You are currently viewing LOCAL NEWS : ಕಾ.ನಿ.ಪ. ಧ್ವನಿ ಸಂಘದಿಂದ ಹಿರಿಯ ಸಾಹಿತಿ ದಿ.ಎಸ್ಎಲ್ ಭೈರಪ್ಪ ನವರಿಗೆ ನುಡಿ ನಮನ..!

LOCAL NEWS : ಕಾ.ನಿ.ಪ. ಧ್ವನಿ ಸಂಘದಿಂದ ಹಿರಿಯ ಸಾಹಿತಿ ದಿ.ಎಸ್ಎಲ್ ಭೈರಪ್ಪ ನವರಿಗೆ ನುಡಿ ನಮನ..!

ಪ್ರಜಾ ವೀಕ್ಷಣೆ ಸುದ್ದಿ :-

LOCAL NEWS : ಕಾ.ನಿ.ಪ. ಧ್ವನಿ ಸಂಘದಿಂದ ಹಿರಿಯ ಸಾಹಿತಿ ದಿ.ಎಸ್ಎಲ್ ಭೈರಪ್ಪ ನವರಿಗೆ ನುಡಿ ನಮನ..!

ಕುಕನೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ ಸಂಘಟಣೆ ತಾಲೂಕ ಸಮಿತಿಯ ವತಿಯಿಂದ ಆಧುನಿಕ ಕನ್ನಡ ಕಾದಂಬರಿಕಾರ, ಹಿರಿಯ ಸಾಹಿತಿ, ಸರಸ್ವತಿ ಪುತ್ರ, ದಿ. ಎಸ್ ಎಲ್ ಬೈರಪ್ಪ ನವರಿಗೆ “ನುಡಿ ನಮನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾ.ನಿ.ಪ. ಧ್ವನಿ ತಾಲೂಕ ಸಮಿತಿಯ ಗೌರವಾಧ್ಯಕ್ಷ ಮಹೇಶ್ ಕಲ್ಮಠ, ‘ದಿವಂಗತ ಎಸ್ ಎಲ್ ಭೈರಪ್ಪನವರು ಆಧುನಿಕ ಕನ್ನಡ ಸಾಹಿತ್ಯ ಕಾದಂಬರಿಕಾರರಲ್ಲಿ ಮಹಾನ್ ಬರಹಗಾರರಾಗಿದ್ದು, ಇವರ ಪ್ರತಿಯೊಂದು ಕಾದಂಬರಿಯೂ ಕೂಡ ಯುವ ಮನ ಸೆಳೆಯುವಂತಹದ್ದಾಗಿದೆ. ನವ್ಯ ಸಾಹಿತ್ಯವನ್ನು ತಮ್ಮ ಬರವಣಿಗೆ ಮುಖಾಂತರ ಎಷ್ಟೋ ಯುವಕರನ್ನ ಸೆಳೆದಂತ ಎಸ್ ಎಲ್ ಭೈರಪ್ಪನವರು ಕಾದಂಬರಿ ಸಾಹಿತ್ಯ ಲೋಕದ ಮಹಾನ್ ಚೇತನ ಇವರು, “ತಬ್ಬಲಿಯೂ ನೀನಾದೆ ಮಗನೇ”, “ವಂಶವೃಕ್ಷ”, “ನಾಯಿ ನೆರಳು” “ಪರ್ವ” ಇನ್ನು ಅನೇಕ ಕಾದಂಬರಿಗಳು ಹಲವಾರು ಬಾರಿ ಮರು ಮುದ್ರಣವಾಗಿ ಪ್ರಕಟಗೊಂಡಿವೆ, ಜೊತೆಗೆ ಇವತ್ತಿನವರೆಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ ಎಂದು ನುಡಿ ನಮನ ಸಲ್ಲಿಸಿದರು.

ಇದೇ ವೇಳೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಕುಕನೂರು ತಾಲೂಕಾ ಸಮಿತಿಗೆ ಅಧಿಕೃತವಾಗಿ ಮಹಿಳಾ ಸದಸ್ಯೆ ಓರ್ವರನ್ನು ಸೇರ್ಪಡೆ ಮಾಡಲಾಯಿತು.

ಪತ್ರಕರ್ತೆ ಶ್ರೀಮತಿ ಅಲ್ಲಾಬೇಗಂ ಎಂ ಅಮರಾವತಿಯವರು ಪತ್ರಿಕೋದ್ಯವದಲ್ಲಿ ಸ್ನಾತಕೋತ್ತರ ಪದವಿ ಪಡೆದಂತಹ ಪ್ರತಿಭಾನ್ವಿತ ಮುಸ್ಲಿಂ ಸಮುದಾಯದ ಮಹಿಳೆ ಇವರಾಗಿದ್ದು, ಇವರು ಪತ್ರಿಕಾ ರಂಗಕ್ಕೆ ಬಂದಿರುವುದು ಬಹಳ ಹೆಮ್ಮೆ ತರುವಂತ ವಿಷಯವಾಗಿದೆ’ ಎಂದು ಕಾ.ನಿ.ಪ. ಧ್ವನಿ ಸಂಘದ ತಾಲೂಕಾ ಸಮಿತಿ ಅಧ್ಯಕ್ಷ ಚಂದ್ರು ಆರ್ ಭಾನಾಪುರ್ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುನಿಲ್ ಕುಮಾರ್ ಮಠದ್ ಅವರು ಘನ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಧಾನ ಕಾರ್ಯದರ್ಶಿ ವೀರಯ್ಯ ವ್ಹಿ ಹಿರೇಮಠ ಮಾಡಿದರು. ಸದಸ್ಯರಾದ ಮುತ್ತಯ್ಯ ತೋಂಟದಾರ್ಯಮಠ, ಮಹಿಳಾ ಸದಸ್ಯರಾದ ಅಲ್ಲಾಬೇಗಂ ಎಮ್ ಅಮರಾವತಿ ಹಾಗೂ ಇನ್ನಿತರರು ಇದ್ದರು.

Leave a Reply

error: Content is protected !!