You are currently viewing LOCAL NEWS : “ಕೊಪ್ಪಳ |ಅಳಿದುಳಿದ ಹೆಸರು ಕಾಳಿಗೆ ಬೆಂಬಲ ಬೆಲೆ  ನೀಡಲು ಮತ್ತು ಖರೀದಿ ಕೇಂದ್ರ ಆರಂಭಿಸಲು  ರೈತರ ಆಗ್ರಹ”

LOCAL NEWS : “ಕೊಪ್ಪಳ |ಅಳಿದುಳಿದ ಹೆಸರು ಕಾಳಿಗೆ ಬೆಂಬಲ ಬೆಲೆ  ನೀಡಲು ಮತ್ತು ಖರೀದಿ ಕೇಂದ್ರ ಆರಂಭಿಸಲು  ರೈತರ ಆಗ್ರಹ”

“ಕೊಪ್ಪಳ |ಅಳಿದುಳಿದ ಹೆಸರು ಕಾಳಿಗೆ ಬೆಂಬಲ ಬೆಲೆ  ನೀಡಲು ಮತ್ತು ಖರೀದಿ ಕೇಂದ್ರ ಆರಂಭಿಸಲು  ರೈತರ ಆಗ್ರಹ”

 

 

ಪ್ರಜಾವೀಕ್ಷಣೆ ಡೆಸ್ಕ್‌ ನ್ಯೂಸ್‌ : 

ಕೊಪ್ಪಳ  : ಜಿಲ್ಲೆಯಾದ್ಯಂತ  25850 ಹೆಕ್ಟರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ . ನಿರಂತರ ಮಳೆಗೆ ಹೆಸರು ಬೆಳೆ, ಹೊಲದಲ್ಲಿ ನಾಶವಾದರೆ ಕೆಲವು ರೈತರು ಅಳಿದುಳಿದಿರುವ ಹೆಸರು ಕಾಳನ್ನು ಕಟಾವು ಮಾಡಿ ಒಣಗಲು ಹಾಕಿದ ಹೆಸರು ಕಾಳು, ಮಳೆಗೆ ಸಿಕ್ಕು ಲಡ್ಡು ಬಡೆದು ಹೋಗಿದೆ. ಕಾಳು ಕಪ್ಪಾಗಿದ್ದು ಅಲ್ಲದೇ ಮೋಡ ಕವಿದ ವಾತಾವರಣದ ಪರಿಣಾಮದಿಂದ ಹೆಸರು ಕಾಳಿನ ಕಲರ್ ಡಿಮ್ ಆಗಿರುವುದರಿಂದ ಮಾರುಕಟ್ಟೆಯಲ್ಲಿ ಹೆಸರು ಕಾಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಯ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೊಳ್ಳುರು ಅವರು ತಿಳಿಸಿದ್ದಾರೆ.

ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕುಕನೂರು ತಾಲ್ಲೂಕಿನ ಯರೇಹಂಚಿನಾಳ ಗ್ರಾಮ ಸೇರಿದಂತೆ ಬಹುತೇಕ ಭಾಗಗಳಲ್ಲಿ ಈ ವರ್ಷದ ಮುಂಗಾರು ಬೆಳೆಗಳು ಮಣ್ಣು ಪಾಲಾಗಿದ್ದು, ಅಳಿದುಳಿದಿರುವ ಹೆಸರು ಕಟಾವಿಗಾಗಿ 350 ರಿಂದ 400 ರೂಪಾಯಿಗೆ. ಕೂಲಿ ಕಾರ್ಮಿಕರಿಗೆ ಕೊಡಲು ಪುಡಿಗಾಸಿನ ಹಣವು ಸಹ ರೈತರ ಕಡೆ ಇಲ್ಲ. ಹೀಗಾಗಿ ರೈತರು ಈ  ಬಾರಿ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ಬೆಳೆ ನಷ್ಟದ ಪರಿಹಾರವನ್ನು ಸರ್ಕಾರ  ಈ ಕೂಡಲೇ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಅನ್ನದಾತರಿಗೆ ಬೆಳೆ ಬೆಳೆದರೂ ಕಷ್ಟ,  ಬೆಳೆಯದೆ ಇದ್ದರೂ ಕಷ್ಟ ಎರಡರ ಮಧ್ಯೆದಲ್ಲಿ ರೈತರಿಗೆ ಕೂಲಿ ಕಾರ್ಮಿಕರ ಖರ್ಚು ಹೆಚ್ಚಾಗುತ್ತಿದೆ . ರೈತರು ಹೆಸರು ಬೆಳೆಯನ್ನು ಮಿಷನ್ ಮೂಲಕ ಕಟಾವು ಮಾಡಿಸಿದರೂ ಕೂಡ 6 ಎಕರೆ 12000ಸಾವಿರ  ರೂಪಾಯಿ  ಖರ್ಚು ಮಾಡಿದ್ದಾರೆ.  6ಎಕರೆಗೆ ಒಂದು ಚಿಲ ಹೆಸರು ಆಗಿದೆ.  ಗದಗ ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ  ಅಲ್ಲಿ ಮೂರು ಸಾವಿರ ರೂಪಾಯಿಗೆ ಮಾರಾಟವಾಗಿದೆ.  ರೈತರಿಗೆ ಲಾಭ ದೊರಕದೇ ಇರುವುದರಿಂದ ರೈತರು ಬೇಸತ್ತು ಹೋಗಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ  ಸಚಿವ ಶಿವರಾಜ ತಂಗಡಗಿ ಅವರು ಹೆಸರು ಬೆಳೆ ನಾಶವಾದ ರೈತರ ಜಮೀನಿಗೆ  ಇಲ್ಲಿವರೆಗೆ ಭೇಟಿ ನೀಡಿ,  ಬೆಳೆ ಪರಿಶೀಲನೆ ಮಾಡಲು ಮತ್ತು  ಪರಿಹಾರ ಕೊಡಲು ಜಿಲ್ಲೆಯ ಯಾವ ಜನಪ್ರತಿನಿಧಿಗಳು  ಮುಂದಾಗಿಲ್ಲ.  ಕೊನೆಗೆ ರೈತರಿಗೆ ಅಳಿದು ಉಳಿದಿರುವ ಹೆಸರು ಬೆಳೆಗಾದರೂ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು  ಎಂದು ಸ್ಥಳೀಯ ರೈತರು ಆಗ್ರಹಿಸಿದರು

 ಈ ಸಂಧರ್ಭದಲ್ಲಿ ಗ್ರಾಮದ ರೈತರಾದ ಮುತ್ತಣ್ಣ ಮಾದಿನೂರು, ವಸಂತ್ ಗಾಣೆಗೆರ, ರಾಜಶೇಖರ್, ಮಾರುತಿ ಮರಡಿ ಸೇರಿದಂತೆ  ಇನ್ನಿತರರು ಇದ್ದರು.

Prajavikshane

Chandru R Bhanapaur

Leave a Reply

error: Content is protected !!