾದೇವ ಸ್ವಾಮೀಜಿಗಳು ಮಾತನಾಡಿ, ಕುಕನೂರು ತಾಲೂಕು ಮಹಾಮಾಯೇ ದೇವಿ, ಗುದ್ನೇಶ್ವರ ದೇವರು ಮತ್ತು ಬೆದವಟ್ಟಿ ಶ್ರೀಗಳಿಂದ ಹೆಸರು ಪಡೆದಿದೆ. ಅವರು ಹಾಕಿದ ಪುಣ್ಯ ಮಾರ್ಗದಲ್ಲಿ ನಾವೆಲ್ಲ ಸಾಗೋಣ ಎಂದರು.

ಪುಣ್ಯಸ್ಮರಣೆ ಕಾರ್ಯಕ್ರಮ ಅಂಗವಾಗಿ ಸುಮಾರು ಮೂವತ್ತು ಬಂಡಿಗಳಲ್ಲಿ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಸಿಬಸವಲಿಂಗೇಶ್ವರ ಸ್ವಾಮೀಜಿ, ಮೈನಳ್ಳಿಯ ಸಿದ್ದೇಶ್ವರ ಸ್ವಾಮೀಜಿ, ಮಂಗಳೂರು ಸಿದ್ದಲಿಂಗ ಶ್ರೀಗಳು, ಅಳವಂಡಿಯ ಮರುಳರಾಧ್ಯ ಶ್ರೀಗಳು, ತಾವರಗೆರೆ ಮಹೇಶ್ವರ ಶರಣರು, ಚಳಗೇರಿ ಶ್ರೀಗಳು ಮತ್ತು ಪ್ರಮುಖರಾದ ಅಂದಪ್ಪ ಜವಳಿ, ವೀರಯ್ಯ ತೊಂಟಾದರ್ಯ ಮಠ, ಮಹೇಶ್ ಕಲ್ಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

error: Content is protected !!