LOCAL NEWS : ಎನ್.ಎಸ್.ಎಸ್ ಶಿಬಿರವು ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ಸಹಕಾರ : ಅಮ್ಜದ್ ಪಟೇಲ್

You are currently viewing LOCAL NEWS : ಎನ್.ಎಸ್.ಎಸ್ ಶಿಬಿರವು ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ಸಹಕಾರ : ಅಮ್ಜದ್ ಪಟೇಲ್

ಎನ್.ಎಸ್.ಎಸ್ ನಿಂದ ಬಹದ್ದೂರ್ ಬಂಡಿಯಲ್ಲಿ 7 ದಿನ ಸ್ವಚ್ಛತಾ ಶಿಬಿರ

 

ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ಸಹಕಾರ : ಅಮ್ಜದ್ ಪಟೇಲ್.

ಕೊಪ್ಪಳ : ಮಹಾತ್ಮಾ ಗಾಂಧೀಜಿಯವರ ಸ್ವಚ್ಛತೆ, ಸುಂದರ ಪರಿಸರದ ಪರಿಕಲ್ಪನೆಯನ್ನು ಎನ್ ಎಸ್ ಎಸ್ ಶಿಬಿರಾರ್ಥಿಗಳು ಸ್ವತಃ ಓಣಿ, ಗ್ರಾಮ, ಬೀದಿಯಲ್ಲಿ ಸ್ವಚ್ಛತೆ ಮಾಡುವ ಮೂಲಕ ಸಾಮಾಜಿಕ ಸ್ವಚ್ಛತಾ ಪ್ರಜ್ಞೆ ಮೂಡಿಸುತ್ತಿದ್ದಾರೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.

ಕೊಪ್ಪಳ ಜಿಲ್ಲೆಯ ಬಹದ್ದೂರ್ ಬಂಡಿ ಗ್ರಾಮದಲ್ಲಿ ಶಾಲಾ ಪದವೀಪೂರ್ವ ಇಲಾಖೆ ಮತ್ತು ಕೊಪ್ಪಳ ನಗರದ ಬಾಲಕಿಯರ ಪದವೀಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ( ಎನ್ ಎಸ್ ಎಸ್ ) ಘಟಕದ ವಿದ್ಯಾರ್ಥಿಗಳಿಂದ ಗ್ರಾಮದಲ್ಲಿ7 ದಿನಗಳ ಕಾಲ ಹಮ್ಮಿಕೊಂಡಿರುವ ಸ್ವಚ್ಛತಾ ಶಿಬಿರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ನಮ್ಮ ನಗರ, ನಮ್ಮ ಗ್ರಾಮ , ನಮ್ಮ ಓಣಿ, ನಮ್ಮ ಮನೆ ಸ್ವಚ್ಛವಾಗಿದ್ದರೆ ನಮ್ಮ ಮನಸ್ಸು ಕೂಡ ಉಲ್ಲಷಿತವಾಗಿರುತ್ತದೆ, ಸದೃಢ ಸಮಾಜ, ಅರೋಗ್ಯವಂತ ಸಮಾಜ, ಪರಿಸರ ನಿರ್ಮಾಣ ನಮ್ಮೆಲ್ಲರ ಆದ್ಯತೆಯಾಗಬೇಕು, ಬಾಲಕಿಯರ ಪದವೀಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಬಹದ್ದೂರ್ ಬಂಡಿ ಗ್ರಾಮದಲ್ಲಿ 7 ದಿನಗಳ ಕಾಲ ಇಲ್ಲಿ ಸ್ವಚ್ಛತೆಯ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಸ್ಥಳೀಯರು, ಅಧಿಕಾರಿಗಳು, ನಗರಸಭೆ ಸೇರಿದಂತೆ ಎಲ್ಲ ಬಗೆಯ ಸಹಕಾರ ನೀಡುತ್ತಿದ್ದೇವೆ, ನಾಗರೀಕರು ತಮ್ಮ ಸುತ್ತ ಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಅರೋಗ್ಯಕರ ಜೀವನ ರೂಪಿಸಿಕೊಳ್ಳಬೇಕು ಎಂದು ಅಮ್ಜದ್ ಪಟೇಲ್ ಹೇಳಿದರು.

ಸ್ವಚ್ಛತಾ ಶಿಬಿರವು ದಿ. 30 ಸೋಮವಾರದಿಂದ ಪ್ರಾರಂಭವಾಗಿ ಅಕ್ಟೋಬರ್ 6 ರ ವರೆಗೆ 7 ದಿನಗಳ ಕಾಲ ಬಹದ್ದೂರ್ ಬಂಡಿ ಗ್ರಾಮದಲ್ಲಿ ನಡೆಯಲಿದೆ.

ಇಂದಿನ ಕಾರ್ಯಕ್ರಮದಲ್ಲಿ ಬಾಲಕಿಯರ ಕಾಲೇಜಿನ ಪ್ರಾಚಾರ್ಯ ಶಿವಾನಂದ್ ಎ ಆರ್, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಯಲ್ಲಪ್ಪ ತಳವಾರ್, ಎಸ್ ಡಿ ಎಂ ಸಿ ಅಧ್ಯಕ್ಷ ಮಂಜುನಾಥ್ ಕುರಿ, ಶಿಬಿರಾಧಿಕಾರಿ ಪರಶುರಾಮ್, ಶಂಕರ್ ಎ, ಅರುಣ್ ಕುಮಾರ್, ಮಂಜುನಾಥ್ ಡಿ, ಸೌಮ್ಯ ಎಚ್, ವೀಣಾ ಹಿರೇಮಠ, ಲಲಿತಾ ಅಂಗಡಿ, ಸುಮಾ ಪಲ್ಲೆದ್, ರಶ್ಮಿ ಪಾಟೀಲ್, ಗ್ರಾಮ ಪಂಚಾಯತ್ ಸದಸ್ಯರಾದ ದಾದೇಸಾಬ್ ಮಂಡಲಗಿರಿ, ಮಂಜುನಾಥ್ ನಡುಲಮನಿ, ಯೋಗಾನಂದ ಲೇಬಗೇರಿ, ಮಹಮ್ಮದ್ ರಫಿ, ಇತರರು ಉಪಸ್ಥಿತರಿದ್ದರು.

Leave a Reply

error: Content is protected !!