LOCAL NEWS :”ಮೂಕ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ”….!
ಕೊಪ್ಪಳ : ರಾಮನಗರ ಜಿಲ್ಲೆಯ ಬಿಡದಿ ಸಮೀಪ ಅಪ್ರಾಪ್ತ ಬಾಲಕಿ ಖುಷಿ ಎಂಬಾಕಿ ಮಾತುಬಾರದ, ಕಿವಿ ಕೇಳಿಸದ 15 ವರ್ಷದ ಅಪ್ರಾಪ್ತ ಹೆಣ್ಣು ಮಗಳನ್ನು ಬಲವಂತವಾಗಿ ಎಳೆದೊಯ್ದು, ಮೂರರಿಂದ ನಾಲ್ಕು ಜನ ಯುವಕರು ಸಾಮೂಹಿಕ ಅತ್ಯಾಚಾರ ಮಾಡಿ, ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಜರಗಿಸಬೇಕು ಮತ್ತು ಬಾಲಕಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಸಂವಿಧಾನ ಸಂಗಾತಿಗಳ ಪಡೆ ಗುರುವಾರ ಕೊಪ್ಪಳ ಜಿಲ್ಲಾಧಿಕಾರಿಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿ, ಒತ್ತಾಯಿಸಿದರು.
ಈ ನಿಯೋಗದಲ್ಲಿ ಪ್ರಮುಖರಾದ ನಿಂಗಪ್ಪ ಜಿ.ಎಸ್. ಬೆಣಕಲ್, ಗಾಳೇಪ್ಪ ಮಕ್ಕಳ್ಳಿ, ಕರಿಯಪ್ಪ ಮಣ್ಣಿನವರ, ಗೌರಿ ಗೋನಾಳ, ಶಶಿಕಲಾ ಮಠದ, ಕೃಷ್ಣಾ ವೇಣಿ, ರೇಣುಶ್ರೀ ಚವ್ಹಾಣ್, ಮೈಲಪ್ಪ ಮಾದಿನೂರು ಮತ್ತು ಮಂಜುಳಾ ಕವಲೂರು ಸೇರಿದಂತೆ ಹಲವರು ಭಾಗಿಯಾಗಿದ್ದರು.