You are currently viewing FLASH NEWS : ರಾಯಚೂರು | ಲೋಕಾಯುಕ್ತ‌ ಬಲೆಗೆ ಬಿದ್ದ ಎಇಇ ಬಿ.ವಿಜಯಲಕ್ಷ್ಮಿ..!

FLASH NEWS : ರಾಯಚೂರು | ಲೋಕಾಯುಕ್ತ‌ ಬಲೆಗೆ ಬಿದ್ದ ಎಇಇ ಬಿ.ವಿಜಯಲಕ್ಷ್ಮಿ..!

FLASH NEWS : ರಾಯಚೂರು | ಲೋಕಾಯುಕ್ತ‌ ಬಲೆಗೆ ಬಿದ್ದ ಎಇಇ ಬಿ.ವಿಜಯಲಕ್ಷ್ಮಿ..!

ಪ್ರಜಾವೀಕ್ಷಣೆ ಸುದ್ದಿ: 

ಸಿಂಧನೂರು: ಬೆಳ್ಳಂಬೆಳಿಗ್ಗೆ ರಾಯಚೂರಿನಲ್ಲಿ ಲೋಕಾಯುಕ್ತ‌ ಎಇಇ ಆಗಿರುವ ಬಿ.ವಿಜಯಲಕ್ಷ್ಮಿ ಮನೆ ಮೇಲೆ ದಾಳಿ,ಆದಾಯಕ್ಕಿಂತ‌ ಅಧಿಕ ಆಸ್ತಿ ಆರೋಪ ಹಿನ್ನೆಲೆ ದಾಳಿ ನಡೆಸಲಾಗಿದೆ.

ರಾಯಚೂರಿ‌ನ ಐಡಿಎಸ್‌ಎಂಟಿ ಬಡಾವಣೆಯಲ್ಲಿನ ಇವರ ಮನೆ ಇದ್ದು, ಜೊತೆಗೆ ಗಂಗಾಪರಮೇಶ್ವರ ಲೇಔಟ್‌ನಲ್ಲಿನ ಮನೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಾಯಚೂರು ನಗರದಲ್ಲಿನ ಎರಡು ಮನೆ ಸೇರಿ ಐದು ಕಡೆ ದಾಳಿ ನಡೆಸಲಾಗಿದೆ.

ರಾಯಚೂರು ಕೊಪ್ಪಳ ಬಳ್ಳಾರಿ ಮೂರು ಜಿಲ್ಲೆಯ ಐದು ತಂಡಗಳಿಂದ ದಾಳಿ ನಡೆಸಲಾಗಿದೆ.

ಆದಾಯಕ್ಕಿಂತ‌ ಅಧಿಕ ಆಸ್ತಿ ಆರೋಪ ಹಿನ್ನೆಲೆ ದಾಳಿ ಮಾಡಲಾಗಿದೆ. ಸಿಂಧನೂರಿನಲ್ಲಿ ಆರ್‌ಡಬ್ಲ್ಯೂಎಸ್ ಕಚೇರಿ ಮೇಲೆಯೂ ದಾಳಿ ನಡೆಸಿದ್ದು, ಒಟ್ಟು 49 ಕಡೆಗಳಲ್ಲಿ ಆಸ್ತಿ ಮಾಡಿರುವ ಎಇಇ ಬಿ.ವಿಜಯಲಕ್ಷ್ಮಿ,ನಿವೇಶನ, ಮನೆ ,ಜಮೀನು ದಾಖಲೆ, ಚಿನ್ನಾಭರಣವನ್ನು ಲೋಕಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ರಾಯಚೂರು ಲೋಕಾಯುಕ್ತ ಎಸ್ ಪಿ ಸತೀಶ್ ಚಿಟಗುಬ್ಬಿ ಮಾರ್ಗದರ್ಶನದಲ್ಲಿ ಅಧಿಕಾರಿಗಳ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

Prajavikshane

Chandru R Bhanapaur

Leave a Reply

error: Content is protected !!