ಮುದಗಲ್ಲ ವರದಿ..
ಕಾರ್ತಿಕ ಮಾಸ: ವಿಶೇಷ ಪೂಜೆ, ದೀಪೋತ್ಸವ…
ಕುಂಬಾರ ಓಣಿಯ ಬಸವೇಶ್ವರ ದೇವಸ್ಥಾನ ದಲ್ಲಿ ಕಾರ್ತಿಕ ದೀಪೋತ್ಸವ ನಡೆಯಿತು.
ಮುದಗಲ್ಲ :-ಸೋಮವಾರ ಕಾರ್ತಿಕ ಮಾಸದ ಪ್ರಯುಕ್ತ ಕಾರ್ತಿಕ ದೀಪೋತ್ಸವ ನಡೆಯಿತು.ದೇವಸ್ಥಾನ ದ ಪೂಜಾರಿ ಸಿದ್ದಯ್ಯ ಸ್ವಾಮಿ ಅವರು ಬಸವಣ್ಣ ಮೂತಿ೯ ಗೆ ಪೂಜೆ ಸಲ್ಲಿಸಿದ್ದರು ನಂತರ ಬಸವೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಮಲ್ಲಪ್ಪ ಮಾಟೂರ ಅವರು ದೀಪೋತ್ಸವಕ್ಕೆ ಚಾಲನೆ ನೀಡಿದರು.
ದೇವಸ್ಥಾನದ ಮುಂಭಾಗದಲ್ಲಿ ನೂರಾರು ದೀಪಗಳನ್ನು ಹಚ್ಚಿದರು. ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾನೈಟ್ ಉದ್ಯಮಿ ಹಾಗೂ ಮಹಿಳಾ ಜನಜಾಗೃತಿ ವೇಧಿಕೆ ಅಧ್ಯಕ್ಷೆ ಯಾಗಿರುವ ಶಶಿಕಲಾ ಬೋವಿ, ಅನುರಾಧ ಸಿದ್ದಯ್ಯ ಸಾಲಿಮಠ,ತೋಟಮ್ಮ , ವಿಜಯಲಕ್ಷ್ಮಿ, ಶಿವಮ್ಮ ಹಾಗೂ ಶರಣಪ್ಪ ಕುಂಬಾರ,ಶಂಕರ ಮಾಟೂರು, ಅಮರೇಶ ಸುಂಕದ್ ,ಮುದಗಲ್ಲ ಸೇರಿ ಸುತ್ತಮುತ್ತಲಿನ ಮಹಿಳೆಯರು ಹಾಗೂ ಪುರುಷರು ಸೇರಿ ದೀಪ ಬೆಳಗಿಸಿ ಸಂಭ್ರಮಿಸಿದರು.

ವರದಿ:-ಮಂಜುನಾಥ ಕುಂಬಾರ