You are currently viewing ಮುದಗಲ್ಲ:- ಗಮನ ಸೆಳೆದ ‘ತನಾರತಿ ಮೆರವಣಿಗೆ…

ಮುದಗಲ್ಲ:- ಗಮನ ಸೆಳೆದ ‘ತನಾರತಿ ಮೆರವಣಿಗೆ…

ಮುದಗಲ್ಲ ವರದಿ..

ಗಮನ ಸೆಳೆದ ‘ತನಾರತಿ ಮೆರವಣಿಗೆ…

ಮುದಗಲ್ಲ : ಐತಿಹಾಸಿಕ ಮುದಗಲ್ಲ ಪಟ್ಟಣದ ಕುಂಬಾರ ಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದ ರಥೋತ್ಸವ ಹಾಗೂ ವಿಶ್ವ ಗುರು ಬಸವಣ್ಣ ನವರ ಜಯಂತ್ಯೋತ್ಸವ ಅಂಗವಾಗಿ ಸುಕ್ಷೇತ್ರ ಗುರುಗುಂಟಿ ಶ್ರೀ ಅಮರೇಶ್ವರ ಎಂಟನೇ ದಿನ ಚರಿತಾಮೃತ ಪುರಾಣ ಕಾರ್ಯ ಕ್ರಮದಲ್ಲಿ ಶ್ರೀ ನೀಲಕಂಠೇಶ್ವರ ದಿಂದ ಕುಂಬಾರ ಓಣಿಯ ಶ್ರೀ ಬಸವೇಶ್ವರ ದೇವಸ್ಥಾನದ ವರಗೆ ಪ್ರಮುಖ ಬೀದಿಗಳಲ್ಲಿ ಮಹಿಳೆ ಯರು ತನಾರತಿ ತಲೆ ಮೇಲೆ ಹೊತ್ತು ತಂದ ಮಹಿಳೆಯರು ಗಮನ ಸೆಳೆದರು. ಜಾತ್ರಾ ಮಹೋತ್ಸವದಲ್ಲಿ ಭಕ್ತಾಧಿಗಳ ಇಷ್ಠಾರ್ಥ ಈಡೇರಿಕೆ ನಿಮಿತ್ಯ ತನಾರಾತಿ (ದೀಪೋತ್ಸವ) ಉತ್ಸವ ನಡೆದ್ದಿದ್ದು ವಿಶೇಷವಾಗಿದೆ.

ಗೋದಿ ಹಿಟ್ಟು‌ ಮತ್ತು ಎಣ್ಣೆಯನ್ನು ನೀಡಲಾಗುತ್ತದೆ. ಕಣಕದ ಹಿಟ್ಟನ್ನು ಹದ ಮಾಡಿ ಹಣತೆಯನ್ನಾಗಿಸಿ ಕೊಳ್ಳಲಾಗುತ್ತದೆ.ಅರಿವಿಯಿಂದ ಬತ್ತಿ ತಯಾರಿಸಿಟ್ಟು‌ಕೊಂಡ ಬಳಿಕ ದೀಪ ತಂದು ಬತ್ತಿಯನ್ನು ಹೊತ್ತಿಸಿ, ತಲೆಯ ಮೇಲೆ ಜ್ಯೋತಿಯನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ಕುಂಡುಬಂದಿತ್ತು. ವಿವಿಧ ವಾದ್ಯಗಳ ನಿನಾದ‌ ಭಕ್ತರ ಜಯಘೋಷಗಳು ಕೇಳಿ ಬಂದವು

ಅಭಿನವ ಚನ್ನಬಸವ ಮಹಾಸ್ವಾಮಿ ಶಿವಾಚಾಯ೯ರು ಅವರು ವಿಶೇಷ ಪೂಜೆ ಸಲ್ಲಿಸಿದ್ದರು ನೀಲಕಂಠೇಶ್ವರ ದೇವಸ್ಥಾನ ದಿಂದ ಆರಂಭಗೊಂಡ ಮೆರವಣಿಗೆ ಪೋಲಿಸ್ ಠಾಣೆಯಲ್ಲಿ ,ಚೌಡಿಕಟ್ಟಿ ,ಮುಖಾಂತರ ಕುಂಬಾರ ಓಣಿಯ ಬಸವೇಶ್ವರ ದೇವಾಲಯ ತಲುಪಿತು.ಎರಡು ಸಾಲಿನಲ್ಲಿ ಮೆರವಣಿಗೆ ಯಲ್ಲಿ ಪಾಲ್ಗೊಂಡ ಮಹಿಳೆಯರು ಜಾತ್ಯತೀತವಾಗಿ ಪಾಲ್ಗೊಂಡರು. ನಂತರ ಕುಂಬಾರ ಓಣಿಯ ಬಸವೇಶ್ವರ ದೇವಾಲಯದ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ಕುಂಬಾರ ಬಸವೇಶ್ವರ ದೇವಾಲಯದ ಅಧ್ಯಕ್ಷ ರಾದ ಮಲ್ಲಪ್ಪ ಮಾಟೂರು, ಗಾಯಕರಾದ ಮನೋಹರ್ ಹಿರೇಮಠ , ತಬಲಾ ವಾದ್ಯಕರಾದ ಪ್ರತಾಪ ಹಿರೇಮಠ ಕುಷ್ಟಗಿ ಹಾಗೂ ಶಿವನಂದ ಸುಂಕದ ,ಲಿಂಗಪ್ಪ ಹಣಗಿ, ಮಹಾಂತೇಶ್ ಪಾಟೀಲ್, ಶರಣಪ್ಪ ಸಜ್ಜನ್ , ಸಂತು ಸುರಪುರ, ವೀರೇಶ ಕೇಣೇದ್ ,ಮಹಾಂತೇಶ್ ಗದ್ದಿ, ಮಹಾಂತೇಶ ಕುಂಬಾರ, ಮಲೇಶ ಕುಂಬಾರ, ವೆಂಕಣ್ಣ ಕುಂಬಾರ,  ಬಸವರಾಜ ಮಡಿವಾಳ, ಬಸಣ್ಣ ಚಟ್ಟರ್, ವಿರೇಶ ಸಜ್ಜನ್, ಸಂಗಪ್ಪ ಕೊಡೆಕಲ್, ಶಂಕರ ಮಾಟೂರು, ಉದಯ ಕುಮಾರ್
ಕಂಬಾರ ,ಮಹಿಳೆಯರುರಾದ ಶಶಿಕಲಾ ಬೋವಿ, ಅನುರಾಧ ಸಿದ್ದಯ್ಯ ಸಾಲಿಮಠ,ತೋಟಮ್ಮ , ವಿಜಯಲಕ್ಷ್ಮಿ, ಶಿವಮ್ಮ, ಜೋತಿ ಕುಂಬಾರ, ಇತರರು ಉಪಸ್ಥಿತರಿದ್ದರು

ವರದಿ: ಮಂಜುನಾಥ ಕುಂಬಾರ

Leave a Reply

error: Content is protected !!