ಮುದಗಲ್ಲ ವರದಿ ಮುದಗಲ್ಲ :-ವಾಲ್ಮೀಕಿ ನಾಮಫಲಕ ತೆರವು, ಪ್ರತಿಭಟನೆ..

ಮುದಗಲ್ಲ ವರದಿ

ಮುದಗಲ್ಲ :-ವಾಲ್ಮೀಕಿ ನಾಮಫಲಕ ತೆರವು, ಪ್ರತಿಭಟನೆ..

ಮುದಗಲ್ಲ:- ಪುರಸಭೆ ಸಮೀಪದ ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆ ಬದಿಯಲ್ಲಿ ವಾಲ್ಮೀಕಿ
ಭಾವಚಿತ್ರವಿರುವ ನಾಮ ಫಲಕವನ್ನು ಪುರಸಭೆ ತೆರವುಗೊಳಿಸಿದ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮಾಜದ ಗೊಲಪಲ್ಲಿಯ ವರದಾನೇಶ್ವರ ಸ್ವಾಮಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

 

ಪುರಸಭೆಯ ಪರವಾನಗಿ ಪಡೆಯದೇ ಭಾವಚಿತ್ರವಿರುವ ನಾಮಫಲಕ ಅಳವಡಿಸಿ, ಮಂಗಳವಾರ ಮಧ್ಯರಾತ್ರಿ
ಅನಾವರಣಗೊಳಿಸಿದ್ದರು.ಈ ಹಿನ್ನೆಲೆಯಲ್ಲಿ ಪುರಸಭೆಯವರು
ಗುರುವಾರ ಬೆಳಗಿನ ಜಾವ ತೆರವುಗೊಳಿಸಿದ್ದರು. ಇದರಿಂದ ಆಕ್ರೋಶಗೊಂಡ ಮುದಗಲ್‌ ಪುರಸಭೆ ಸಮೀಪದ
ರಾಯಚೂರು -ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆ ಬದಿಯಲ್ಲಿ ವಾಲ್ಮೀಕಿ ಭಾವಚಿತ್ರವಿರುವ ನಾಮ ಫಲಕವನ್ನು ಪುರಸಭೆ ತೆರವುಗೊಳಿಸಿದ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮಾಜದ ಗೊಲಪಲ್ಲಿಯ ವರದಾನೇಶ್ವರ ಸ್ವಾಮಿ ನೇತೃತ್ವದಲ್ಲಿ ಗುರುವಾರ
ಪುನಃ ನಾಮಫಲಕ ಅಳವಡಿ ಸಲಾಯಿತು.

ಸಮಾಜದ ಯುವಕರು, ಪುರಸಭೆ ಆವರಣದಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದುರ. ಸ್ಥಳಕ್ಕೆ ಮಸ್ಕಿಸಿಪಿಐ ರಾಮಣ್ಣ ಜಲಗೇರಿ ಆಗಮಿಸಿ, ಪರಿಸ್ಥಿತಿತಿಳಿಗೊಳಿಸಿದರು. ಮುಖ್ಯಾಧಿಕಾರಿ ಮತ್ತು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಸಂಧಾನ ಮಾಡಿಸುವಲ್ಲಿ ಯಶಸ್ವಿಯಾದರು. ನಂತರ ಅದೇ ಸ್ಥಳದಲ್ಲಿ ಪುನಃ ನಾಮಫಲಕ ಅಳವಡಿಸಬೇಕೆಂಬ ಪ್ರತಿಭಟನಾ ಕಾರರ ಬೇಡಿಕೆಗೆ ಸ್ಪಂದಿಸಿ,ಮರಳಿ ನಾಮಫಲಕವನ್ನು ಅಲ್ಲಿಯೇ ಅಳವಡಿಸಲಾಯಿತು. ನಂತರ ವಾಲ್ಮೀಕಿ ಸಮಾಜದ ಶ್ರೀಗಳು ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಪ್ರವೀಣಕುಮಾರ
ಬೋಗಾರ, ದ್ಯಾಮಣ್ಣ ನಾಯಕ,
ನಂದೀಶ, ದುರುಗಣ್ಣ, ಮಹೇಶ ,ಹನುಮೇಶ ನಾಯಕ
,ಚಂದ್ರಶೇಖರ, ಸೋಮು, ಮೋಹನ್ ಭೀಮನಗೌಡ, ರವಿ ಕಟ್ಟಿಮನಿ, ಅಮರೇಶ ಅಡವಿಬಾವಿ, ಯಮನೂರ ತುರಡಗಿ, ಇತರರಿದ್ದರು

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!