You are currently viewing SPECIAL NEWS: “ಗಂಗಾವತಿ | ಸ್ವಿರ್ಜ್ಜಲ್ಯಾಂಡ್‌ ಕ್ರೈಸ್ತ್‌ ಪ್ರಜೆಯಿಂದ  ಗಣೇಶೋತ್ಸವ : ಮುಸ್ಲಿಂ  ಮನೆಯಲ್ಲಿ ಗಣಪತಿ  ಪ್ರತಿಷ್ಥಾಪನೆ ಮಾಡಿ ಭಾವೈಕತೆಗೆ ನಾಂದಿ ಹಾಡಿದ! ಇಲ್ಲಿದೆ ನೋಡಿ ಡಿಟೇಲ್ಸ್”  

SPECIAL NEWS: “ಗಂಗಾವತಿ | ಸ್ವಿರ್ಜ್ಜಲ್ಯಾಂಡ್‌ ಕ್ರೈಸ್ತ್‌ ಪ್ರಜೆಯಿಂದ  ಗಣೇಶೋತ್ಸವ : ಮುಸ್ಲಿಂ  ಮನೆಯಲ್ಲಿ ಗಣಪತಿ  ಪ್ರತಿಷ್ಥಾಪನೆ ಮಾಡಿ ಭಾವೈಕತೆಗೆ ನಾಂದಿ ಹಾಡಿದ! ಇಲ್ಲಿದೆ ನೋಡಿ ಡಿಟೇಲ್ಸ್”  

“ಗಂಗಾವತಿ | ಸ್ವಿರ್ಜ್ಜಲ್ಯಾಂಡ್‌ ಕ್ರೈಸ್ತ್‌ ಪ್ರಜೆಯಿಂದ  ಗಣೇಶೋತ್ಸವ : ಮುಸ್ಲಿಂ  ಮನೆಯಲ್ಲಿ ಗಣಪತಿ  ಪ್ರತಿಷ್ಥಾಪನೆ ಮಾಡಿ ಭಾವೈಕತೆ ಮೆರೆದ! ಇಲ್ಲಿದೆ ನೋಡಿ ಡಿಟೇಲ್ಸ್…!”

ಪ್ರಜಾವೀಕ್ಷಣೆ ಡೆಸ್ಕ್‌ ನ್ಯೂಸ್:‌  

ಕೊಪ್ಪಳ:  ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿ ಸ್ವಿಟ್ಜರ್ಲೆಂಡಿನ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದ ವ್ಯಕ್ತಿಯೊಬ್ಬರು ಮುಸ್ಲಿಮರ ಮನೆಯೊಂದನ್ನು ಬಾಡಿಗೆ ಪಡೆದುಕೊಂಡು ಅಲ್ಲಿ ಹಿಂದೂಗಳ ಆರಾಧ್ಯ ದೈವ ಗಣೇಶನನ್ನು ಸ್ಥಾಪಿಸಿ ಪೂಜಿಸುವ ಮೂಲಕ ಗಮನ ಸೆಳೆದಿದ್ದಾರೆ.

ಈ ಮೂಲಕ ನಂಬಿಕೆ ಮತ್ತು ಆಚರಣೆಗೆ ಧಾರ್ಮಿಕ ಚೌಕಟ್ಟುಗಳಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಮೂಲತಃ ಮಧ್ಯ ಸ್ವಿಟ್ಜರ್ಲೆಂಡಿನ ಮಾರ್ಟಿನ್ ಎಂಬ ವ್ಯಕ್ತಿ ಕಳೆದ ಒಂದು ವರ್ಷದ ಹಿಂದೆ ಆನೆಗೊಂದಿಗೆ ಬಂದು, ದಸ್ತಗಿರಿ ಮಹೆಬೂಬ ಎಂಬುವವರ ಮನೆಯನ್ನು ಬಾಡಿಗೆ ಪಡೆದುಕೊಂಡಿದ್ದಾರೆ. ವೃತ್ತಿಯಿಂದ ಒತ್ತಡ ಹೊಂದಿದ್ದ ಮಾರ್ಟಿನ್, ಕಳೆದ ಏಳು ವರ್ಷದಿಂದ ಹಿಂದೂ ಧರ್ಮದತ್ತ ವಾಲಿದ್ದು, ಸ್ಥಳೀಯರೊಂದಿಗೆ ಬೆರೆತು ಹೋಗಿದ್ದಾರೆ. ಅಲ್ಲಿ ಈ ಬಾರಿ ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಭಾವೈಕತೆ ಮೆರಿದ್ದಾರೆ.

ಹಿಂದೂ ಧರ್ಮದ ಆಚರಣೆ, ನಂಬಿಕೆಗಳ ಮೇಲೆ ಹೆಚ್ಚು ಒಲವು ಇರಿಸಿಕೊಂಡಿರುವ ಮಾರ್ಟಿನ್, ಇದೇ ಮೊದಲ ಬಾರಿಗೆ ತಾನು ವಾಸವಿರುವ ಮುಸ್ಲಿಮರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಮತ್ತೊಂದು ವಿಶೇಷ ಎಂದರೆ, ಮಾರ್ಟಿನ್‌ಗೆ ಕೆಲ ಮುಸ್ಲಿಂ ಯುವಕರು ಗಣೇಶನ ಪ್ರತಿಷ್ಠಾಪನೆಗೆ ಸಾಥ್ ನೀಡಿದ್ದಾರೆ. ಇದಕ್ಕಾಗಿ ಮಾರ್ಟಿನ್ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ.

”ಹಿಂದೂ ಧರ್ಮದ ಆಚರಣೆ, ಜಪ-ತಪ, ಸಂಸ್ಕೃತಿ, ಸಂಸ್ಕಾರ ನನಗೆ ನೆಮ್ಮದಿ ನೀಡಿದ್ದಲ್ಲದೇ ಪ್ರೇರಣೆಯಾಗಿದೆ. ಮುಖ್ಯವಾಗಿ ‘ಓಂ ನಮಃ ಶಿವಾಯ’ ಎಂಬ ಪದ ಜಪಿಸಿದರೆ ಸಾಕು ಮಾನಸಿಕ ನೆಮ್ಮದಿ ಸಿಕ್ಕಂತಾಗುತ್ತಿದೆ” ಎಂದು ಮಾರ್ಟಿನ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಮಹಿಳೆ ಉಮಾ ಎಂಬುವವರು ಪ್ರೇರಣೆಯಿಂದ ಹಾಗೂ ಶಿವನ ಪುತ್ರ ವಿನಾಯಕನ ಇತಿಹಾಸದ ಬಗ್ಗೆ ಹೇಳಿದ್ದರಿಂದ ಅದರಿಂದ ಪ್ರೇರೇಪಿತನಾದ ಮಾರ್ಟಿನ್, ಈ ಬಾರಿ ತನ್ನ ಬಾಡಿಗೆ ಮನೆಯಲ್ಲಿ ಗಣೇಶನನ್ನು ಕೂರಿಸಿದ್ದಾರೆ

. ಗ್ರಾಮದ ಪವನ್ ಎಂಬ ವ್ಯಕ್ತಿ ಗಣೇಶನ ಕೂರಿಸಲು ಮಾರ್ಗದರ್ಶನ ಮಾಡಿದ್ದಾರೆ. ಇಬ್ಬರು ಮಕ್ಕಳು, ಪತ್ನಿಯನ್ನು ಸ್ವಿಟ್ಜರ್ಲೆಂಡಿನಲ್ಲಿ ಬಿಟ್ಟು ಬಂದಿರುವ ಮಾರ್ಟಿನ್, ಸದ್ಯಕ್ಕೆ ಆನೆಗೊಂದಿ ಗ್ರಾಮದ ಚಿಂತಾಮಣಿ ರಸ್ತೆಯಲ್ಲಿರುವ ಆಂಜನೇಯನ ದೇವಸ್ಥಾನದ ಪಕ್ಕದಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

“ಗಣೇಶ ಹಬ್ಬವನ್ನು ಆಚರಿಸುತ್ತಿರುವುದು ನನಗೆ ಬಹಳ ಸಂತೋಷವಾಗುತ್ತಿದೆ. ನಾನು ಸ್ವಿಟ್ಜರ್ಲೆಂಡಿನಿಂದ ಇಲ್ಲಿಗೆ ಬಂದಾಗ ಸಾಕಷ್ಟು ಸಮಸ್ಯೆ ಹಾಗೂ ಅಡೆತಡೆಗಳನ್ನು ಎದುರಿಸುತ್ತಿದ್ದೆ. ಆದರೆ  ಸ್ಥಳೀಯರ ಸಹಕಾರ ಮತ್ತು ಸಹಾಯದಿಂದ ಈಗ ಅವೆಲ್ಲವೂ ದೂರುವಾಗಿದ್ದು ಬಹಳ ಖುಷಿಯಾಗಿದ್ದೇನೆ. ಇದಕ್ಕೆ ಕಾರಣ ಗಣೇಶ ದೇವರು . ಹಾಗಾಗಿ ಎಲ್ಲ ಕಷ್ಟಗಳನ್ನು ದೂರ ಮಾಡಿದ ಗಣೇಶ ಹಬ್ಬವನ್ನು ಎಲ್ಲರೂ ಸೇರಿ ಆಚರಿಸುತ್ತಿದ್ದೇವೆ”.

-ಮಾರ್ಟಿನ್ – ಸ್ವಿಟ್ಜರ್ಲೆಂಡಿನ ನಿವಾಸಿ.

Prajavikshane

Chandru R Bhanapaur

Leave a Reply

error: Content is protected !!