LOCAL NEWS : ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅಮೂಲ್ಯ..!
ಕುಕನೂರು : ಪೌರಾಡಳಿತ ಇಲಾಖೆ, ನಗರಾಭಿವೃದ್ಧ ಕೋಶ, ಕುಕನೂರು ಪಟ್ಟಣ ಪಂಚಾಯತಿ ಹಾಗೂ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘ (ರಿ.) ಕುಕನೂರು ಸಮಿತಿ ವತಿಯಿಂದ ಇಂದು ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪೌರ ಕಾರ್ಮಿಕರಿಗೆ ವಿಶೇಷ ಉಡುಗೆರೆ ನೀಡಿ ಗೌರವಿಸಿದರು.
ಈ ಕಾರ್ಯಕ್ರಮದ ಕುರಿತು ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯ ಗುದ್ನೇಪ್ಪ ನೋಟಗಾರ್, ‘ಪೌರ ಕಾರ್ಮಿಕರ ದಿನಾಚರಣೆಯಂದು, ಸ್ವಚ್ಛತೆಗಾಗಿ ಶ್ರಮಿಸುವ ಪೌರ ಕಾರ್ಮಿಕರನ್ನು ಅಭಿನಂದಿಸಬೇಕು ಹಾಗೂ ಅವರ ಸೇವೆಗೆ ಗೌರವ ಸಲ್ಲಿಸಬೇಕು. ನಗರಗಳನ್ನು ಸ್ವಚ್ಛವಾಗಿಟ್ಟು, ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಅವರ ಪಾತ್ರ ಅಮೂಲ್ಯ ಎಂಬುದನ್ನು ಸ್ಮರಿಸಬೇಕು. ಅವರ ನಿಷ್ಠಾವಂತ ಮತ್ತು ತ್ಯಾಗದ ಸೇವೆಯನ್ನು ಶ್ಲಾಘನೀಯವಾಗಿದೆ ಎಂದರು.
ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಮತ್ತು ಸೌಲಭ್ಯಗಳನ್ನು ತಲುಪಿಸಲು ಸ್ಥಳೀಯ ಅಧಿಕಾರಿಗಳು ಮತ್ತು ಆಯೋಗಗಳು ಜವಾಬ್ದಾರರಾಗಿವೆ. ಅದೇ ರೀತಿ ಸ್ಥಳೀಯ ವಿವಿಧ ವಸತಿ ಶಾಲೆಗಳಿಗೆ ನೇರ ದಾಖಲಾತಿ ಮಾಡಿಕೊಳ್ಳಿಳ್ಳುತ್ತಾರೆ ಎಂದರು.
ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ಉಡುಗೆರೆ ನೀಡಿ ಗೌರವಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಸಿದ್ಧಲಿಂಗಯ್ಯ ಉಳಾಗಡ್ಡಿ ಮಾತನಾಡಿ, ‘ದೇಶದ ಇತಿಹಾಸದಲ್ಲೇ ಮೊದಲ ಬಾರಿ ಪೌರಕಾರ್ಮಿಕರ ಪಾದಪೂಜೆ ಮಾಡಿದ ಪ್ರಧಾನಿ ಎಂಬ ಖ್ಯಾತಿಗೆ ನರೇಂದ್ರ ಮೋದಿ ಪಾತ್ರರಾಗಿದ್ದರು, ಅದೇ ಸಂಪ್ರದಾಯವನ್ನು ನಮ್ಮ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಮುಂದುವರೆಸುತ್ತಾ ಹೋಗುತ್ತಿದ್ದಾರೆ. ಒಬ್ಬ ಪ್ರಧಾನಿಯಿಂದ ಪಾದ ಪೂಜೆ ಮಾಡಿಸಿಕೊಳ್ಳುವ ಸರ್ಕಾರಿ ನೌಕರರು ಅಂದರೆ ಬಹಳ ಹೆಮ್ಮೆ ಪಡುವ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘ (ರಿ.) ಕುಕನೂರು ತಾಲೂಕಾ ಸಮಿತಿ ಅಧ್ಯಕ್ಷೆ ಈರಮ್ಮ ಘಾಟಿ, ಪಟ್ಟಣ ಪಂಚಾಯತಿ ಅಧ್ಯಕ್ಷೆಯ ಪುತ್ರ ಮಂಜುನಾಥ್ ಯಡಿಯಾಪುರ, ಉಪಾಧ್ಯಕ್ಷೆ ಪ್ರಶಾಂತ್ ಆರಬೆಳ್ಳಿನ್, ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ನಬಿಸಾಬ್ ಕಂದಗಲ್, ಪರಿಸರ ಪ್ರೇಮಿ ವಿರೇಶ್, ಮುಖಂಡ ಮಾಲತೇಶ್, ಸಿದ್ದಪ್ಪ ದೊಡ್ಡಮನಿ, ಸಿದ್ದಲಿಂಗಯ್ಯ ಸ್ವಾಮಿ ಉಳ್ಳಾಗಡ್ಡಿ, ವಿರೇಶ್ ಸಬರದ್, ಜಗನ್ನಾಥ ಭೋವಿ ಹಾಗೂ ಸದಸ್ಯರು ಪೌರಕಾರ್ಮಿಕರು ಭಾಗವಹಿಸಿದರು.