You are currently viewing PV NEWS : ಕುಕನೂರು | ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರ ವಿರುದ್ಧ ಆರೋಪ! ಪ್ರಶಸ್ತಿ, ಸದಸ್ಯತ್ವ ರದ್ದತಿಗೆ ಕಾನಿಪ ಧ್ವನಿ ಸಂಘದ ಆಗ್ರಹ!

PV NEWS : ಕುಕನೂರು | ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರ ವಿರುದ್ಧ ಆರೋಪ! ಪ್ರಶಸ್ತಿ, ಸದಸ್ಯತ್ವ ರದ್ದತಿಗೆ ಕಾನಿಪ ಧ್ವನಿ ಸಂಘದ ಆಗ್ರಹ!

PV NEWS : ಕುಕನೂರು | ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರ ವಿರುದ್ಧ ಆರೋಪ! ಪ್ರಶಸ್ತಿ, ಸದಸ್ಯತ್ವ ರದ್ದತಿಗೆ ಕಾನಿಪ ಧ್ವನಿ ಸಂಘದ ಆಗ್ರಹ!

‘ಅಸಲಿ–ನಕಲಿ ಪತ್ರಕರ್ತ’ ವಿವಾದಕ್ಕೆ ತಿರುಗೇಟು; ಅರ್ಹತೆ ನಿರ್ಧರಿಸುವ ಅಧಿಕಾರ ಯಾವುದೇ ಸಂಘಟನೆಗಿಲ್ಲ: ಕಾನಿಪ ಅಧ್ಯಕ್ಷ ಚಂದ್ರು ಆರ್. ಭಾನಾಪುರ

ಕುಕನೂರು, ಸೆ. 8: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ವಿರುದ್ಧ ಹಣ ದುರುಪಯೋಗ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ನೀಡಿರುವ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ತಡೆಹಿಡಿಯಬೇಕು ಅಥವಾ ರದ್ದುಗೊಳಿಸಬೇಕು ಹಾಗೂ ಮಾಧ್ಯಮ ಅಕಾಡೆಮಿ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಕುಕನೂರು ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರು ಆರ್. ಭಾನಾಪುರ ಆಗ್ರಹಿಸಿದರು.

ಈ ಕುರಿತು ಮಾತನಾಡಿದ ಅವರು, ‘ಶಿವಾನಂದ ತಗಡೂರು ಅವರ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಹೇಳಿದರು.

‘ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ನೀಡಿರುವ ಪ್ರಶಸ್ತಿ ಹಾಗೂ ಮಾಧ್ಯಮ ಅಕಾಡೆಮಿ ಸದಸ್ಯತ್ವದ ಕುರಿತು ಸರ್ಕಾರ ಸೂಕ್ತ ಪರಿಶೀಲನೆ ನಡೆಸಬೇಕು. ನಮ್ಮ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಈ ಸಂಬಂಧ ರಾಜ್ಯದಾದ್ಯಂತ ಒತ್ತಾಯಿಸಲಾಗುತ್ತಿದೆ’ ಎಂದು ತಿಳಿಸಿದರು.

ಇತ್ತೀಚೆಗೆ ಕೆಯುಡಬ್ಲ್ಯೂಜೆ ಸಲ್ಲಿಸಿರುವ ಮನವಿಯಲ್ಲಿ ಪತ್ರಕರ್ತರನ್ನು ‘ಅಸಲಿ–ನಕಲಿ’ ಎಂದು ವಿಂಗಡಿಸುವ ರೀತಿಯ ಗೊಂದಲ ಸೃಷ್ಟಿಸಲಾಗಿದೆ ಎಂದು ಅವರು ಆರೋಪಿಸಿದರು.

‘ಧ್ವನಿ ಸಂಘದಲ್ಲಿರುವ ಪತ್ರಕರ್ತರು ಯಾರಿಂದಲೂ ನಿರಾಕರಿಸಲ್ಪಟ್ಟು ಹೊರಬಂದವರಲ್ಲ. ಕೆಯುಡಬ್ಲ್ಯೂಜೆ ಧೋರಣೆಗಳನ್ನು ಒಪ್ಪದ ಕಾರಣದಿಂದ ಪ್ರತ್ಯೇಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ನಮ್ಮ ಸಂಘದಲ್ಲಿರುವ ಹಲವು ಪತ್ರಕರ್ತರು ಅಧಿಕೃತ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ಶಿಕ್ಷಣ ಪಡೆದು, ಮೂರು–ನಾಲ್ಕು ವರ್ಷಗಳ ಕಾಲ ಅಧ್ಯಯನ ಮಾಡಿ ವೃತ್ತಿಗೆ ಬಂದಿದ್ದಾರೆ’ ಎಂದು ಹೇಳಿದರು.

‘ಪತ್ರಕರ್ತರ ಅರ್ಹತೆ ಅಥವಾ ಮಾನ್ಯತೆಯನ್ನು ನಿರ್ಧರಿಸುವ ಅಧಿಕಾರವನ್ನು ಯಾವುದೇ ಒಂದು ಪತ್ರಕರ್ತರ ಸಂಘಟನೆ ಹೊಂದಿಲ್ಲ. ಪತ್ರಕರ್ತರ ವೃತ್ತಿ ಮತ್ತು ಅರ್ಹತೆಯನ್ನು ಸಂಬಂಧಪಟ್ಟ ಸರ್ಕಾರಿ ಇಲಾಖೆ, ಅಧಿಕಾರಿಗಳು ಹಾಗೂ ಸಾರ್ವಜನಿಕರು ಗುರುತಿಸುತ್ತಾರೆ’ ಎಂದು ಭಾನಾಪುರ ಹೇಳಿದರು.

ಶಿವಾನಂದ ತಗಡೂರು ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಸಂಬಂಧಪಟ್ಟವರಿಂದ ಸ್ಪಷ್ಟನೆ ಪಡೆಯಬೇಕು ಹಾಗೂ ಕಾನೂನು ಪ್ರಕ್ರಿಯೆಯ ಪೂರ್ಣ ವಿವರಗಳನ್ನು ಪರಿಶೀಲಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾನಿಪ ಧ್ವನಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುನಿಲ್ ಕುಮಾರ್ ಮಠದ, ತಾಲ್ಲೂಕು ಗೌರವಾಧ್ಯಕ್ಷ ಮಹೇಶ್ ಕಲ್ಮಠ, ಪ್ರಧಾನ ಕಾರ್ಯದರ್ಶಿ ಬಸವರಾಜ್ ಕೋನಾರಿ, ಉಪಾಧ್ಯಕ್ಷ ಮುರಾರಿ ಭಜಂತ್ರಿ, ಸಹ ಕಾರ್ಯದರ್ಶಿ ಭೀಮಾಶಂಕರ್ ಪಾಣೆಗಾವ್, ಖಜಾಂಚಿ ವಿರಯ್ಯ ಹಿರೇಮಠ, ಸಂಘಟನಾ ಕಾರ್ಯದರ್ಶಿ ಈರಯ್ಯ ಕುರ್ತಕೋಟಿ, ಗೌರವ ಸಲಹೆಗಾರ ವಿಶ್ವನಾಥ ಪಟ್ಟಣಶೆಟ್ಟಿ, ಸದಸ್ಯರಾದ ಮುತ್ತಯ್ಯ ತೋಂಟದಾರ್ಯಮಠ, ಸಲೀಂ ಅಹಮದ್ ಸಾಹೇಬ ಅಮರಾವತಿ, ಅಲ್ಲಾ ಬೇಗಂ ಎಂ. ಅಮರಾವತಿ ಹಾಗೂ ಮಲ್ಲಯ್ಯ ಗದಗಿನ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!