BREAKING : ‘ಪಾಕಿಸ್ತಾನ ಹೀರೋ ಅಂದರೆ ಅದು ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ’..!!
ಪ್ರಜಾವೀಕ್ಷಣೆ ಡಿಜಿಟಲ್ ಡೆಸ್ಕ್ : ‘ಪಾಕಿಸ್ತಾನ ಹೀರೋ ಅಂದರೆ ಅದು ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಈ ಕಾಂಗ್ರೆಸ್ ನವರಿಗೆ ಪಾಕಿಸ್ತಾನದಿಂದ ಪ್ರೀವಿಸ ಕೊಡುತ್ತಾರೆ. ಹೋಗಿ ನೋಡಿಕೊಂಡು ಬರಲಿ’ ಎಂದು ಶಾಸಕ ಯತ್ನಾಳ್ ವ್ಯಂಗ್ಯವಾಡಿದರು.
ಈ ಬಗ್ಗೆ ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ‘ಆಪರೇಷನ್ ಸಿಂಧೂರ್ ಕುರಿತಂತೆ ಕೊತ್ತೂರು ಮಂಜುನಾಥ್ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, ‘ಶಾಸಕ ಮಂಜುನಾಥ್ ಗೆ ಅನುಮಾನ ಇದ್ದರೆ ಅದೇ ಫ್ಲೈಟ್ ನಲ್ಲಿ ಅವರು ಹೋಗಿ ನೋಡಿಕೊಂಡು ಬರಲಿ. ಪಾಕಿಸ್ತಾನ ಹೀರೋ ಅಂದರೆ ಅದು ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ. ಕಾಂಗ್ರೆಸ್ ನವರಿಗೆ ಪಾಕಿಸ್ತಾನದಿಂದ ಪ್ರೀವಿಸ ಕೊಡುತ್ತಾರೆ. ಹೋಗಿ ನೋಡಿಕೊಂಡು ಬರಲಿ’ ಎಂದು ಶಾಸಕ ಯತ್ನಾಳ್ ವ್ಯಂಗ್ಯವಾಡಿದರು.
ಇವರು ದಾಳಿಗೆ ಒಳಗಾದಂತಹ ಉಗ್ರರ ಕ್ಯಾಂಪ್ ನೋಡಿಕೊಂಡು ಬರಲಿ. ಸೈನಿಕರ ಕುರಿತು ಈ ರೀತಿ ಮಾತನಾಡುವುದು ಸರಿಯಲ್ಲ, ಅನುಮಾನ ಇದ್ದರೆ, ಶಾಸಕ ಕೊತ್ತೂರು ಮಂಜುನಾಥ್ ನೋಡಿಕೊಂಡು ಬರಲಿ ಎಂದು ಕಿಡಿ ಕಾರಿದರು.