ಕುಕನೂರು ಪಟ್ಟಣದಲ್ಲಿ ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ ರ ಜಯಂತಿ ಆಚರಣೆ
ಕುಕನೂರು : ಕುಕನೂರು ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ರ 394 ನೇ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅನ್ನದಾನಿಶ್ವರ ಶಾಖಾ ಮಠದ ಮಹಾದೇವ ಸ್ವಾಮೀಜಿಗಳು ಮಾತನಾಡಿ,
ಛತ್ರಪತಿ ಶಿವಾಜಿ ಮಹಾರಾಜ್ ರು ಅಖಂಡ ಹಿಂದೂಗಳ ಹೃದಯ ಸಾಮ್ರಾಟ್ ಆಗಿ ಮೆರೆದಿದ್ದಾರೆ. ಎಲ್ಲ ಹಿಂದೂಗಳ ಹೃದಯ ಸಾಮ್ರಾಟ್, ಧೀರ, ಶೂರ ಛತ್ರಪತಿ ಶಿವಾಜಿ ಅವರು, ಅಪ್ರತಿಮ ಹೋರಾಟಗಾರಗಿದ್ದವರು ಮರಾಠ ಸಾಮ್ರಾಜ್ಯ ಸ್ಥಾಪನೆ ಮಾಡಿ ಸ್ವರಾಜ್ಯದ ಮಾರ್ಗವನ್ನು ತೋರಿದ ದಾರ್ಶನಿಕ ರಾಜನನ್ನು ಇಡೀ ರಾಷ್ಟ್ರವು ಸ್ಮರಿಸುತ್ತದೆ ಎಂದು ಅನ್ನದಾನೀಶ್ವರ ಶಾಖಾ ಮಠದ ಮಹದೇವ ಸ್ವಾಮೀಜಿಗಳು ಹೇಳಿದರು.
ಕುಕನೂರು ಪಟ್ಟಣದಲ್ಲಿ ಶಿವಾಜಿ ಮಹಾರಾಜ್ ಅವರ 398 ನೇ ಜಯಂತಿ ಆಚರಣೆ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಶ್ರೀಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಆಚಾರ್, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಕ್ಷತ್ರಿಯ ಸಮಾಜದ ಮುಖಂಡ ಅರ್ಜುನ್ ರಾವ್ ಜಗತಾಪ್ ಸೇರಿದಂತೆ ಕ್ಷತ್ರಿಯ ಸಮಾಜದ ಪ್ರಮುಖರು ಜಯಂತಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.