ಅಕ್ರಮ ಮರಳು ಸಾಗಾಟ ಕುಕನೂರು : ಗ್ರಾಮದ ಹಿರೇಹಳ್ಳದಲ್ಲಿ ನಿತ್ಯ ಅಕ್ರಮವಾಗಿ ಮರಳು ಸಾಗಾಟ ನೆಡೆಯುತ್ತಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು ಸಹಿತ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಡಿಸದರು.
ತಾಲೂಕಿನ ಶಿರೂರು ಗ್ರಾಮದ ಹಿರೇಹಳ್ಳದಲ್ಲಿ ನಿತ್ಯ ಹತ್ತಾರು ಟ್ರಾಕ್ಟರ್‌ಗಳು ಅಕ್ರಮವಾಗಿ ಮರಳು ಸಾಗಾಟವವನ್ನು ಮಾಡುತ್ತಿದ್ದಾರೆ. ಅಕ್ರಮ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯ ಪೋಲಿಸ್ ಠಾಣೆಗೆ, ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮನವಿ ಕೊಟ್ಟು ಅಕ್ರಮ ಸಾಗಾಟವನ್ನು ತಡೆಗಟ್ಟುವಂತೆ ತಿಳಿಸಿದರು ಸಹಿತ ಇದು ವರೆಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
BREAKING : ರಾತ್ರೋರಾತ್ರಿ ಕೆರೆಯ ಮಣ್ಣು ಅಕ್ರಮ ಸಾಗಾಟ..!!
ಗ್ರಾಮದ ಹಿರಿಯರು ಮಾತನಾಡಿ ಅಕ್ರಮವಾಗಿ ಮರಳು ಸಾಗಾಟ ಮಾಡುವುವರು ಗ್ರಾಮದಲ್ಲಿ ಬೇಕಾಬಿಟ್ಟಿಯಾಗಿ ವಾಹನ ಚಾಲನೆ ಮಾಡುತ್ತಿದ್ದಾರೆ. ಅಕ್ರಮ ಮರಳು ಸಾಗಿಸದಂತೆ ಹಳ್ಳದ ಪಕ್ಕದ ಜಮೀನುಗಳ ಮಾಲೀಕರು ತಿಳಿಸಿದರೆ ಅವರ ಜೊತೆ ಜಗಕ್ಕೆ ಇಳಿಯುತ್ತಿದ್ದಾರೆ. ಅಲ್ಲದೇ ಹಳ್ಳದ ಪಕ್ಕದ ಹೊಲಗಳಿಗೆ ಹಾನಿಯಾಗುವ ರೀತಿಯಲ್ಲಿ ಓಡಾಟವನ್ನು ಮಾಡುತ್ತಾರೆ. ಮತ್ತು ಊರಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಬೋರ್‌ವೆಲ್ ಪಕ್ಕದಲ್ಲಿಯೇ ಆಳವಾಗಿ ಮರಳು ಸಾಗಾಟ ಮಾಡಿದ್ದು, ಇದರಿಂದ ಬೋರ್‌ವೆಲ್‌ಗೆ ಹಾನಿಯಾಗಿ ಕುಡಿಯುವ ನೀರಿನ ತೊಂದರೆ ಉಂಟಾಗಲಿದೆ. ಆದ್ದರಿಂದ ಸಂಬAದಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲು ಮುಂದಾಗಬೇಕೆAದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಇತರರಿದ್ದರು.