LOCAL NEWS : ಕುಕನೂರು ಪಟ್ಟಣದಲ್ಲಿ ಉಚಿತ ಡಯಾಲಿಸಿಸ್ ಸೆಂಟರ್ ಉದ್ಘಾಟನೆ!

You are currently viewing LOCAL NEWS : ಕುಕನೂರು ಪಟ್ಟಣದಲ್ಲಿ ಉಚಿತ ಡಯಾಲಿಸಿಸ್ ಸೆಂಟರ್ ಉದ್ಘಾಟನೆ!

LOCAL NEWS : ಕುಕನೂರು ಪಟ್ಟಣದಲ್ಲಿ ಉಚಿತ ಡಯಾಲಿಸಿಸ್ ಸೆಂಟರ್ ಉದ್ಘಾಟನೆ!

ಪ್ರಜಾ ವೀಕ್ಷಣೆ ಸುದ್ದಿ :

ಕುಕನೂರು : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಅಳವಡಿಸಿದ ಡಯಾಲಿಸಿಸ್ ಕೇಂದ್ರವನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ಉದ್ಘಾಟಿಸಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಸೆಂಟರ್ ಉದ್ಘಾಟಿಸಿದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಬಸವರಾಜ ರಾಯರೆಡ್ಡಿ ವರದಿಗಾರರನ್ನು ಉದ್ದೇಶಿಸಿ ಮಾತನಾಡುತ್ತ ಕ್ಷೇತ್ರದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಜನತೆ ಡಯಾಲಿಸಿಸ್ ಗಾಗಿ ಬೇರೆ ಕಡೆಗಳಲ್ಲಿ ಹೋಗುವ ಅನಿವಾರ್ಯತೆ ಎದುರಾಗಿದ್ದು ಇದೀಗ ರಾಜ್ಯ ಸರ್ಕಾರ ಹಾಗೂ ಖಾಸಗಿಯವರ ಸಹಭಾಗಿತ್ವದಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಮಾರು 42 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಎರಡು ಡಯಾಲಿಸಿಸ್ ಮಷಿನ್ ಪ್ರಾರಂಭಗೊಂಡಿದ್ದು ಮೂತ್ರಪಿಂಡ ರೋಗಿಗಳು ಬೇರೆ ಕಡೆ ಹೋಗುವ ಅನಿವಾರ್ಯತೆ ತಪ್ಪಿದಂತಾಗಿದೆ. ಇದರ ಸದುಪಯೋಗವನ್ನು ಅವಶ್ಯಕತೆ ಇದ್ದವರು ಮಾಡಿಕೊಳ್ಳಬೇಕೆಂದು ತಿಳಿಸಿದರು.


ಸರಕಾರಿ ಆಸ್ಪತ್ರೆಗಳಲ್ಲಿ ಸಮಸ್ಯೆಗಳು ಸಾಮಾನ್ಯವಾಗಿದ್ದು ವೈದ್ಯಾಧಿಕಾರಿಗಳು ಸೇವಾ ಮನೋಭಾವನೆ ಹೊಂದಿದಾಗ ಮಾತ್ರ ಸರ್ಕಾರದ ಆರೋಗ್ಯ ಇಲಾಖೆಯ ಯೋಜನೆಗಳು ಸಾಕಾರಗೊಳ್ಳುತ್ತವೆ ಆದರೆ ವೈದ್ಯರಾಗಿ ಪ್ರಮಾಣ ಪತ್ರ ಸ್ವೀಕರಿಸುವವರು ಗ್ರಾಮೀಣ ಪ್ರದೇಶದ ಜನತೆಯ ಸೇವೆಗೆ ಹಿಂದಿಟು ಹಾಕುತ್ತಿರುವುದು ವಿಪರ್ಯಾಸವಾಗಿದ್ದು ಅವರು ಗ್ರಾಮೀಣ ಜನತೆಯ ಸೇವೆಗೆ ಮಾತ್ರ ಸರ್ಕಾರದ ಯೋಜನೆಗಳು ಜನರಿಗೆ ಸಂಪೂರ್ಣವಾಗಿ ತಲುಪಿ ಸಾಕಾರಗೊಳ್ಳುತ್ತವೆ ಎಂದರು.


ಪಟ್ಟಣಕ್ಕೆ ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ, ಮಂಜೂರಾಗಿದ್ದು ಅದಕ್ಕಾಗಿ 42 ಕೋಟಿ ರೂಪಾಯಿಗಳ ಬಿಡುಗಡೆ ಸಹ ಮಾಡಲಾಗಿದೆ ಸದ್ಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಅದಕ್ಕೆ ಸಂಬಂಧಪಟ್ಟ ಕಮಿಟಿಯವರು ಶಿಫಾರಸ್ಸು ಮಾಡುವ ಜಮೀನಿನಲ್ಲಿ ಸ್ಥಳ ಗುರುತಿಸಿ ಏಪ್ರಿಲ್ ತಿಂಗಳಲ್ಲಿ ಭೂಮಿ ಪೂಜೆ ಮಾಡಿ ಸುಸಜ್ಜಿತ ಕಟ್ಟಡದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಸಲಕರಣೆ ಹಾಗೂ ನುರಿತ ಸಿಬ್ಬಂದಿಯೊಂದಿಗೆ ಪಟ್ಟಣದಲ್ಲಿ 100 ಹಾಸಿಗೆಯ ಆಸ್ಪತ್ರೆ ಜನಸೇವೆಗೆ ದೊರೆಯಲಿದೆ ಎಂದು ಹೇಳಿದರು.

ಕುಕನೂರು ಭಾಗದಲ್ಲಿ ತಾಲೂಕ ಆಡಳಿತ ಸೌದದ ಅವಶ್ಯಕತೆ ಇದ್ದು ಇದಕ್ಕೆ ಅಡ್ಡಿಯಾಗಿದ್ದ ಕಾನೂನು ತೊಡಕು ನಿವಾರಣೆಯಾಗುವ ಎಲ್ಲಾ ಮುನ್ಸೂಚನೆಗಳು ಮೂರು ತಿಂಗಳಲ್ಲಿ ಎಲ್ಲಾ ಸಮಸ್ಯೆ ನಿವಾರಣೆಯಾಗಿ ಆಡಳಿತ ಸೌದೊಂದಿಗೆ ತಾಲೂಕ ಕ್ರೀಡಾಂಗಣದ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಹೇಳಿದರು.

ಹಿಂದಿನ ಸರ್ಕಾರ ಹಲವಾರು ಯೋಜನೆಗಳಿಗೆ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡದೇ ಇರುವುದು ಜೊತೆಗೆ 7ನೇ ವೇತನ ಆಯೋಗದ ಜಾರಿಹಣ ಸಹಿತ ನೀಡದೆ ಇದ್ದದ್ದು ನಮ್ಮ ಸರ್ಕಾರದ ನೂತನ ಯೋಜನೆಗಳಿಗೆ ತೊಂದರೆಯಾಗಿದ್ದು ಇಂದಿನ ಸರ್ಕಾರ ಬಾಕಿ ಉಳಿಸಿದ್ದ 12, ಸಾವಿರ ಕೋಟಿ ರೂಪಾಯಿ ಅನುದಾನದಲ್ಲಿ 6, ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು ಇನ್ನು ಮುಂದೆ ಎಲ್ಲಾ ಕಾರ್ಯಗಳು ಸುಸೂತ್ರ ಗೊಳ್ಳಲಿವೆ ಆದರೆ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಮನವರಿಕೆ ಮಾಡಿದರು.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ರಾಮಕೃಷ್ಣ ರೆಡ್ಡಿ ಮಾತನಾಡುತ್ತಾ ಆರೋಗ್ಯ ಕೇಂದ್ರದಲ್ಲಿ ನಾಳೆಯಿಂದ ಎರಡು ಡಯಾಲಿಸಿಸ್ ಸಾಧನೆಗಳು ಕಾರ್ಯ ಆರಂಭ ಮಾಡಲಿದ್ದು ಈಗಾಗಲೇ ತಾಲೂಕಿನಲ್ಲಿ ಆರು ಜನ ಮೂತ್ರಪಿಂಡ ತೊಂದರೆ ಅನುಭವಿಸುವವರನ್ನು ಗುರುತಿಸಿ ಅವರಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗುವುದು. ಈ ಸೌಲಭ್ಯದಿಂದ ಪ್ರತಿದಿನ ಆರು ಜನರಿಗೆ ಉಚಿತವಾಗಿ ಸೇವೆ ಲಭ್ಯವಾಗಲಿದ್ದು ಇದಕ್ಕೆ ಸಂಬಂಧಪಟ್ಟಂತೆ ತಂತ್ರಜ್ಞರು, ಸ್ಟಫ್ನರ್ಸ್ ಹಾಗೂ ಇನ್ನಿತರ ಸಿಬ್ಬಂದಿಗಳ ಲಭ್ಯತೆಯನ್ನು ಸಹ ಈಗಾಗಲೇ ಮಾಡಲಾಗಿದ್ದು ಭವಿಷ್ಯದಲ್ಲಿ ಜನರಿಗೆ ಇದು ತುಂಬಾ ಅನುಕೂಲಕರವಾಗಲಿದೆ ಎಂದು ಹೇಳಿದರು.

ತಹಸಿಲ್ದಾರ ಬಸವರಾಜ ಬೆಣ್ಣೆ ಶಿರೂರು, ತಾ.ಪಂ ಇ ಓ ಸಂತೋಷ್ ಬಿರಾದರ ಪಾಟೀಲ, ಪ್ರಮುಖರಾದ ಎಂಕಣ್ಣ ಯರಾಶಿ, ಕಾಸಿಂಸಾಬ್ ತಳಕಲ್, ಹನುಮಂತ ಗೌಡ ಚಂಡೂರ, ಕರಿಬಸಪ್ಪ ನಿಡಗುಂದಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಹಂಪಯ್ಯ ಹಿರೇಮಠ, ಸಂಗಮೇಶ ಗುತ್ತಿ, ಡಾ. ಶಿವನಗೌಡ ದಾನರೆಡ್ಡಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಪಾಲ್ಗೊಂಡಿದ್ದರು.

Leave a Reply

error: Content is protected !!