LOCAL EXPRESS :- ಬಿಜೆಪಿಗರ ದುರಾಡಳಿತದಿಂದ ಇಂದು ಸಾರಿಗೆ ಸಂಸ್ಥೆಗೆ ದುಸ್ಥಿತಿ! 

You are currently viewing LOCAL EXPRESS :- ಬಿಜೆಪಿಗರ ದುರಾಡಳಿತದಿಂದ ಇಂದು ಸಾರಿಗೆ ಸಂಸ್ಥೆಗೆ ದುಸ್ಥಿತಿ! 

ಬಿಜೆಪಿಗರ ದುರಾಡಳಿತದಿಂದ ಇಂದು ಸಾರಿಗೆ ಸಂಸ್ಥೆಗೆ ದುಸ್ಥಿತಿ!

ಕೊಪ್ಪಳ : ಆಡಳಿತ ಪಕ್ಷದ ಮೇಲೆ ಸದಾ ಆರೋಪ ಮಾಡುತ್ತಿರುವ ಬಿಜೆಪಿಗರೇ ಆರೋಪಿಗಳಾಗಿದ್ದಾರೆ.ಹಿಂದಿನ ಸರ್ಕಾರದಲ್ಲಿ ಅವರು ಮಾಡಿದ ದುರಾಡಳಿತದ ಫಲವನ್ನು ಇಂದು ಸಾರಿಗೆ ಇಲಾಖೆ ಅನುಭವಿಸುತ್ತಿದೆ ಅವರಗೆ ಮಾಡಲು ಯಾವುದೇ ಕೆಲಸ ಇಲ್ಲ. ಹಾಗಾಗಿ ಬಿಜೆಪಿ ಸರ್ಕಾರ ಇರುವಾಗಲೇ 5900 ಕೋಟಿ ರೂ. ಸಾಲ ಮಾಡಿದ್ದರು. ಈಗ ನಮ್ಮ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು, ಮುಖಂಡರಿಗೆ, ತಿಳುವಳಿಕೆ ಇಲ್ಲ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

 ನಗರದ ಜಿಲ್ಲಾಡಳಿತ ಮುಂಭಾಗದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆಯ 4 ನಿಗಮದಿಂದ 7600 ಕೋಟಿಯಷ್ಟು ಬಾಕಿ ಇದೆ. ಇಲ್ಲ ಎಂದು ಹೇಳಿಲ್ಲ. 4 ವರ್ಷ ಕಾಲ ಒಂದು ಬಸ್ ಖರೀದಿಸಿರಲಿಲ್ಲ. 6300 ಬಸ್ ಖರೀದಿಗೆ ಪ್ರಕ್ರಿಯೆ ಆರಂಭಿಸಿದ್ದು, 3600 ಬಸ್ ಈಗಾಗಲೇ ಖರೀದಿಸಲಾಗಿದೆ. 16 ಸಾವಿರ ಜನ ನಿವೃತ್ತರಾಗಿದ್ದಾರೆ. ಆದರೆ ನೇಮಕಾತಿ ಮಾಡಲಿಲ್ಲ. ಆದರೆ ನಾವು 9 ಸಾವಿರ ಜನರನ್ನು ನೇಮಕ ಮಾಡುತ್ತಿದ್ದು, 2500 ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ. ಈ ದುಸ್ಥಿತಿಗೆ ತಂದವರು ಬಿಜೆಪಿಯವರು. ಹಾಗಾಗಿ ಆರೋಪ ಮಾಡುವ ಬಿಜೆಪಿಯವರೇ ಆರೋಪಿಗಳು.

        ಕೆ.ಎಸ್.ಆರ್‌.ಟಿ.ಸಿ ನೌಕರರ ಯುನಿಯನ್ ಮುಷ್ಕರಕ್ಕೆ ಸಂಬಂಧಿಸಿದಂತೆ ನಾಯಕರ ಜತೆ ಮಾತನಾಡಿದ್ದೇನೆ. ಬಿಜೆಪಿಯವರು ಬೆಳಿಗ್ಗೆ ಎದ್ದರೇ ಟ್ವೀಟ್ ಮಾಡುತ್ತಾರೆ. ಇದಕ್ಕೆ ಉತ್ತರ ನೀಡಿದ್ದೇನೆ. ಬಿಜೆಪಿಯವರು ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುವ ಬದಲು, ಎದುರು ಕುಳಿತು ಮಾತನಾಡುತ್ತೇವೆ. ಬರಲು ಹೇಳಿ ಎಂದು ಸವಾಲಾಕಿದರು.

       ಶಕ್ತಿ ಯೋಜನೆಯಿಂದ ಆದಾಯ ಹೆಚ್ಚಾಗಿದೆ. ಕಾಂಗ್ರೆಸ್ ಜನಪರವಾಗಿದ್ದು, ನಮ್ಮ ಸರ್ಕಾರ ಯಾವುದೇ ತಪ್ಪು ಮಾಡುವುದಿಲ್ಲ. ತಪ್ಪು ಮಾಡುವುದು ಏನಿದ್ದರು ಬಿಜೆಪಿಯವರ ಕೆಲಸವಾಗಿದೆ ಎಂದು ಆರೋಪಿಸಿದರು‌. ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

error: Content is protected !!