FLASH NEWS : ಸಂಪಾದಕ ರತ್ನ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಪತ್ರಕರ್ತ ಎಂ ಜಿ ಶ್ರೀನಿವಾಸ್
ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ :
ಕೊಪ್ಪಳ : ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ(ರಿ) ತುಮಕೂರು ಜಿಲ್ಲಾ ಘಟಕದಿಂದ ಕೊಡಮಾಡುವ 2024-25ನೇ ಸಾಲಿನ ಸಂಪಾದಕ ರತ್ನ ದತ್ತಿನಿಧಿ ರಾಜ್ಯ ಪ್ರಶಸ್ತಿಗೆ ಮಾನವೀಯ ಮೌಲ್ಯವುಳ್ಳ ಪರಿಣಾಮಕಾರಿ ವರದಿಗಳಿಗಾಗಿ ಜಿಲ್ಲೆಯ ಮುಂಚೂಣಿ ಪತ್ರಿಕೆಯಾದ ಪ್ರಜಾಪರ್ವ ಕನ್ನಡ ದಿನಪತ್ರಿಕೆ ಸಂಪಾದಕ ಎಂ.ಜೆ.ಶ್ರೀನಿವಾಸ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಬೆಂಗಳೂರಿನಲ್ಲಿ ಡಿ.21ರ ಭಾನುವಾರದಂದು ನಡೆಯುವ ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಸಂಪಾದಕರ ರತ್ನ ರಾಜ್ಯ ದತ್ತಿ ನಿಧಿ ಪ್ರಶಸ್ತಿ ಹಾಗೂ ರಾಜಕಾರ್ಯಕಾರಿಣಿ ಸಭೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತುಮಕೂರು ಕಾರ್ಯಕರ್ತ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಜಿ.ಕರುಣಾಕರ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್.ಮಂಜುನಾಥ ತಿಳಿಸಿದ್ದಾರೆ.
ಸದಾ ನವೀನತೆಯ ಸುದ್ದಿಗಳೊಂದಿಗೆ ಸಾಮಾಜಿಕ ಕಳಕಳಿಯ ವರದಿಗಳಿಂದ ಕೊಪ್ಪಳ ಜಿಲ್ಲೆಯ ಮನೆ ಮಾತಾಗಿರುವ ಪ್ರಜಾಪರ್ವ ದಿನಪತ್ರಿಕೆಯ ಸಂಪಾದಕ ಎಂ.ಜೆ ಶ್ರೀನಿವಾಸ ಅವರಿಗೆ 2024-25ನೇ ಸಾಲಿನ *ಸಂಪಾದಕ ರತ್ನ ದತ್ತಿನಿಧಿ ರಾಜ್ಯ ಪ್ರಶಸ್ತಿ ಲಭಿಸಿದ್ದಕ್ಕೆ ಪತ್ರಕರ್ತರ ಧ್ವನಿ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷ ಸುನಿಲ ಕುಮಾರ ಮಠದ, ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ದೊಡ್ಮನಿ, ಸಹ ಕಾರ್ಯದರ್ಶಿ ವೀರಯ್ಯ ಹಿರೇಮಠ, ಕುಕನೂರು ತಾಲೂಕ ಘಟಕದ ಅಧ್ಯಕ್ಷ ಚಂದ್ರು ಬಾಣಾಪುರ, ಗೌರವಾಧ್ಯಕ್ಷ ಮಹೇಶ್ ಕಲ್ಮಠ ಸೇರಿದಂತೆ ಸಂಘದ ಸದಸ್ಯರು ಎಂ ಜೆ ಶ್ರೀನಿವಾಸ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಾ ಮಾನ್ಯರ ಸಮಾಜ ಕಳಕಳಿಯ ವರದಿಗಳು ಹೀಗೆ ಮುಂದುವರೆದು ಸಮಾಜ ತಿದ್ದುವ ಕಾರ್ಯ ನಿರಂತರವಾಗಿ ಸಾಗುತ್ತಿರಲಿ, ಅವರ ಬತ್ತಳಿಕೆಯಲ್ಲಿ ಇನ್ನಷ್ಟು ಪ್ರಶಸ್ತಿಗಳು ರಾರಾಜಿಸಲಿ ಎಂದು ಶುಭ ಹಾರೈಸಿದ್ದಾರೆ.