LOCAL NEWS : ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಮಾನಸಿಕ ಹಾಗೂ ದೈಹಿಕ ಬಲವರ್ಧನೆ : ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅಂಗಡಿ
ಕುಕನೂರು : ‘ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಮಾನಸಿಕ ಹಾಗೂ ದೈಹಿಕ ಬಲವರ್ಧನೆಗೆ ಸಹಾಯಕಾರಿಯಾಗಲಿದೆ’ ಎಂದು ತಾಲೂಕ ದೈಹಿಕ ಶಿಕ್ಷಣಾಧಿಕಾರಿಗಳು ವೀರಭದ್ರಪ್ಪ ಅಂಗಡಿ ಅಭಿಪ್ರಾಯಪಟ್ಟರು.
ತಾಲೂಕಿನ ಚೆಂಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಯಡಿಯಾಪೂರ-ಕುಕನೂರ ನಗರ ಅಂತರ್ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಸಮಾರಂಭ ನಡೆಯಿತು.
ಈ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕ್ರೀಡೆಗಳು ದೈಹಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಒತ್ತಡವನ್ನು ಕಡಿಮೆ ಮಾಡಲು, ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಇದ್ದಿದ್ದೇ ಅದನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಈ ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷ & ಮಹೇಶ್ ಸಬರದ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೆಂಡೂರುನ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕ ಬಸವರಾಜ್ ಹೋಳಗುಂದಿ, ಮಾರುತೇಶ್ ತಳವಾರ್, ಷಡಾಕ್ಷರ ಮಕಾನದಾರ್, ಅಲ್ತಾಫ್ ಹುಸೇನ್ ಹಾಗೂ ದೈಹಿಕ ಶಿಕ್ಷಕ ವರ್ಗದವರು, ಊರಿನ ಗುರು ಹಿರಿಯರು, ಕ್ರೀಡಾ ಪ್ರೇಮಿಗಳು , ಕ್ರೀಡಾಪಟುಗಳಿದ್ದರು.