You are currently viewing ಮರ್ಯಾದಾ ಹತ್ಯೆ : ಮಗಳು ಅನ್ಯಜಾತಿ ಹುಡುಗನ ಜೊತೆಗೆ ಮದುವೆ : 7 ತಿಂಗಳ ಗರ್ಭಿಣಿಯನ್ನ ಬರ್ಬರವಾಗಿ ಕೊಂದ ತಂದೆ!

ಮರ್ಯಾದಾ ಹತ್ಯೆ : ಮಗಳು ಅನ್ಯಜಾತಿ ಹುಡುಗನ ಜೊತೆಗೆ ಮದುವೆ : 7 ತಿಂಗಳ ಗರ್ಭಿಣಿಯನ್ನ ಬರ್ಬರವಾಗಿ ಕೊಂದ ತಂದೆ!

Viral news : ಮರ್ಯಾದಾ ಹತ್ಯೆ : ಮಗಳು ಅನ್ಯಜಾತಿ ಹುಡುಗನ ಜೊತೆಗೆ ಮದುವೆ : 7 ತಿಂಗಳ ಗರ್ಭಿಣಿಯನ್ನ ಬರ್ಬರವಾಗಿ ಕೊಂದ ತಂದೆ!

ಫೇಸ್ ಬುಕ್ ಬರಹ :

ಪ್ರಜಾ ವೀಕ್ಷಣೆಯ ಸೂಕ್ಷ್ಮ ನೋಟ: ದೇಶ ಎಷ್ಟೇ ಬದಲಾದ್ರೂ ಜನ ಮನಸ್ಥಿತಿ ಮಾತ್ರ ಬದಲಾಗ್ತಿಲ್ಲ. ಜಾತಿ ವ್ಯವಸ್ಥೆಯನ್ನ ಹೋಗಲಾಡಿಸೋದಕ್ಕೆ ಎಷ್ಟೇ ಪ್ರಯತ್ನ ಪಟ್ರೂ ಜನರ ಮನಸ್ಸಿಂದ ಕಿತ್ತೊಗೆಯೋದಕ್ಕೆ ಆಗ್ತಿಲ್ಲ.

ಅನ್ಯ ಜಾತಿಯ ಯುವಕನನ್ನ ಮಗಳು ಮದುವೆಯಾಗಿದ್ದಾಳೆ ಅಂತಾ ಸ್ವಂತ ಅಪ್ಪನೇ 7 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯದಾ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.. 19 ವರ್ಷದ ಮಾನ್ಯ ಅನ್ನೋ ಯುವತಿ ತಮ್ಮೂರಿನ ವಿವೇಕಾನಂದ ಅನ್ನೋನನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡ್ತಿದ್ದಳು. ಇವ್ರಿಬ್ಬರ ಪ್ರೀತಿ ಹುಟ್ಟಿದ್ದೇ ಇನ್‌ಸ್ಟಾಗ್ರಾಂನಲ್ಲಿ.

ಒಂದೇ ಊರಿನವ್ರಾದ್ರೂ ಅಷ್ಟಾಗಿ ಪರಿಚಯ ಇರ್ಲಿಲ್ಲ. ಮಾನ್ಯ ಹಾಗೂ ವಿವೇಕಾನಂದ ಇಬ್ಬರೂ ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ರು. ಆಗಲೇ ನೋಡಿ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿತ್ತು.. ಮೊದಲು ಪರಿಚಯವಾಗಿದ್ದು ನಂತ್ರ ಪ್ರೀತಿಗೆ ತಿರುಗಿದೆ. ದಿನಗಳು ಕಳೆದಂತೆ ಮಕ್ಕಳ ಪ್ರೀತಿ ವಿಚಾರ ಎರಡೂ ಕುಟುಂಬಕ್ಕೆ ಗೊತ್ತಾಗಿದೆ.. ಅದ್ರಲ್ಲೂ ಮಗಳ ಪ್ರೀತಿ ವಿಷ್ಯಗೊತ್ತಾಗ್ತಿದ್ದಂತೆ ಹೆಣ್ಣೆತ್ತವ್ರು ಕೆರಳಿ ಕೆಂಡವಾಗಿದ್ದಾರೆ.

ಪ್ರೀತಿಗೀತಿ ಮರೆತು ಬಿಡು ಅಂತಾ ಎಚ್ಚರಿಕೆಯನ್ನೂ ಕೊಟ್ಟಿದ್ರು. ಆದ್ರೆ, ಪ್ರೀತಿದವನೇ ಉಸಿರು ಅಂದ್ಕೊಂಡಿದ್ದ ಹೆಣ್ಮಗಳು, ಯಾವುದೇ ಕಾರಣಕ್ಕೂ ವಿವೇಕಾನಂದನನ್ನ ಬಿಟ್ಟು ಬದುಕಲ್ಲ ಅನ್ನೋ ಹಠಕ್ಕೆ ಬಿದ್ದಿದ್ದಾಳೆ. ಕೊನೆಗೆ ಕೆಲ ತಿಂಗಳ ಹಿಂದೆ ಪ್ರಿಯಕರನ ಬಳಿ ಹೋಗಿ ನೀನು ನನ್ನನ್ನ ಮದ್ವೆ ಆಗದೇ ಇದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದಿದ್ದಳಂತೆ. ಹೀಗಾಗಿ ವಿವೇಕಾನಂದ ಮಾನ್ಯಾಳನ್ನ ರಿಜಿಸ್ಟರ್‌‌ ಮ್ಯಾರೇಜ್‌‌ ಆಗಿದ್ದ. ಅವತ್ತೇ ಊರು ಬಿಟ್ಟವ್ರು ಹಾವೇರಿಯಲ್ಲಿ ಬದುಕು ಕಟ್ಕೊಂಡಿದ್ರು.. ಈ ಮಧ್ಯೆ ಮಾನ್ಯ ಗರ್ಭಿಣಿ ಆಗಿದ್ದಾಳೆ.. ಮಗಳ ಮೇಲೆ ಜಿದ್ದಿಗೆ ಬಿದ್ದ ಹೆತ್ತವ್ರು, ಇಬ್ಬರನ್ನೂ ಮುಗಿಸ್ಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಈ ವಿಷ್ಯ ಯುವಕನ ಮನೆಯವ್ರಿಗೆ ಗೊತ್ತಾಗ್ತಿದ್ದಂತೆ ಡಿಸೆಂಬರ್ 8ನೇ ತಾರೀಖು ತಮ್ಮೂರಿಗೆ ಕರೆಸಿಕೊಂಡಿದ್ದಾರೆ.

ಸೀದಾ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್‌ ಠಾಣೆ ಮೆಟ್ಟಿಲೇರ್ತಿದ್ದಂತೆ ಎರಡೂ ಕಡೆಯವರನ್ನು ಕರೆಸಿ, ರಾಜಿ ಮಾಡಿಸಿದ್ದರಂತೆ. ಆದರೆ ಇಷ್ಟಕ್ಕೇ ಸುಮ್ಮನಾದ ಮಾನ್ಯ ಹೆತ್ತವ್ರು ವಿವೇಕಾನಂದನ ಮನೆಗೆ ನುಗ್ಗಿ ಸಿಕ್ಕಸಿಕ್ಕಂತೆ ಹಲ್ಲೆ ಮಾಡಿದ್ದಾರೆ.. ಈ ವೇಳೆ ಗರ್ಭಿಣಿಯಾಗಿದ್ದ ಮಗಳ ಮೇಲೂ ಗುದ್ದಲಿಯಿಂದ ಹೊಡೆದಿದ್ರು. ಗಂಭೀರಗಾಯಗೊಂಡಿದ್ದ ಮಗಳು ಉಸಿರು ಚೆಲ್ಲಿದ್ದಾಳೆ.

ಕೃಪೆ : ಫೇಸ್‌ಬುಕ್ ಬರಹ

Prajavikshane

Chandru R Bhanapaur

Leave a Reply

error: Content is protected !!