FLASH NEWS : ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಡಿಕೆಶಿ ಗೈರು : ತೇಪೆ ಹಾಕಿದ ಶಾಸಕ ರಾಯರೆಡ್ಡಿ..!

You are currently viewing FLASH NEWS : ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಡಿಕೆಶಿ ಗೈರು : ತೇಪೆ ಹಾಕಿದ ಶಾಸಕ ರಾಯರೆಡ್ಡಿ..!

ಪ್ರಜಾ ವೀಕ್ಷಣೆ ಸುದ್ದಿ:

FLASH NEWS : ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಡಿಕೆಶಿ ಗೈರು : ತೇಪೆ ಹಾಕಿದ ಶಾಸಕ ರಾಯರೆಡ್ಡಿ..!

ಕೊಪ್ಪಳ : ಬಹು ನಿರೀಕ್ಷಿತ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೈರು ಎದ್ದು ಕಾಣುತ್ತಿದ್ದು ಇದಕ್ಕೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಡಿಕೆಶಿ ಗೈರನ್ನು ತೇಪೆ ಹಾಕಿ ಸರಿದೂಗಿಸುವ ಮಾತನಾಡಿದರು.


ನಗರದ ಹೊಸಪೇಟೆ ರಸ್ತೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ತಾಲೂಕ ಪಂಚಾಯತ ಕೊಪ್ಪಳ ಇವರ ಸಹಯೋಗದಲ್ಲಿ ಕೊಪ್ಪಳ ಜಿಲ್ಲಾ ವ್ಯಾಪ್ತಿಯ 2,000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾತನಾಡುತ್ತಾ, ‘ಜನಪರ ಯೋಜನೆಗಳ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಾಲ್ಗೊಳ್ಳುವ ಎಲ್ಲಾ ಸಿದ್ಧತೆ ಜರುಗಿದ್ದು ದಿಢೀರನೆ ಅವರ ವೈಯಕ್ತಿಕ ಕೆಲಸ ಬಂದಿದ್ದರ ಪರಿಣಾಮ ಅವರು ಇಂದಿನ ಕಾರ್ಯಕ್ರಮಕ್ಕೆ ಹಾಜರಾಗಿರುವುದಿಲ್ಲ ಹೊರತು ಬೇರೆ ಯಾವುದೇ ಉದ್ದೇಶ ಇಲ್ಲ ಇದಕ್ಕೆ ಮಾಧ್ಯಮದವರು ವಿವಿಧ ರೀತಿಯ ವಿಚಾರಗಳನ್ನು ಸೃಷ್ಟಿ ಮಾಡುವ ಅವಶ್ಯಕತೆ ಇಲ್ಲ ನಾವೆಲ್ಲ ಒಟ್ಟಾಗಿದ್ದು ಮುಖ್ಯಮಂತ್ರಿಗಳಿಂದ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಉದ್ದೇಶವನ್ನು ಹೊಂದಿದ್ದೇವೆಯೇ ಹೊರತು ಕುರ್ಚಿಗಾಗಿ ಇಲ್ಲ ಸಲ್ಲದ ವಿಚಾರ ಮಾಡುವ ಅವಶ್ಯಕತೆ ನಮಗಿಲ್ಲ ನಮ್ಮದು *ನೋ ಬ್ರೇಕ್ ಹಾಗೂ ನೋ ಶೇಕ್ ಸರ್ಕಾರ*ಎಂಥ ಡಿಕೆಶಿ ಗೈರಾಗಿರುವುದನ್ನು ಸಮರ್ಥಿಸಿಕೊಂಡರು.

Leave a Reply

error: Content is protected !!