LOCAL SPECIAL STORY : ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಇಟಗಿ ಆದರ್ಶ ಶಾಲೆಯ ವಿದ್ಯಾರ್ಥಿ ಚೇತನ್ ಕುಮಾರ್..!!
*ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ವಿರಾಗ್ರಹಣಿ ಪ್ರಶಸ್ತಿ ಪಡೆದ ಚೇತನ್*
ಕುಕನೂರು : ತಾಲೂಕಿನ ಇಟಗಿ ಗ್ರಾಮದಲ್ಲಿ ಇರುವ ಸರ್ಕಾರಿ ಆದರ್ಶ ಶಾಲೆ ಶಾಲೆಯ ವಿದ್ಯಾರ್ಥಿ ಚೇತನ್ ಕುಮಾರ್ ಇತ್ತೀಚಗೆ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವ್ಯಯಕ್ತಿಕ ಆಟ ಉದ್ದ ಜಿಗಿತ, ತ್ರಿವಿಧ ಜಿಗಿತ ಹಾಗೂ 110 ಹರ್ಡಲ್ಸ್ ಮೂರು ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಅದೇ ರೀತಿ 4 x100 ರಿಲೇ ಸ್ಪರ್ಧೆಯಲ್ಲಿ ಶಿವಕುಮಾರ್, ಅನಿಲ್ ಕುಮಾರ್ ,ಶರಣಕುಮಾರ್, ಚೇತನ್ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲೆಯ ದಹಿಕ ಶಿಕ್ಷಕಿ ಶ್ರೀಮತಿ ಬಸಮ್ಮ ಮೇಟಿ ತಿಳಿಸಿದ್ದಾರೆ.
ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಬಸಮ್ಮ ಮೇಟಿ ಇವರಿಗೆ ಮಕ್ಕಳ ದಿನಾಚರಣೆಯಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಕಳಕನಗೌಡ ಸಾದರ ಹಾಗೂ ಸರ್ವ ಸದಸ್ಯರು, ಜೊತೆಗೆ ಮುಖ್ಯೋಪಾಧ್ಯಾಯರಾದ ಶ್ರೀ ರಾಮರಡೆಪ್ಪ ಹಾಗೂ ಶಿಕ್ಷಕ ವೃಂದ ಸನ್ಮಾನಿಸಿ ಗೌರವಿಸಿದರು.