You are currently viewing ಮುದಗಲ್ಲ:- ‘ಎಸ್’ಎಲ್’ಸಿ ಹಾಗೂ ಪಿಯುಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ…

ಮುದಗಲ್ಲ:- ‘ಎಸ್’ಎಲ್’ಸಿ ಹಾಗೂ ಪಿಯುಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ…

ಮುದಗಲ್ಲ ವರದಿ…

ಎಸ್’ಎಸ್’ಎಲ್’ಸಿ ಹಾಗೂ ಪಿಯುಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ…

ಮುದಗಲ್ಲ :- ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ 85 % ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸಭೆ ರಂಗಮಂದಿರದಲ್ಲಿ ಅಂಜುಮನ್ ಎ ಮುಸ್ಲೀಮೀನ್ ಲಿಂಗಸೂರ ತಾಲೂಕು ಘಟಕ , ಮುದಗಲ್ಲ ಕಮೀಟಿ ವತಿಯಿಂದ ಡಾ!! ಅಂಬೇಡ್ಕರ್ ಜಯಂತಿ ಪ್ರಯುಕ್ತ 2026 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ 85% ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿ ಗಳಿಗೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.‌

ರಂಗಮಂದಿರದಲ್ಲಿ ನಡೆದ ಕಾಯ೯ಕ್ರಮದಲ್ಲಿ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಇರು ಅಂಬೇಡ್ಕರ್ ಸಕ೯ಲ್ ಯಲ್ಲಿ ಇರುವ ಗಣ್ಯ ವ್ಯಕ್ತಿಗಳಿಂದ ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಕ್ಕೆ ಹೂ ಮಾಲೆ ಹಾಕಿ ಗೌರವ ಸಲ್ಲಿಸಲಾಯಿತು

ನಂತರ ವೇದಿಕೆಯಲ್ಲಿ ತಾಲೂಕು ಅಧ್ಯಕ್ಷರಾದ ಹುಸೇನ್ ಬಾಷ ಕೆ ಅವರು ಮಾತನಾಡಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ(SSLC Examination)ಯಲ್ಲಿ ಹಾಗೂ ಪಿಯುಸಿ ಯಲ್ಲಿ 85 %ಹೆಚ್ಚು  ಅತ್ಯಧಿಕ ಅಂಕ ಗಳಿಸಿದ ವಿಧ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಸಾಧನೆ ಶ್ಲಾಘನೀಯವಾಗಿದೆ ಸಾಧನೆ ಮಾಡಿದವರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುತ್ತಿದೆ. ಪ್ರೇರಣೆ ನೀಡಿದರೆ ಅವರು ಇನ್ನಷ್ಟು ಸಾಧನೆ ಮಾಡಲು ಸಾಧ್ಯ ವಾಗುತ್ತದೆ. ಉತ್ತಮವಾಗಿ ಅಧ್ಯಯನ ಮಾಡಿ ಅತ್ಯುನ್ನತ ಹುದ್ದೆಗೆ ಅಲಂಕರಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಎಸ್ಎಸ್‌ಎಲ್‌ಸಿ ಹಾಗೂ ಪಿಯುಸಿ ಯಲ್ಲಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು‌ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲು ಹಾಕಿ, ಹಾಗೂ ಮೇಡಲ್ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನಿಸಿ ಮಾತನಾಡಿದ ಖ್ಯಾತ ಪ್ರವಚನಕಾರರಾದ ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ ಅವರು ವಿದ್ಯಾರ್ಥಿಗಳು ಆತ್ಮ ವಿಶ್ವಾಸ, ಪರಿಶ್ರಮದಿಂದ ಯಶಸ್ಸು ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ರಾಘವೇಂದ್ರ ಗುಮಾಸ್ತೆ ಅವರು ಮಾತನಾಡಿದ ಅವರು ಮಾತನಾಡಿದರು ಇಂತಹ ಸಾಧನೆಗಳು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತವೆ. ಶಿಕ್ಷಣವೇ ಭವಿಷ್ಯವನ್ನು ರೂಪಿಸುವ ಪ್ರಮುಖ ಅಸ್ತ್ರವಾಗಿದ್ದು, ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು ಹಾಗೂ ದೃಢ ಸಂಕಲ್ಪದೊಂದಿಗೆ ಮುಂದುವರಿದರೆ ಇನ್ನಷ್ಟು ಉನ್ನತ ಸ್ಥಾನಗಳನ್ನು ತಲುಪಬಹುದು ಎಂದು ಸಲಹೆ ನೀಡಿದರು.

 

ಈ ಸಂದರ್ಭದಲ್ಲಿ ಮುದಗಲ್ಲ ಘಟಕದ ಅಧ್ಯಕ್ಷ ರಾದ ಮಹ್ಮದ ರಸೂಲ್ ಉಪಾಧ್ಯಕ್ಷ ರಾದ ಅಲ್ಬಾಸ್ ಪಾಶ ,ಹಾಗೂ ಪ್ರಧಾನ ಕಾಯ೯ದಶಿ೯ ಯಾದ ಅಸ್ಲಾಂ ಡೋಯಿ ಖಜಾಂಜಿ ಆರೀಪ್ ಡೋಂಗ್ರಿ , ನಿರೂಪಣೆ ಮಾಡಿದ ಮಾಹಾಂತೇಶ ಚಲುವಾದಿ , ಧಮ೯ ಗುರು ಜಮೀರ ಅಹ್ಮದ ಖಾಜಿ, ಅಮೀರಬೇಗ್ ಉಸ್ತಾದ,ಕರವೇ ಅಧ್ಯಕ್ಷರಾದ S.A ನಹೀಮ್ ,ಉಪಾಧ್ಯಕ್ಷ ಸಾಬು ಹುಸೇನ್ , ಕಲ್ಯಾಣ ಕರ್ನಾಟಕ ದರ್ವೇಶ ಸಂಘದ ಜಿಲ್ಲಾಧ್ಯಕ್ಷ ರಹಿಂಶಾ ಮಕಾನ್‌ದಾರ, ಮೈಬುಸಾಬ ಕಡ್ಡಿಪುಡಿ, ದಲಿತ ಸಂಘರ್ಷ ಸಮಿತಿ ಯ ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ, ಹಾಗೂ ಅಂಜುಮನ್ ಎ ಮುಸ್ಲೀಮೀನ್ ಲಿಂಗಸೂರ ತಾಲೂಕು ಹಾಗೂ ಮುದಗಲ್ಲ ಕಮೀಟಿ ಸದಸ್ಯರು ಹಾಗೂ ಸಾವ೯ಜನಿಕರು ವಿಧ್ಯಾರ್ಥಿ ಗಳು ಉಪಸ್ಥಿತರಿದ್ದರು

ವರದಿ:-ಮಂಜುನಾಥ ಕುಂಬಾರ

 

Leave a Reply

error: Content is protected !!