You are currently viewing PV NEWS : ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮ ಹಂತಕ್ಕೆ : ಕುಕನೂರು ತಾಲ್ಲೂಕಿನಲ್ಲಿ 96,248 ಮತದಾರರ ಗಣತಿ ಪೂರ್ಣ!

PV NEWS : ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮ ಹಂತಕ್ಕೆ : ಕುಕನೂರು ತಾಲ್ಲೂಕಿನಲ್ಲಿ 96,248 ಮತದಾರರ ಗಣತಿ ಪೂರ್ಣ!

PV NEWS : ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮ ಹಂತಕ್ಕೆ : ಕುಕನೂರು ತಾಲ್ಲೂಕಿನಲ್ಲಿ 96,248 ಮತದಾರರ ಗಣತಿ ಪೂರ್ಣ!

ಕುಕನೂರು, ಜು. 31 (PV NEWS ಕನ್ನಡ 24×7): ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಕನೂರು ತಾಲ್ಲೂಕಿನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಕಾರ್ಯ ಅಂತಿಮ ಹಂತ ತಲುಪಿದ್ದು, ಒಟ್ಟು 96,248 ಮತದಾರರ ಎಣಿಕೆ ಹಾಗೂ ನಮೂನೆ (ಫಾರಂ) ವಿತರಣಾ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಹಸಿಲ್ದಾರ್ ಬಸವರಾಜ ಬೆಣ್ಣೆಶಿರೂರು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 96,248 ಮತದಾರರು ದಾಖಲಾಗಿದ್ದು, ಇವರಲ್ಲಿ 80,860 ಮಂದಿ ಗ್ರಾಮೀಣ ಪ್ರದೇಶದವರು ಹಾಗೂ 15,388 ಮಂದಿ ನಗರ ಪ್ರದೇಶದವರು ಆಗಿದ್ದಾರೆ. ಎಲ್ಲ ಮತದಾರರ ಮನೆಗಳಿಗೆ ಭೇಟಿ ನೀಡಿ ಫಾರಂ ವಿತರಣೆ ಹಾಗೂ ಎನುಮರೇಶನ್ (ಗಣತಿ) ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪರಿಷ್ಕರಣೆ ವೇಳೆ 85,587 ಮತದಾರರ ಮಾಹಿತಿಯನ್ನು ದೃಢೀಕರಿಸಲಾಗಿದ್ದು, 5,789 ಮಂದಿ ಖಾಯಂ ಸ್ಥಳಾಂತರಗೊಂಡಿರುವುದು, 2,604 ಮಂದಿ ಮೃತಪಟ್ಟಿರುವುದು, 1,451 ದ್ವಿಪ್ರತಿ (ಡಬಲ್ ಎಂಟ್ರಿ) ದಾಖಲೆಗಳು ಹಾಗೂ 803 ಗೈರುಹಾಜರಿ ಪ್ರಕರಣಗಳು ಪತ್ತೆಯಾಗಿವೆ. ಈ ಮಾಹಿತಿಯ ಆಧಾರದ ಮೇಲೆ ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರಗೊಳಿಸುವ ಪ್ರಕ್ರಿಯೆ ಮುಂದುವರಿದಿದೆ.

ಮತದಾರರ ಪಟ್ಟಿಯಲ್ಲಿ ಅರ್ಹ ವ್ಯಕ್ತಿಗಳ ಹೆಸರು ತಪ್ಪಿಹೋಗದಂತೆ ಹಾಗೂ ಅನರ್ಹ ದಾಖಲೆಗಳು ಉಳಿಯದಂತೆ ಸಮಗ್ರ ಪರಿಶೀಲನೆ ಕೈಗೊಳ್ಳಲಾಗುತ್ತಿದೆ. ಮನೆಮನೆಗೆ ಭೇಟಿ ನೀಡಿ ಸಂಗ್ರಹಿಸಿದ ಮಾಹಿತಿಯ ಪರಿಶೀಲನೆಯೊಂದಿಗೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.

ಈ ಕುರಿತು ಸಾರ್ವಜನಿಕರಿಗೆ ಮನವಿ ಮಾಡಿರುವ ತಹಸಿಲ್ದಾರ್ ಬಸವರಾಜ್ ಬೆಣ್ಣೆಶಿರೂರು, “ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ವಂಚಿತರಾಗಬಾರದು ಎಂಬುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಯಾರಾದರೂ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಇತರೆ ಮಾಹಿತಿಗಳ ಪರಿಷ್ಕರಣೆ ಅಗತ್ಯವಿದ್ದರೆ, ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಅಥವಾ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದ್ದಾರೆ.

ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮತದಾರರ ಪಟ್ಟಿಯನ್ನು ಪಾರದರ್ಶಕ, ನಿಖರ ಹಾಗೂ ದೋಷರಹಿತವಾಗಿಸಲು ಚುನಾವಣಾ ಆಯೋಗದ ನಿರ್ದೇಶನದಂತೆ ಈ ಸಮಗ್ರ ವಿಶೇಷ ಪರಿಷ್ಕರಣೆ ಕಾರ್ಯವನ್ನು ತಾಲ್ಲೂಕಿನಾದ್ಯಂತ ಪರಿಣಾಮಕಾರಿಯಾಗಿ ನಡೆಸಲಾಗಿದೆ.

ಈ ವರದಿ : — PV NEWS ಕನ್ನಡ 24×7,  

Prajavikshane

Chandru R Bhanapaur

Leave a Reply

error: Content is protected !!