Post Views: 132
BREAKING : ಸಿಡಿಲು ಬಡಿದು ಆರು ಹಸುಗಳ ದುರ್ಮರಣ: ರೈತ ಕುಟುಂಬ ಕಂಗಾಲು..!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಗಂಗಾವತಿ, ಏಪ್ರಿಲ್ 17 : ಇಂದು ನಸುಕಿನ ಜಾವ ಭಾರಿ ಸಿಡಿಲು-ಗುಡುಗು ಸಹಿತ ತಾಲ್ಲೂಕಿನಾದ್ಯಂತ ಅಕಾಲಿಕ ಭಾರೀ ಮಳೆ ಆಗಿದೆ. ತಾಲೂಕಿನ ಸಿದ್ದಿಕೇರಿಯಲ್ಲಿನ ಕುರಿಹಟ್ಟಿಯ ಮೇಲೆ ಸಿಡಿಲು ಬಡಿದು ಆರು ಆಕಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಜಾನುವಾರುಗಳನ್ನು ಕನಕಗಿರಿ ತಾಲ್ಲೂಕಿನ ಬಂಕಾಪುರಕ್ಕೆ ಸೇರಿದ ಪಾರ್ವತಮ್ಮ ಸಣ್ಣ ಯಂಕಪ್ಪ ಬಂಡೇರ, ನಾಗೇಶ ಸಣ್ಣ ತಿಮಪ್ಪ ಬಂಡೇರ್ ಅವರಿಗೆ ಸೇರಿದ ತಲಾ ಮೂರು ಆಕಳು ಸಾವನ್ನಪ್ಪಿವೆ. ಒಂದೊಂದು ಜಾನುವಾರು ಸುಮಾರು 60 ಸಾವಿರ ಮೊತ್ತವಿದ್ದು, ಒಟ್ಟು 3.50 ಲಕ್ಷ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲೆಮಾರಿ ಜನಾಂಗಕ್ಕೆ ಸೇರಿದ ಈ ಕುಟುಂಬಗಳು, ಕುರಿ ಮತ್ತು ಆಕಳುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮೇಯಲು ಕರೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
ಹೊಲಗಳಲ್ಲಿ ಕುರಿಹಟ್ಟಿ ಹಾಕಿ ಜಾನುವಾರುಗಳನ್ನು ಮೇಯಲು ಬಿಡುತ್ತಾರೆ. ಕಳೆದ ಮೂರು ದಿನಗಳ ಹಿಂದೆ ಸಿದ್ದಿಕೇರಿಯ ಕೋಲ್ಕಾರ ಅಯ್ಯಪ್ಪ ಎಂಬುವವರ ಹೊಲಕ್ಕೆ ಆಗಮಿಸಿ ಅಲ್ಲಿಯೆ ಕುರಿಹಟ್ಟಿ ಹಾಕಲಾಗಿತ್ತು.
ಜಾನುವಾರುಗಳನ್ನು ರಾತ್ರಿ ಹೊಲದಲ್ಲಿ ಕಟ್ಟಿ ಹಾಕಿದಾಗ ಮಧ್ಯರಾತ್ರಿ ಸುರಿದ ಮಳೆ ಹಾಗೂ ಸಿಡಿಲಿಗೆ ಜಾನುವಾರು ಮೃತಪಟ್ಟಿವೆ ಎಂದು ಗೊತ್ತಾಗಿದೆ.