You are currently viewing BIG NEWS : ಸಚಿವ ಸಂಪುಟ ಪುನಾರಚನೆ ವಿಚಾರ : ‘ನನಗೆ ಸಚಿವ ಸ್ಥಾನ ನೀಡಿದರೇ, ನಿಭಾಯಿಸಲು ಸಿದ್ದ ಎಂದ ಶಾಸಕ ರಾಯರೆಡ್ಡಿ!

BIG NEWS : ಸಚಿವ ಸಂಪುಟ ಪುನಾರಚನೆ ವಿಚಾರ : ‘ನನಗೆ ಸಚಿವ ಸ್ಥಾನ ನೀಡಿದರೇ, ನಿಭಾಯಿಸಲು ಸಿದ್ದ ಎಂದ ಶಾಸಕ ರಾಯರೆಡ್ಡಿ!

BIG NEWS : ಸಚಿವ ಸಂಪುಟ ಪುನಾರಚನೆ ವಿಚಾರ : ‘ನನಗೆ ಸಚಿವ ಸ್ಥಾನ ನೀಡಿದರೇ, ನಿಭಾಯಿಸಲು ಸಿದ್ದ ಎಂದ ಶಾಸಕ ರಾಯರೆಡ್ಡಿ!

 ಪ್ರಜಾ ವೀಕ್ಷಣೆ ಡಿಜಿಟಲ್ ಮಾಧ್ಯಮ : 

ಕುಕನೂರು, ಏಪ್ರಿಲ್ 14 : ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರದ ಕುರಿತು ಚರ್ಚೆಗಳು ಬಿರುಸಿನಿಂದ ಸಾಗುತ್ತಿರುವ ಬೆನ್ನಲ್ಲೇ, ಆಡಳಿತ ಪಕ್ಷದ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ತಮಗೂ ಸಚಿವ ಸ್ಥಾನ ನೀಡಬೇಕೆಂದು ಬಹಿರಂಗವಾಗಿ ಬೇಡಿಕೆ ಇಡುವ ಮೂಲಕ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ.

ಸಂಪುಟ ಪುನಾರಚನೆ ಅಥವಾ ವಿಸ್ತರಣೆಯ ಮಾತುಗಳು ಕೇಳಿ ಬರುತ್ತಿದ್ದಂತೆ ಸಚಿವ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ಈ ನಡುವೆ ಹಿರಿಯ ಶಾಸಕರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಇಂದು ಪಟ್ಟಣದಲ್ಲಿ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ರಾಯರೆಡ್ಡಿ, “ಪಕ್ಷಕ್ಕಾಗಿ ದಶಕಗಳಿಂದ ನಿಷ್ಠೆಯಿಂದ ದುಡಿದಿದ್ದೇನೆ. ಹಲವು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಈ ಬಾರಿ ಸಂಪುಟ ವಿಸ್ತರಣೆಯಾದಾಗ ಹಿರಿಯ ಅನುಭವಕ್ಕೆ ಮನ್ನಣೆ ನೀಡಿ, ನಮಗೂ ಸಚಿವ ಸ್ಥಾನ ನೀಡಬೇಕು ಎಂದು ಇತರ ಬೇಡಿಕೆ ಇಡುವುದು ತಪ್ಪಲ್ಲ, ಸೂಕ್ತ ಸಮಯದಲ್ಲಿ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ಈ ಬಗ್ಗೆ ಒಂದೊಳ್ಳೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ನನಗೂ ಇದೆ ಎಂದು ಹೇಳಿದರು.

ನಿಮಗೆ ಯಾವ ಸಚಿವ ಸ್ಥಾನದ ಖಾತೆ ಮೇಲೆ ಕಣ್ಣಿದೆ’ ಎಂದು ಮಾಧ್ಯಮದವರು ಮುಂದುವರಿದು ಕೇಳಿದ ಪ್ರಶ್ನೆಗೆ ರಾಯರೆಡ್ಡಿಯವರ ಉತ್ತರ ಹೀಗಿತ್ತು, ‘ನನಗೆ ಯಾವುದಾದರೂ ಸಚಿವ ಸ್ಥಾನ ಖಾತೆ ಕೊಟ್ಟರು ಪರವಾಗಿಲ್ಲ, ನಾನು ನಿಭಾಯಿಸಲು ಅರ್ಹನಿದ್ದೇನೆ, ನನಗೆ ನನ್ನ ಕ್ಷೇತ್ರದ ಜನರ ಮೇಲೆ ಕಣ್ಣಿದೆ’ ಎಂದು ನುಡಿದರು. 

‘ಇದೀಗ ಮುಖ್ಯಮಂತ್ರಿಗಳು ಸೇರಿ ಸಚಿವ ಸಂಪುಟದಲ್ಲಿ 34 ಜನ ಶಾಸಕರು ಸಚಿವರಾಗಿದ್ದಾರೆ, ಇದರಲ್ಲಿ 25 ಜನ ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡಿದರೆ ತಪ್ಪೇನಿಲ್ಲ, ಅವರಿಗೂ ಅನುಭವ ಸಿಗುತ್ತೆ, ಇನ್ನೂ ಎರಡು ವರ್ಷ ಇದೆ, ಅವರೇ ಕಾಯಂ ಇರಬೇಕು ಅಂದ್ರೆ, ಸರಿಯಾದ ನಿರ್ಧಾರ ಸೂಕ್ತವಲ್ಲ ಎಂಬುದು ನನ್ನ ಅಭಿಪ್ರಾಯ’ ಎಂದು ಹೇಳಿದರು. 

ಅರ್ಹತೆ ಮತ್ತು ಹಿರಿತನದ ಆಧಾರದ ಮೇಲೆ ತಮಗೆ ಈ ಬಾರಿ ಖಂಡಿತಾ ಅವಕಾಶ ಸಿಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದ ಜನರ ಒತ್ತಾಯ:- 

ಶಾಸಕರ ಬೆಂಬಲಿಗರು ಮತ್ತು ಕ್ಷೇತ್ರದ ಮುಖಂಡರು ಸಹ ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ. “ನಮ್ಮ ನಾಯಕರು ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಕ್ಕರೆ ಇಡೀ ಜಿಲ್ಲೆಯ ಅಭಿವೃದ್ಧಿಗೆ ವೇಗ ಸಿಗಲಿದೆ. ಹೈಕಮಾಂಡ್ ಈ ಬಗ್ಗೆ ಕೂಡಲೇ ಗಮನ ಹರಿಸಬೇಕು,” ಎಂದು ಒತ್ತಾಯಿಸಿದ್ದಾರೆ.

‘ಮೇ 4ರಂದು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣವರ ಪುತ್ಥಳಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಮ್ಮುಖದಲ್ಲಿ ನೆರವೇರಲಿದೆ. ಇದೇ ದಿನ ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಖಾತೆಗಳ ಸಚಿವ ಶಿವಾನಂದ ಪಾಟೀಲ್ ಅವರಿಂದ ಪಟ್ಟಣ ಪಂಚಾಯಿತಿ ಕಟ್ಟಡದ ಶಂಕು ಸ್ಥಾಪನೆ ಹಾಗೂ ಶೀತಲ ಗೃಹ – ಕೋಲ್ಡ್ ಸ್ಟೋರೇಜ್ ನ ಉದ್ಘಾಟನೆಯನ್ನು ನೆರವೇರಿಸಲಿದೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದರು.

Leave a Reply

error: Content is protected !!